More

    ಪಟ್ಟಣ ಪಂಚಾಯತಿ ಅಧ್ಯಕ್ಷೆಯನ್ನು ಬಲಿ ಪಡೆದ ಕರೊನಾ! ಅಧಿಕಾರ ಸ್ವೀಕರಿಸಿ ಆರೇ ತಿಂಗಳಲ್ಲಿ ಕೊನೆಯುಸಿರು

    ಕೊಡಗು: ರಾಜ್ಯಾದ್ಯಂತ ಕರೊನಾ ಹಾವಳಿ ಹೆಚ್ಚಾಗಿದ್ದು, ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ಬಲಿಯಾಗಲಾರಂಭಿಸಿದ್ದಾರೆ. ಅನೇಕ ಅಧಿಕಾರಿಗಳು ಸೇರಿ ಜನಪ್ರತಿನಿಧಿಗಳೂ ಸೋಂಕಿನಿಂದಾಗಿ ಕೊನೆಯುಸಿರೆಳೆಯುತ್ತಿದ್ದು, ಇದೀಗ ಸೋಮವಾರಪೇಟೆಯ ಪಟ್ಟಣ ಪಂಚಾಯತಿ ಅಧ್ಯಕ್ಷೆಯನ್ನೂ ಸೋಂಕು ಬಲಿ ಪಡೆದುಕೊಂಡಿದೆ.

    ಸೋಮವಾರಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ನಳಿನಿ ಗಣೇಶ್ (57) ಮೃತ ದುರ್ದೈವಿ. ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು, ಮಡಿಕೇರಿ ಜಿಲ್ಲಾ‌ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಬುಧವಾರದಂದು ಕೊನೆಯುಸಿರೆಳೆದಿದ್ದಾರೆ.

    ನಳಿನಿ ಅವರು ಪಟ್ಟಣ ಪಂಚಾಯತಿಗೆ ಹಲವು ಬಾರಿ ಸದಸ್ಯೆಯಾಗಿ ಚುನಾಯಿತರಾಗಿದ್ದರು. ಕಳೆದ ನವೆಂಬರ್​ನಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಅವರ ಬದುಕು ಕೊನೆಯಾಗಿದೆ.

    ವಿಜಯಪುರದಲ್ಲಿ ಬ್ಲಾಕ್ ಫಂಗಸ್​ಗೆ ಮೊದಲ ಸಾವು! ಗ್ರಾಮ ಪಂಚಾಯತಿ ಸದಸ್ಯನನ್ನೇ ಬಲಿ ಪಡೆದ ಫಂಗಸ್

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಹೆಂಡತಿ, ಮಗುವನ್ನು ನೋಡುವುದಕ್ಕಾಗಿ ಬಸ್ಸನ್ನೇ ಕದ್ದ! 4 ಜಿಲ್ಲೆ ದಾಟಿದ ನಂತರ ಸಿಕ್ಕಿಹಾಕಿಕೊಂಡಿದ್ದೇ ರೋಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts