More

    ಮಳೆ ಆಶ್ರಿತ ಬೆಳೆಗಳಿಗೆ ಪರಿಹಾರ

    ಚೌಳಹಿರಿಯೂರು: ಬರ ಸಮೀಕ್ಷೆ ಮಾಹಿತಿ ಆಧರಿಸಿ ಫ್ರೂಟ್ಸ್ ಐ.ಡಿ ಆಧಾರದ ಮೇಲೆ ಮಳೆ ಆಶ್ರಿತ ಬೆಳೆಗಳಿಗೆ ಪರಿಹಾರ ಪಾವತಿಸಲು ಸರ್ಕಾರ ನಿರ್ಧರಿಸಿದೆ ಎಂದು ನಾಡಕಚೇರಿ ಉಪತಹಸೀಲ್ದಾರ್ ರಾಜೇಂದ್ರ ತಿಳಿಸಿದ್ದಾರೆ.

    ರೈತರ ಪಹಣಿ, ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆ ತಾಳೆಯಾಗುವ ಪ್ರಕರಣ, ರೈತರ ಆಧಾರ್ ಕಾರ್ಡ್, ಪಹಣಿಯಲ್ಲಿ ಇರುವ ಮತ್ತು ಪರಿಹಾರ ಪಡೆಯಬೇಕಾದ ವ್ಯಕ್ತಿಯ ಹೆಸರಿಗೂ ವ್ಯತ್ಯಾಸ ಇರುವ ಪ್ರಕರಣಗಳನ್ನು ಪರಿಶೀಲಿಸಲಾಗುವುದು. ಅಲ್ಲದೇ ಪಹಣಿ ವಿಸ್ತೀರ್ಣ ಹಾಗೂ ಎ್ ಐ.ಡಿ ನೋಂದಣಿ ಪ್ರಕರಣಗಳಲ್ಲಿ ವ್ಯತ್ಯಾಸ ಇರುವ ಪ್ರಕರಣಗಳನ್ನು ಜ.14ರೊಳಗೆ ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.
    ರೈತರು ತಮ್ಮ ಜಮೀನು ತಮ್ಮದೇ ಎ್ ಐ.ಡಿಗೆ ನೋಂದಣಿಯಾಗಿದೆಯೇೀ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಒಂದುವೇಳೆ ರೈತರು ಖಾತೆಯ ಜಮೀನು ತಪ್ಪಾಗಿ ಬೇರೆ ವ್ಯಕ್ತಿಯ ಎ್ ಐ.ಡಿಗೆ ನೋಂದಣಿ ಆಗಿದ್ದರೆ ಜ.14 ಬೆಳಗ್ಗೆ 11ರೊಳಗೆ ಲಿಖಿತ ಆಕ್ಷೇಪಣೆಯನ್ನು ಸಂಬಂದಿಸಿದ ಗ್ರಾಮ ಆಡಳಿತ ಅಧಿಕಾರಿಗೆ ಸಲ್ಲಿಸಬೇಕು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts