More

    ಮಣ್ಣು ಪರೀಕ್ಷೆಯಿಂದ ಉತ್ತಮ ಬೆಳೆ ಸಾಧ್ಯ

    ಅರಟಾಳ: ರಿವಾರ್ಡ್ ಯೋಜನೆಯಡಿ ತೆಲಸಂಗ ಹೋಬಳಿ ವ್ಯಾಪ್ತಿಯ 4,640 ಹೆಕ್ಟೇರ್ ಭೂಪ್ರದೇಶದಲ್ಲಿ ಜಲಾನಯನ ಯೋಜನೆಯಿದ್ದು, ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಬೆಳೆ ಬೆಳೆಯಬಹುದು ಎಂದು ಕೃಷಿ ಸಹಾಯಕ ರವಿಕುಮಾರ ಬಂಗಾರಿ ಹೇಳಿದರು.

    ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಶುಕ್ರವಾರ ರೈತರಿಗೆ ಮಣ್ಣು ಪರೀಕ್ಷೆ ಪತ್ರಗಳನ್ನು ವಿತರಿಸಿ ಮಾತನಾಡಿ, ಮಣ್ಣು ಪರೀಕ್ಷೆಯಿಂದ ಯಾವ ಬೆಳೆ ಬೆಳೆದರೆ ಉತ್ತಮ ಇಳುವರಿ ಬರುತ್ತದೆ ಎಂಬುವುದು ತಿಳಿಯುತ್ತದೆ. ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿ ಮೂಲಕ ಜಲಾನಯನ ಪ್ರದೇಶಗಳನ್ನು ಪುನಃಶ್ಚೇತನಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

    ಕೃಷಿ ಇಲಾಖೆ ಸಿಬ್ಬಂದಿ ಹರ್ಷಿತಾ ಜಿ.ಟಿ., ಅಕ್ಷತಾ ಪೂಜಾರಿ, ರಾಹುಲ್ ವಾಲಿಕಾರ, ವಿಠ್ಠಲ ತೋರಗಲ್, ಅಭಿಷೇಕ ದಳವಾಯಿ, ಗಿರಿಮಲ್ಲ ಹೊನಗೌಡ, ಗೌಡಪ್ಪ ಗೂಳಪ್ಪನವರ, ಶಿವಲಿಂಗ ಹೊನಗೌಡ, ನಿಂಗಪ್ಪ ದಡ್ಡಿ, ತಮ್ಮಣ್ಣ ಗೂಳಪ್ಪನವರ, ನಿಂಗಪ್ಪ ಹಿಪ್ಪರಗಿ, ಮಕ್ಬುಲ್ ಮುಲ್ಲಾ, ಮಹಾದೇವ ಅಥಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts