More

    ಸಮಾಜದ ತಪ್ಪು ತಿದ್ದುವ ಕೆಲಸ ಶ್ಲಾಘನೀಯ

    ಕುಕನೂರು: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ: ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯ ಕೃಷ್ಣಮೂರ್ತಿ ಅಭಿಮತ

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣನವರ, ಪತ್ರಕರ್ತರು ಬರೆಯುವ ಲೇಖನಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು.

    ಸಮಾಜದ ತಪ್ಪುಗಳನ್ನು ತಿದ್ದುವ ಪತ್ರಕರ್ತರ ಕೆಲಸ ಶ್ಲಾಘನೀಯ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಂತೆ ರೀತಿ ಪತ್ರಿಕಾ ರಂಗ ಕೂಡ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

    ಹಿರಿಯ ಸಾಹಿತಿ ಕೆ.ಬಿ.ಬ್ಯಾಳಿ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಪತ್ರಿಕಾ ರಂಗ ಬುನಾದಿಯಾಗಿದೆ. ಪತ್ರಿಕಾ ರಂಗ ಗಟ್ಟಿಯಾದರೆ ಪ್ರಜಾಪ್ರಭುತ್ವ ಗಟ್ಟಿ ಆದಂತೆ. ಸೆ.15ರಂದು ಪ್ರಜಾಪ್ರಭುತ್ವ ದಿನ.

    ಅಂದು ಸಿಎಂ ಸಂವಿಧಾನದ ಪೀಠಿಕೆ ಪ್ರಸ್ತಾವನೆ ವಿತರಣೆ ಆಗುತ್ತಿದೆ. ಆ ನಿಟ್ಟಿನಲ್ಲಿ ನಾನು ಸಂವಿಧಾನದ ಪೀಠಿಕೆಯುಳ್ಳ ಮುಮೆಂಟೊ ತಯಾರಿಸಿ ಗೌರವಾರ್ಥವಾಗಿ ಗಣ್ಯರಿಗೆ ವಿತರಿಸುತ್ತಿದ್ದೇನೆ ಎಂದರು.

    ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಹಿರಿಯ ಸಾಹಿತಿ ಆರ್.ಪಿ ರಾಜೂರು, ಸಮಾಜ ಸೇವಕ ಶಿವಣ್ಣ ರಾಯರೆಡ್ಡಿ, ಪತ್ರಕರ್ತ ಅಲ್ಲಾವುದ್ದೀನ್ ಎಮ್ಮಿ , ಸಂಘದ ತಾಲೂಕು ಅಧ್ಯಕ್ಷ ನಾಗರಾಜ ಬೆಣಕಲ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ, ಪಪೂ ಕಾಲೇಜಿನ ಪ್ರಾಚಾರ್ಯ ಈಶಪ್ಪ ಮಳಗಿ, ಎಂಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ಮುಖ್ಯಶಿಕ್ಷ ಕ ಎ.ಎಚ್.ಮುತ್ತಣ್ಣ, ಪ್ರಕಾಶ ಬೋರಣ್ಣನವರ, ಸಂಘದ ಉಪಾಧ್ಯಕ್ಷರಾದ ಬಸವರಾಜ ಕೊಡ್ಲಿ, ವೀರೇಶ ಇಟಗಿ, ಪತ್ರಕರ್ತ ಮುರಾರಿ ಭಜಂತ್ರಿ ರುದ್ರೇಶ್ ಆರುಬೆರಳಿನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts