More

    ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ: ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯ ಕೃಷ್ಣಮೂರ್ತಿ ಅಭಿಮತ

    ಮಂಡ್ಯ: ಮನುಷ್ಯನಿಗೆ ಮುಖ್ಯವಾಗಿ ಗುರಿ ಇರಬೇಕು. ಇಲ್ಲದಿದ್ದಲ್ಲಿ ಬದುಕಿನಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಭಾವಸಾರ ಕ್ಷತ್ರಿಯ ಸಮಾಜದ ಸದಸ್ಯ ಕೃಷ್ಣಮೂರ್ತಿ ಎನ್.ಘನಾತೆ ತಿಳಿಸಿದರು.
    ನಗರದ ವಿಠಲ ಸಮುದಾಯ ಭವನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಕ್ಷತ್ರಿಯ ವಿದ್ಯಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕೃಷ್ಣ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಗುರಿ ಸಾಧಿಸಲು ಸರಿಯಾದ ಗುರು ಇರಬೇಕು. ಆದ್ದರಿಂದ ಸಮರ್ಥ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಪ್ರಸ್ತುತ ದಿನಗಳಲ್ಲಿ ನಾವು ವಿಜ್ಞಾನದಲ್ಲಿ ತುಂಬಾ ಮುಂದೆ ಇದ್ದೇವೆ. ಇದರಲ್ಲಿ ಮೊಬೈಲ್ ಬಳಕೆ ಕೂಡ ಒಂದಾಗಿದೆ. ಮೊಬೈಲ್ ಬಳಕೆಯಲ್ಲಿ ಉಪಯೋಗ ಮತ್ತು ದುರುಪಯೋಗ ಎರಡೂ ಇದೆ. ಇದನ್ನು ಮಕ್ಕಳು ಸರಿಯಾಗಿ ಬಳಸುತ್ತಿದ್ದಾರೆಯೇ ಎಂಬುದನ್ನು ಪಾಲಕರು ನಿಗಾ ವಹಿಸಬೇಕು. ನಿತ್ಯ ತರಗತಿಗೆ ಹೋಗುತ್ತಿದ್ದಾರೆಯೇ, ಯಾರ‌್ಯಾರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾರೆ ವಿಚಾರಗಳ ಬಗ್ಗೆಯೂ ಗಮನ ಹರಿಸುವುದು ಅವರ ಕರ್ತವ್ಯ ಎಂದು ಸಲಹೆ ನೀಡಿದರು.
    ಭಾವಸಾರ ಕ್ಷತ್ರಿಯ ಸಮಾಜದ ಕಸ್ತೂರಿ ಸುತ್ರಾವೆ, ಆನಂದ ನಾಯಕ್, ಬಿ.ಎನ್.ಹರ್ಷ ಪೇಟ್ಕರ್, ಎನ್.ನಾಮದೇವ್ ರೇಳೇಕರ್, ಕೆ.ಪದ್ಮಾವತಿ ಕ್ಷೀರಸಾಗರ್, ಆರ್.ಉಮೇಶ್‌ರಾವ್ ರೇಳೇಕರ್, ಕೆ.ಕೆ.ಲಕ್ಷ್ಮಣರಾವ್ ಕಲೋಸೆ, ಎಸ್.ವಿನಯ್ ಘನಾತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts