More

    ವಸಾಹತುಶಾಹಿಯಲ್ಲಿ ನಲುಗುತ್ತಿದೆ ಸಮಾಜ

    ಚಿಕ್ಕಮಗಳೂರು: ಭಾರತಕ್ಕೆ ರಾಜಕೀಯವಾಗಿ ಸ್ವಾತಂತ್ರ್ಯ ಲಭಿಸಿದೆ ಹೊರತು ಸಾಂಸ್ಕೃತಿಕವಾಗಿ ವಸಾಹತುಶಾಹಿಯಡಿ ನಲುಗುತ್ತಲೇ ಇದ್ದೇವೆ. ತಲ್ಲಣಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಆಗಬೇಕಿದೆ ಎಂದು ಸಾಹಿತಿ ಡಾ. ನಟರಾಜ್ ಬೂದಾಳ್ ಹೇಳಿದರು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕ್ಯಾತನಬೀಡು ಪ್ರತಿಷ್ಠಾನ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವರ್ತಮಾನದ ತಲ್ಲಣಗಳಿಗೆ ಬುದ್ಧ, ಬಸವ ಮಾರ್ಗ ವಿಷಯ ಕುರಿತ ಸಂವಾದದಲ್ಲಿ ಮಾತನಾಡಿದರು.
    ವರ್ತಮಾನದ ತಲ್ಲಣಗಳಿಗೆ ಮುಕ್ತಿ ದೊರಕಬೇಕಾದರೆ ಭಗವಾನ್ ಬುದ್ಧ ಹೇಳಿದಂತೆ ಶೂದ್ರ ಸಮುದಾಯದ ಜನ ನಮ್ಮೊಳಗಿರುವ ದೀಪ ಬೆಳಗಿಸಿಕೊಳ್ಳಬೇಕು. ಬದುಕಿನ ಸಾಂಸ್ಕೃತಿಕ ಅಸ್ಮಿತೆ ಗುರುತಿಸಿಕೊಳ್ಳಬೇಕು. ಬಸವಾದಿ ಶರಣರು ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು ಎಂದು ತಿಳಿಸಿದರು.
    ಎಲ್ಲ ತಲ್ಲಣಗಳ ಮುಕ್ತಿಗೂ ನಿಮ್ಮೊಳಗಿರುವ ದೀಪವನ್ನು ಹಚ್ಚಿಕೊಳ್ಳಿ, ಆಗ ನಿಮಗೆ ನಡೆಯುವ ದಾರಿ ಕಾಣುತ್ತದೆ ಎಂದು ಬುದ್ಧ ಮತ್ತು ಬಸವ ಹೇಳಿದ್ದಾರೆ. ತಲ್ಲಣಗಳಿಗೆ ಬುದ್ಧ ಅಥವಾ ಬಸವಣ್ಣ ಮುಕ್ತಿ ಕೊಡಲಾಗುವುದಿಲ್ಲ. ನಾವು ನಮ್ಮೊಳಗಿನ ದೀಪ ಹಚ್ಚಿಕೊಳ್ಳದಿದ್ದರೆ ತಲ್ಲಣಿಸುತ್ತಲೇ ಇರಬೇಕಾಗುತ್ತದೆ ಎಂದರು.
    ಭಾರತೀಯರು ಬಹಳ ಸುಖ, ಸಂತೋಷ ಮತ್ತು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದು ಪ್ರಪಂಚದ ಎದುರು ಬಿಂಬಿಸಲಾಗುತ್ತಿದೆ. ಆದರೆ ನಮ್ಮ ಬಾಳು ಆತಂಕದಲ್ಲಿ ಒದ್ದಾಡುತ್ತಿದೆ. ಸಾವಿರಾರು ವರ್ಷಗಳಿಂದ ತುಳಿಸಿಕೊಳ್ಳುತ್ತಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು, ರೈತ ಸಂಘದ ಅಧ್ಯಕ್ಷ ಗುರುಶಾಂತಪ್ಪ, ಕಾಂಗ್ರೆಸ್ ಮುಖಂಡ ಎ.ಎನ್.ಮಹೇಶ್, ಶರಣ ಸಾಹಿತ್ಯ ಪರಿಷತ್ತಿನ ಸಂಚಾಲಕ ವಿಜಯಕುಮಾರ್, ಕೃಷಿಕ ನಾಗೇನಹಳ್ಳಿ ಚಂದ್ರಣ್ಣ, ಸಾಹಿತಿ ಪ್ರದೀಪ್ ಕೆಂಜಿಗೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್, ಸಂಗಮ ಪ್ರತಿಷ್ಠಾನದ ಎಂ.ಸಿ.ಶಿವಾನಂದಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts