More

    ಭಗವದ್ಗೀತೆಯಿಂದ ಸಾಮಾಜಿಕ ಸಾಮರಸ್ಯ

    ಕುಮಟಾ: ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರೀಯ ಭಾವೈಕ್ಯವನ್ನು ಸಮಾಜದಲ್ಲಿ ಕಾಣಲು ಭಗವದ್ಗೀತೆಯಿಂದ ಸಾಧ್ಯವಾಗಿದೆ ಎಂದು ಸಂಸ್ಕೃ ಉಪನ್ಯಾಸಕಿ ಶ್ರೀದೇವಿ ಭಟ್ ಹೇಳಿದರು.

    ಪಟ್ಟಣದ ಹೆರವಟ್ಟಾದ ವರದ ವಿಠ್ಠಲ ದೇವಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಗೀತಾಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವರ್ನವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು, ಕಳೆದ 14 ವರ್ಷಗಳಿಂದ ಭಗವದ್ಗೀತಾ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ನಮಗೆಲ್ಲ ಶ್ರೀಗಳ ಅಭಯವಿದೆ. ಅದಕ್ಕಾಗಿ ಭಗವದ್ಗೀತೆಯ ಪಠಣ ಕಾರ್ಯ ಸಾಂಗವಾಗಿ ಸಾಗಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಮಹಾಭಾರತದ ಯುದ್ಧ್ದಲ್ಲಿ ದುಷ್ಟರ ಸಂಹಾರಕ್ಕಾಗಿ, ಧರ್ಮ ಸಂಸ್ಥಾಪನೆಗಾಗಿ ಭಗವಂತನ ಕೃಪೆ ಪಾಂಡವರಿಗೆ ದೊರಕಿತು, ಸತ್ಯ ಧರ್ಮಕ್ಕೆ ಜಯವಾಯಿತು. ಸಮಾಜದಲ್ಲಿ ದುಷ್ಟರು ಅನೇಕರಿರಬಹುದು, ಆದರೆ, ಸಜ್ಜನರೂ ಕೆಲವರಿದ್ದಾರೆ. ಸಮಾಜ ಸ್ವಾಸ್ಥ್ಯಕ್ಕೆ ಸಜ್ಜನರೇ ಕಾರಣರಾಗುತ್ತಾರೆ ಎಂದರು.

    ಕಾರ್ಯಕ್ರಮದಲ್ಲಿ ಸುಧಾ ಶಾನಭಾಗ, ಮಹಾಲಕ್ಷ್ಮಿ ಹೆಗಡೆ, ಮಹಾಬಲೇಶ್ವರ ಭಟ್, ಗಣೇಶ್ ಭಟ್, ಮಾತೃಮಂಡಳಿ ಸದಸ್ಯರು ಇದ್ದರು. ಭಗವದ್ಗೀತಾ ಅಭಿಯಾನ ಸಮಿತಿಯ ಕಾರ್ಯದರ್ಶಿ ಆನಂದ ವೈ. ನಾಯ್ಕ ಸ್ವಾಗತಿಸಿದರು. ಜಯಾ ಶಾನಭಾಗ ವಂದಿಸಿದರು.

    ಬಹುಮಾನ ವಿತರಣೆ: ಭಗವದ್ಗೀತೆಯ 18 ಅಧ್ಯಾಯದ ಶ್ಲೋಕಗಳನ್ನು ಪಠಣ ಮಾಡಲಾಯಿತು. ತಾಲೂಕು ಭಗವದ್ಗೀತೆ ಅಭಿಯಾನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ, ಶ್ರೇಯಾ ಗಿರೀಶ ಹೆಬ್ಬಾರ ಪ್ರಥಮ, ನಂದಿನಿ ನಾರಾಯಣ ಶಾನಭಾಗ ದ್ವಿತೀಯ, ನಂದಿನಿ ನಾಗು ಗೌಡ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಸ್ಮೃತಿ ಲಕ್ಷ್ಮೀನಾರಾಯಣ ಶಾನಭಾಗ ಪ್ರಥಮ, ನಂದಿತಾ ಸುರೇಶ್ ಭಟ್ ದ್ವಿತೀಯ, ಹಾಗೂ ನಮೃತ ಗಜಾನನ ಶಾನಭಾಗ ತೃತೀಯ ಸ್ಥಾನ ಪಡೆದರು. ಪಿಯು ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಶ್ರೇಯಾ ವಿಷ್ಣು ಶಾನಭಾಗ ಪ್ರಥಮ, ಶಿಲ್ಪಾ ಡಿ. ಭಟ್ ದ್ವಿತೀಯ ಸ್ಥಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಿಂದ ಸ್ನೇಹ ಉದಯ ನಾಯ್ಕ ಪ್ರಥಮ, ಕೃತಿಕಾ ಮಹೇಶ ಭಟ್ ದ್ವಿತೀಯ, ಶ್ರೇಯಾ ದಿನೇಶ ಶೇಟ್ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಕುಮಾರಿ ಮುಕ್ತ ಪ್ರಥಮ, ಮಹಾಲಸಾ ಪೈ ದ್ವಿತೀಯ, ಭೂಮಿಕ ಸತೀಶ ತೃತೀಯ ಸ್ಥಾನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts