ಕುಮಟಾ: ವಿದ್ಯಾರ್ಥಿಗಳು ಪಠ್ಯ ಕಲಿಕೆಯ ಜತೆಗೆ ಉತ್ತಮ ಹವ್ಯಾಸ ಹಾಗೂ ಕ್ರೀಡಾ ಪ್ರತಿಭೆಯನ್ನೂ ಒಳಗೊಂಡಿದ್ದರೆ ಶ್ರೇಷ್ಠ ವ್ಯಕ್ತಿತ್ವ ಹೊಂದಬಹುದಾಗಿದೆ ಎಂದು ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಹೇಳಿದರು.
ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ ಹಾಗೂ ಡಯಟ್ ಸಹಯೋಗದಲ್ಲಿ ಸಿವಿಎಸ್‌ಕೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ಬುಧವಾರ ಜಿಲ್ಲಾಮಟ್ಟದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮ ಎಕ್ಸಪೋ 2024 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಕೆಯ ಹಂತದಲ್ಲೇ ನಾಯಕತ್ವ ಗುಣ ಹಾಗೂ ಸಾಧನೆಯ ರಹಸ್ಯಗಳನ್ನು ಅರಿತಿರುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆದರೆ ಅವರ ಸಾಧನೆಯೂ ಭವಿಷ್ಯದಲ್ಲಿ ಸ್ಥಾಯಿಯಾಗಿರುತ್ತದೆ. ಕಲಿಕೆಯನ್ನು ಆನಂದಿಸಿದರೆ ಅದು ಫಲಿತಾಂಶದ ಮೇಲೆ ಪ್ರತಿಫಲಿಸುತ್ತದೆ. ಯಾವುದೇ ವ್ಯತಿರಿಕ್ತ ಪರಿಸ್ಥಿತಿಯನ್ನೂ ಹಿಂದಕ್ಕೆ ಮುಂದಕ್ಕೆ ಸಾಗುವ ದೃಢತೆ ಬೆಳೆಸಿಕೊಳ್ಳಿ, ಜೀವನ ಯಾವುದೇ ಪರೀಕ್ಷೆಯ ಫಲಿತಾಂಶ, ಘಟನೆಗಳಿಗಿಂತ ದೊಡ್ಡದಿದೆ ಎಂದು ತಿಳಿದು ಗಟ್ಟಿ ಹೆಜ್ಜೆಯಿಡಿ ಎಂದು ಶುಭ ಹಾರೈಸಿದರು.
ಇದಕ್ಕೂ ಮುನ್ನ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಹೊಸಹೊಸ ಚಿಂತನೆಗಳೊAದಿಗೆ ತಯಾರಿಸಿದ್ದ ಆಯ್ದ ವಿಜ್ಞಾನ ಮಾದರಿಗಳ ಪ್ರದರ್ಶನ ವೀಕ್ಷಿಸಿ ಮಾಹಿತಿ ಪಡೆದರು. ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ವಿದ್ಯಾರ್ಥಿಗಳನ್ನು ಬೆನ್ನುತಟ್ಟಿ ಶ್ಲಾಘಿಸಿದರು.
ವೇದಿಕೆಯಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಎಸ್. ವಿ. ನಾಯಕ, ಕೊಂಕಣ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ವಿಠ್ಠಲ ಆರ್.ನಾಯಕ, ಗೌರವ ಕಾರ್ಯದರ್ಶಿ ಮುರಲೀಧರ ಪ್ರಭು, ತಾಪಂ ಇಒ ರಾಜೇಂದ್ರ ಭಟ್, ಅಂಕೋಲಾ ಬಿಇಒ ಶಾಂತೇಶ ನಾಯಕ, ಶೈಕ್ಷಣಿಕ ಸಲಹೆಗಾರ ಆರ್. ಎಚ್. ದೇಶಭಂಡಾರಿ, ವಿಧಾತ್ರಿ ಅಕಾಡೆಮಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ನಿವೃತ್ತ ಪ್ರಾಚಾರ್ಯ ರತನ್ ಗಾಂವಕರ ಇನ್ನಿತರರು ಇದ್ದರು. ಮುಖ್ಯ ಶಿಕ್ಷಕಿ ಸುಮಾ ಪ್ರಭು ಸ್ವಾಗತಿಸಿದರು. ಸಹಶಿಕ್ಷಕ ವೃಂದ ನಿರ್ವಹಿಸಿದರು.
ಇದನ್ನೂ ಓದಿ: