More

    ಸಮಸ್ಯೆ ಪರಿಹರಿಸಲು ಆಶಾ ಕಾರ್ಯಕರ್ತೆಯರ ಮನವಿ

    ಕುಮಟಾ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಮನೆ ಮನೆ ಸಮೀಕ್ಷೆಗೆ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಹಾಗೂ ಇತರರು ಉಪತಹಸೀಲ್ದಾರ್ ಸತೀಶ ಗೌಡ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಿದರು.

    ಗ್ಯಾರಂಟಿ ಯೋಜನೆಗಳ ಫಲಾನುಭವಿ ಸಮೀಕ್ಷೆಗೆ ಸಂಬಂಧಿಸಿ ಇಲಾಖೆಯಿಂದ ಆಶಾ ಹಾಗೂ ಸುಗಮ ಕಾರ್ಯಕರ್ತೆಯರು, ಸಿಬ್ಬಂದಿಗೆ ಮೊಬೈಲ್‌ಫೋನ್ ಹಾಗೂ ಡೇಟಾ ನೀಡುತ್ತಿಲ್ಲ. ಮೊಬೈಲ್ ತಾಂತ್ರಿಕತೆಯಲ್ಲಿ ಹಿಂದುಳಿದ ಕಾರ್ಯಕರ್ತೆಯರಿಗೆ ಪರ್ಯಾಯ ಸಮೀಕ್ಷೆಗೆ ವ್ಯವಸ್ಥೆ ಮಾಡಬೇಕು. ಪ್ರೋತ್ಸಾಹಧನ ಹೆಚ್ಚಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮವೂ ಇರುವುದರಿಂದ ಕೆಲಸದ ಒತ್ತಡದಿಂದ ಚಟುವಟಿಕೆ ಆಧಾರಿತ ಕೆಲಸದಲ್ಲಿ ಪ್ರೋತ್ಸಾಹಧನ ಕೈತಪ್ಪದಂತೆ ನೋಡಿಕೊಳ್ಳಬೇಕು. ಈಗಾಗಲೇ ಸರ್ಕಾರದ ಆದೇಶದಂತೆ ಪ್ರತಿ ಆಶಾ ಕಾರ್ಯಕರ್ತೆಯರಿಗೆ 100-120 ಮನೆ ಸಮೀಕ್ಷೆ ನೀಡಲಾಗಿದೆ. ಅನ್ಯ ಸಿಬ್ಬಂದಿ ಮಾಡದೇ ಇರುವ ಸಮೀಕ್ಷೆಯ ಹೊರೆಯನ್ನು ಆಶಾ ಮತ್ತು ಸುಗಮ ಕಾರ್ಯಕರ್ತೆಯರಿಗೆ ಹೊರಿಸಬಾರದು ಎಂದು ಮನವಿಯಲ್ಲಿ ಕೋರಲಾಗಿದೆ.

    ಜೋಸ್ಪೀನ್ ಫರ್ನಾಂಡೀಸ್ ಕತಗಾಲ, ಅಂಕಿತಾ ನಾಯ್ಕ ಕುಮಟಾ. ಕಾಗಾಲದ ಗಂಗು ನಾಯ್ಕ, ಜಯಶ್ರೀ ನಾಯ್ಕ, ಪವಿತ್ರಾ ರೊಡ್ರಗೀಸ್, ಶೋಭಾ ಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts