More

    VIDEO| ಕಾಳಿಂಗ ಸರ್ಪ ಹಿಡಿಯುವಾಗ ಬಚಾವಾಗಿದ್ದೇ ಆಶ್ಚರ್ಯ! ಶಿವಮೊಗ್ಗದ ಈ ಸ್ನೇಕ್​ ಕ್ಯಾಚರ್​ ಮಾಡಿದ ಚಮತ್ಕಾರ ನೋಡಿ

    ಶಿವಮೊಗ್ಗ: ಹಾವೆಂದರೆ ಮೂರು ಮೈಲು ದೂರ ಓಡುವವರಿರುತ್ತಾರೆ. ಅದರಲ್ಲೂ ಕಾಳಿಂಗ ಸರ್ಪವೆಂದರಂತೂ ಮುಗಿದೇ ಹೋಯಿತು. ಎಷ್ಟೋ ಜನರು ಹಾವು ನೋಡಿ ಹದಿನೈದು ದಿನವಾದರೂ ಅದೇ ಹಾವೇ ಕನಸಿನಲ್ಲಿ ಬರುತ್ತಿತ್ತು ಎನ್ನುವವರೂ ಇದ್ದಾರೆ. ಆದರೆ ಶಿವಮೊಗ್ಗದ ಈ ಸ್ನೇಕ್​ ಕ್ಯಾಚರ್​ ಮಾಡಿದ ಚಮತ್ಕಾರವನ್ನು ನೀವು ನೋಡಲೇ ಬೇಕು. ಮಾರುದ್ದದ ಕಾಳಿಂಗ ಸರ್ಪವನ್ನು ಹಿಡಿಯುವಾಗ ಈ ವ್ಯಕ್ತಿ ಬಚಾವಾಗಿದ್ದೇ ದೊಡ್ಡ ಆಶ್ಚರ್ಯ.

    ಇದನ್ನೂ ಓದಿ: ಡ್ರಗ್ಸ್​ ಪ್ರಕರಣದಲ್ಲಿ ಸಚಿವರ ಅಳಿಯನ ಹೆಸರು; ವಿಚಾರಣೆ ನಡೆಸಿದ ಎನ್​ಸಿಬಿ ಅಧಿಕಾರಿಗಳು

    ಶಿವಮೊಗ್ಗ ಜಿಲ್ಲೆಯ ಕೋಡೂರಿನ ಉರಗ ತಜ್ಞ ಪ್ರಭಾಕರ ಈ ರೀತಿ ಹಾವನ್ನಿಡಿದಿರುವ ವ್ಯಕ್ತಿ. ನೀರಿನ ಹಳ್ಳವೊಂದರಲ್ಲಿ ಹಾವಿದೆ. ಸುಮಾರು ಎರಡು ಮಾರಿಗಿಂತ ಹೆಚ್ಚೇ ಉದ್ದದ ಕಾಳಿಂಗ ಸರ್ಪವದು. ಅದನ್ನು ಹಿಡಿಯಲು ಮುಂದಾದ ಪ್ರಭಾಕರ ಕೋಲಿನಿಂದ ಹಾವಿನ ತಲೆಯ ಬದಿ ಹಿಡಿದುಕೊಳ್ಳುತ್ತಾರೆ. ಹಾವನ್ನು ನೀರಿನಿಂದ ಹೊರಗೆ ತೆಗೆಯುವಷ್ಟರಲ್ಲಿ ಇನ್ನೊಬ್ಬ ಜತೆಗಾರ ಹಾವಿನ ಬಾಲವನ್ನು ಹಿಡಿದುಕೊಂಡರೆ, ಪ್ರಭಾಕರ ಹಾವಿನ ತಲೆಯ ಭಾಗವನ್ನು ಕೈನಲ್ಲಿ ಹಿಡಿಯುತ್ತಾರೆ. ಅಷ್ಟರಲ್ಲಿ ಹಾವು ಪ್ರಭಾಕರ ಅವರ ಕೈನಿಂದ ತಪ್ಪಿಸಿಕೊಂಡುಬಿಡುತ್ತದೆ.

    ಇದನ್ನೂ ಓದಿ: ಗೊರಿಲ್ಲಾಗಳಿಗೂ ಕರೋನಾ? ಅಮೆರಿಕಾದ ಜೂನಲ್ಲಿ ನಡೆದದ್ದೇನು?

    ಸಿಟ್ಟಿಗೆದ್ದ ಹಾವು ಮೈ ಮೇಲೆ ಎಗರಲು ಪ್ರಯತ್ನಿಸುತ್ತದೆ. ಅಷ್ಟರಲ್ಲಿ ಪ್ರಭಾಕರ ಕೂಡ ಬಿದ್ದು ಬಿಡುತ್ತಾರೆ. ಆದರೆ ಛಲ ಬಿಡದ ಅವರು ಹಾವನ್ನು ಮತ್ತೆ ತಮ್ಮ ವಶಕ್ಕೆ ಪಡೆದು, ಅದರ ತಲೆಯನ್ನು ಗಟ್ಟಿಯಾಗಿ ಹಿಡಿಯುತ್ತಾರೆ. ಪ್ರಭಾಕರ ಅವರ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸರ್ಕಾರ ಈ ರೀತಿಯ ಉರಗ ತಜ್ಞರಿಗೆ ಸಹಾಯ ಮಾಡಬೇಕು, ಅಗತ್ಯ ಸಾಮಾಗ್ರಿಗಳನ್ನು ಒದಗಿಸಿಕೊಡಬೇಕು ಎಂದು ಅನೇಕರು ಕಾಳಜಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಕಾಳಿಂಗ ಸರ್ಪದಿಂದ ಅವರು ಬಚಾವಾಗಿದ್ದು ಹೇಗೆ ಎಂದು ತಿಳಿಯಲು ಈ ವಿಡಿಯೋ ನೋಡಿ:

    ಕಾಳಿಂಗ ಸರ್ಪ ಹಿಡಿಯುವಾಗ ಬಚಾವಾಗಿದ್ದೇ ಆಶ್ಚರ್ಯ! ಶಿವಮೊಗ್ಗದ ಈ ಸ್ನೇಕ್​ ಕ್ಯಾಚರ್​ ಮಾಡಿದ ಚಮತ್ಕಾರ ನೋಡಿ

    ಮಧ್ಯರಾತ್ರಿ ಮಹಿಳೆಯ ಬರ್ಬರ ಹತ್ಯೆ: ಫೋನ್​ ಕರೆ ಸ್ವೀಕರಿಸಿದ ಮೃತಳ ಭಾವನಿಗೆ ಕಾದಿತ್ತು ಶಾಕ್​!

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts