More

    ಭಾರತದ ಸ್ಮತಿ ಮಂದನಾಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ

    ದುಬೈ: ಭಾರತದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ 2021ರ ಸಾಲಿನ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತದ ಆಟಗಾರರಿಗೆ ಯಾವುದೇ ಪ್ರಶಸ್ತಿ ಧಕ್ಕಿಲ್ಲ. ಇದರಿಂದ ಸ್ಮತಿ ಮಂದನಾ ಈ ಬಾರಿ ಐಸಿಸಿ ವರ್ಷದ ಪ್ರಶಸ್ತಿಗೆ ಭಾಜನರಾದ ಏಕೈಕ ಭಾರತೀಯರೆನಿಸಿದ್ದಾರೆ.

    ಮುಂಬೈನ 25 ವರ್ಷದ ಆಟಗಾರ್ತಿ ಸ್ಮತಿ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್‌ನ ಟಾಮಿ ಬೆಯುಮೊಂಟ್, ದಕ್ಷಿಣ ಆಫ್ರಿಕಾದ ಲೈಜೆಲ್ ಲೀ ಮತ್ತು ಐರ್ಲೆಂಡ್‌ನ ಗ್ಯಾಬಿ ಲೆವಿಸ್ ಅವರನ್ನು ಹಿಂದಿಕ್ಕಿದ್ದಾರೆ. ರಾಚೆಲ್ ಹೆಹೊಯಿ ಫ್ಲಿಂಟ್ ಟ್ರೋಫಿಯನ್ನು ಸ್ಮತಿ 2ನೇ ಬಾರಿಗೆ ಜಯಿಸಿದ್ದಾರೆ. ಈ ಮುನ್ನ 2018ರಲ್ಲೂ ಅವರಿಗೆ ಈ ಪ್ರಶಸ್ತಿ ಒಲಿದಿತ್ತು. ಭಾರತ ಟಿ20 ತಂಡದ ಉಪನಾಯಕಿಯಾಗಿರುವ ಸ್ಮತಿ ಈ ಮುನ್ನ ಐಸಿಸಿ ವರ್ಷದ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದರು.

    2021ರಲ್ಲಿ ಭಾರತ ಮಹಿಳಾ ತಂಡದ ನೀರಸ ನಿರ್ವಹಣೆಯ ನಡುವೆಯೂ ಸ್ಮತಿ ಕೆಲ ಆಕರ್ಷಕ ಇನಿಂಗ್ಸ್‌ಗಳನ್ನು ಆಡುವ ಮೂಲಕ ಗಮನಸೆಳೆದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 158 ರನ್ ಗುರಿ ಬೆನ್ನಟ್ಟುತ್ತಿದ್ದಾಗ ಸ್ಮತಿ ಅವರೊಬ್ಬರೇ ಅಜೇಯ 80 ರನ್ ಬಾರಿಸಿದ್ದರು. ಬಳಿಕ ಅಂತಿಮ ಟಿ20 ಪಂದ್ಯದಲ್ಲಿ 48 ರನ್ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್‌ನಲ್ಲೂ 78 ರನ್ ಸಿಡಿಸಿ ಗಮನಸೆಳೆದಿದ್ದರೆ, ಏಕದಿನ ಸರಣಿಯಲ್ಲಿ ಭಾರತ ಗೆದ್ದ ಏಕೈಕ ಪಂದ್ಯದಲ್ಲೂ 49 ರನ್ ಬಾರಿಸಿದ್ದರು. ಬಳಿಕ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 86 ರನ್ ಬಾರಿಸಿದ್ದರು. ಆಸೀಸ್ ವಿರುದ್ಧದ ಏಕೈಕ ಅಹರ್ನಿಶಿ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದರು.

    2021ರಲ್ಲಿ ಸ್ಮತಿ ಸಾಧನೆ
    *ಟೆಸ್ಟ್: 2
    ರನ್: 244
    100/50: 1/1
    ಸರಾಸರಿ: 61.00
    ಗರಿಷ್ಠ: 127
    *ಏಕದಿನ: 11
    ರನ್: 352
    100/50: 0/2
    ಸರಾಸರಿ: 35.20
    ಗರಿಷ್ಠ: 86
    *ಟಿ20: 9
    ರನ್: 255
    100/50: 0/2
    ಸರಾಸರಿ: 31.87
    ಗರಿಷ್ಠ: 70

    ಲೈಜೆಲ್ ಲೀಗೆ ಏಕದಿನ ಕ್ರಿಕೆಟರ್ ಗರಿ: ದಕ್ಷಿಣ ಆಫ್ರಿಕಾದ ಬ್ಯಾಟರ್ ಲೈಜೆಲ್ ಲೀ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿ ಜಯಿಸಿದ್ದಾರೆ. ಲೈಜೆಲ್ ಲೀ 2021ರಲ್ಲಿ ಆಡಿದ 11 ಏಕದಿನ ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕ ಸಹಿತ 632 ರನ್ ಬಾರಿಸಿದ್ದರು.

    ಭಾರತದ ಉದ್ಯಮಿ ಕೊಕೇನ್ ನೀಡಿ ಫಿಕ್ಸಿಂಗ್ ಆಮಿಷ ಒಡ್ಡಿದ್ದ, ಜಿಂಬಾಬ್ವೆ ಕ್ರಿಕೆಟಿಗ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts