More

    6.9 ಸೆಂ.ಮೀ. ಸಿಗರೇಟ್ ಮೇಲೆ 260 ಬಾರಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದು ಅರಿವು ಮೂಡಿಸುತ್ತಿರುವ ವಿದ್ಯಾರ್ಥಿ

    ರಾಮನಗರ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಎಚ್ಚರಿಕೆಯನ್ನು ಪದವಿ ಕಲಿಯುತ್ತಿರುವ ವಿದ್ಯಾರ್ಥಿ ಒಬ್ಬ ನೂರಕ್ಕೂ ಹೆಚ್ಚು ಬಾರಿ ಸಿಗರೇಟ್​ ಮೇಲೆ ಬರೆದು ಅರಿವು ಮೂಡಿಸುವುದರ ಜತೆಗೆ ದಾಖಲೆ ಮಾಡಲು ಹೊರಟಿದ್ದಾನೆ.

    ಚನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆ ಗ್ರಾಮದ ವಿದ್ಯಾರ್ಥಿ ದರ್ಶನ್ ಗೌಡ ಸಿಗರೇಟಿನ ಮೇಲೆ `ಸ್ಮೋಕಿಂಗ್ ಈಸ್ ಇಂಜೂರಿಯಸ್ ಟು ಹೆಲ್ತ್’ ಎಂದು ಇಂಗ್ಲಿಷ್​ನಲ್ಲಿ ಬರೆಯಲು ಮುಂದಾಗಿದ್ದಾನೆ.

    ಉತ್ತಮ ಯೋಗಪಟುವೂ ಆಗಿರುವ ದರ್ಶನ್ ಗೌಡ ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಹೋಟೆಲ್ ಅಂಡ್ ಮ್ಯಾನೇಜ್‌ಮೆಂಟ್‌ ವಿಭಾಗದ ಅಂತಿಮ ವರ್ಷದ ಪದವಿ ವಿದ್ಯಾರ್ಥಿ.

    ದರ್ಶನ್​​ ಜೊತೆ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಿದ್ದರು. ದರ್ಶನ್ ಸಿಗರೇಟು ತ್ಯಜಿಸುವಂತೆ ಎಷ್ಟು ಹೇಳಿದರೂ ಧೂಮಪಾನ ಮಾಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಅರಿವು ಮೂಡಿಸಲು ಅವರು ಈ ಕೆಲಸಕ್ಕೆ ಇಳಿದಿದ್ದಾರೆ.

    ಮೊದಲ ಹಂತವಾಗಿ 6.9 ಸೆ.ಮಿ ನ ಸಿಗರೇಟ್ ಮೇಲೆ 260 ಬಾರಿ ‘ಸ್ಮೋಕಿಂಗ್ ಈಸ್ ಇನ್ಜೂ‌ರಿಯಸ್ ಟು ಹೆಲ್ತ್’ ಹಾಗೂ `ಇಂಡಿಯಾ’ ಎಂದು 80 ಬಾರಿ, ಒಟ್ಟು 7,186 ಅಕ್ಷರಗಳನ್ನು ಬರೆದು ಧೂಮಪಾನ ತ್ಯಜಿಸುವ ಬಗ್ಗೆ ದೇಶದ ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾರೆ.
    ಇದಕ್ಕೂ ಮೊದಲು ಬಿಳಿಎಳ್ಳಿನ ಮೇಲೆ ಅವರು ಕನ್ನಡದ ವರ್ಣಮಾಲೆ ಅಕ್ಷರಗಳು, ಅಕ್ಕಿಕಾಳಿನ ಮೇಲೆ ಆಹಾರ ವ್ಯರ್ಥ ಮಾಡಬೇಡಿ ಎಂದು ಬರೆದು ಅರಿವು ಮೂಡಿಸಿದ್ದರು. (ದಿಗ್ವಿಜಯ ನ್ಯೂಸ್​)

    ಕರೊನಾ ಚಿಕಿತ್ಸೆಗಾಗಿ ಇನ್ಫೋಸಿಸ್ ಫೌಂಡೇಶನ್​ಗೆ ಆಸ್ಪತ್ರೆ ವಹಿಸಿ ಎಂದು ಕೋರಿದ ಡಾ.ಸುಧಾಮೂರ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts