More

    ತಲೆದಿಂಬು ಬಳಸಿ ನಿದ್ರಿಸುತ್ತೀರಾ? ಹಾಗಾದ್ರೆ ತಪ್ಪದೇ ಈ ವಿಷಯಗಳು ನಿಮ್ಮ ಗಮನದಲ್ಲಿರಲಿ

    ಬೆಂಗಳೂರು: ಪ್ರತಿಯೊಬ್ಬರಿಗು 8 ಗಂಟೆಗಳ ನಿದ್ದೆ ಅತ್ಯವಶ್ಯಕ. ನಿದ್ರೆ ಅಂದರೆ ಸಾಕು, ಬಹಳ ಖುಷಿಯಿಂದ ಹಾಸಿಗೆ ಏರುತ್ತಾರೆ. ಮಲಗುವುದಕ್ಕೆ ಅತೀ ಮುಖ್ಯವಾಗಿ ಬೇಕಾದ ಮೂರು ವಸ್ತುಗಳು ಎಂದರೆ ದಿಂಬು, ಹಾಸಿಗೆ, ಬ್ಲಾಂಕೆಟ್​. ಈ ಮೂರರಲ್ಲಿ ಯಾವುದಿಲ್ಲ ಎಂದರೂ ಒಂದು ರೀತಿಯ ಹಿಂಸೆಯೇ. ಕನಿಷ್ಟ ಬ್ಲಾಂಕೆಟ್ ಅಥವಾ ಹಾಸಿಗೆ ಇಲ್ಲಿದಿದ್ದರೂ ಮಲಗಬಹುದು. ಆದ್ರೆ, ದಿಂಬಿಲ್ಲ ಅಂದರೆ ನಿದ್ದೆಗೆ ಭಂಗ ಎಂದೇ ಹೇಳಬಹುದು.

    ಇದನ್ನೂ ಓದಿ: ಲೋಕ ಸಮರ 2024: ಕುರ್ಚಿ ಗಟ್ಟಿ ಮಾಡಿಕೊಳ್ಳಲು ಇವರನ್ನೆಲ್ಲಾ ಸೋಲಿಸಿ! ಸಿಎಂಗೆ ಯತ್ನಾಳ್ ಸಲಹೆ

    ದಿಂಬು ಬಳಸಿ ಮಲಗುವವರ ಸಂಖ್ಯೆಯೇ ಅಧಿಕ. ಇದನ್ನು ಹಾಕಿಕೊಂಡು ಮಲಗುವುದರಿಂದ ಏನಾದರೂ ಸಮಸ್ಯೆ ಇದೆಯಾ? ಅಥವಾ ಲಾಭದಾಯಕವೇ? ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ. ತಲೆದಿಂಬು ಇಲ್ಲದೆ ಮಲಗುವ ಅಭ್ಯಾಸ ಬಹಳಷ್ಟು ಜನರಿಗೆ ಇರುವುದಿಲ್ಲ. ಆದರೇ ದಿಂಬು ಇಲ್ಲದೇ ಮಲಗುವುದರಿಂದ ಅನೇಕ ಲಾಭಗಳಿವೆ. ಪಿಲ್ಲೋ ಇಲ್ಲದೆ ಮಲಗುವುದರಿಂದ ಕತ್ತು ನೋವು ಕಡಿಮೆ ಮಾಡುತ್ತದೆ ಹಾಗೂ ಬೆನ್ನು ಮೂಳೆಯನ್ನು ಬಲ ಪಡಿಸುತ್ತದೆ. ಇದರಿಂದ ಕುತ್ತಿಗೆ ನೋವಿನ ನಿವಾರಣೆಗೆ ಸಹಾಕಾರಿ.

    ದಿಂಬು ಇಲ್ಲದೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ವಿಶೇಷವಾಗಿ ನಿದ್ದೆ ಮಾಡುವಾಗ ತೋಳುಗಳು, ಕೈಯಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಅನುಭವಿಸುವವರು ದಿಂಬು ಬಳಸಿ ಮಲಗುವುದನ್ನು ನಿಲ್ಲಿಸುವುದು ಒಳ್ಳೆಯದು. ದಿಂಬುಗಳಲ್ಲಿ ಧೂಳಿನ ಕಣಗಳು, ಹುಳಗಳು, ಅಲರ್ಜಿಳು ಮತ್ತು ಬ್ಯಾಕ್ಟೀರಿಯಾಗಳನ್ನು ಆಶ್ರಯಿಸಬಹುದು. ಇದರಿಂದ ಮುಖದಲ್ಲಿ ಮೊಡವೆ ಹಾಗೂ ಖಾಯಿಲೆ ಕೂಡ ಬೀಳಬಹುದು. ದಿಂಬಿಲ್ಲದೆ ಮಲಗುವುದರಿಂದ ಪಿಲ್ಲೋಯಿಂದ ಬರುವ ಅಲರ್ಜಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹದು.

    ಇದನ್ನೂ ಓದಿ: INDIA ಒಕ್ಕೂಟ ಗೆದ್ದರೆ ಸಿಎಎ, ಎನ್​ಆರ್​ಸಿ ರದ್ದು.. ಟಿಎಂಸಿ ಪ್ರಣಾಳಿಕೆಯಲ್ಲಿ ದೀದಿ ಘೋಷಣೆ!

    ಈ ರೀತಿ ಮಲಗುವುದರಿಂದ ಮುಖದ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಮುಖದ ಸುಕ್ಕುಗಳನ್ನು ನಿಯಂತ್ರಿಸುತ್ತದೆ ಹಾಗೂ ಚರ್ಮದ ಕಾಳಜಿಗಾಗಿ ದಿಂಬಿನ ಸಹಾಯ ಬಳಸದೆ, ಹಾಗೇ ನಿದ್ರಿಸುವ ಆಭ್ಯಾಸ ರೂಢಿಸಿಕೊಳ್ಳುವುದು ಉತ್ತಮ.

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts