More

    ಲೋಕ ಸಮರ 2024: ಕುರ್ಚಿ ಗಟ್ಟಿ ಮಾಡಿಕೊಳ್ಳಲು ಇವರನ್ನೆಲ್ಲಾ ಸೋಲಿಸಿ! ಸಿಎಂಗೆ ಯತ್ನಾಳ್ ಸಲಹೆ

    ವಿಜಯಪುರ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಸದ್ಯ ಈ ಮಧ್ಯೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ಭುಗಿಲೆದಿದ್ದು, ಇದೀಗ ಸಿಎಂ ಸಿದ್ದರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲಹೆಯೊಂದನ್ನು ನೀಡಿದ್ದಾರೆ.

    ಇದನ್ನೂ ಓದಿ: ಮೋದಿಯವರದ್ದು ಶೂನ್ಯ ಭ್ರಷ್ಠಾಚಾರ

    ಡಿಕೆಶಿ ಮುಖ್ಯಮಂತ್ರಿಯಾಗಲು ಹವಣಿಕೆ ಇದೆ. ಲೋಕಸಮರದ ಬಳಿಕ ಅಧಿಕಾರ ಹೋಗಲಿದೆ. ಕುರ್ಚಿ ಗಟ್ಟಿ ಮಾಡಿಕೊಳ್ಳಲು ಕೆಲವರನ್ನು ಸೋಲಿಸಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಡಿ.ಕೆ. ಶಿವಕುಮಾರ ಈಗಿನಿಂದಲೇ ತಯಾರಿ ನಡೆಸಿದ್ದು, ಅದಕ್ಕಾಗಿ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಂಡು, ಡಿಕೆಶಿ ಪರ ಇರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಲೋಕಸಮರದಲ್ಲಿ ಸೋಲಿಸಬೇಕೆಂದು ಯತ್ನಾಳ್ ಹೇಳಿದರು.

    “ತನ್ನ ಪರವಿರುವ ಅಭ್ಯರ್ಥಿಗಳನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ, ಆ ಮೂಲಕ ಮುಖ್ಯಮಂತ್ರಿಯಾಗುವ ಕನಸು ಡಿಕೆಶಿ ಕಾಣುತ್ತಿದ್ದಾರೆ. ಉದಾಹರಣೆಗೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯ ತಂದೆ ಡಿ.ಕೆ.ಶಿವಕುಮಾರ ಬೆಂಬಲಿಗರಿದ್ದು, ಅವರ ಪುತ್ರಿಯನ್ನು ಗೆಲ್ಲಿಸುವ ವಿಚಾರವಾಗಿ ಸ್ವಾಮೀಜಿಯೊಬ್ಬರ ಜತೆಗೆ ಮಾತುಕತೆ ನಡೆಸಿರುವ ಮಾಹಿತಿ ಇದೆ. ನೀವೆಲ್ಲ ಸಹಕಾರ ನೀಡಿದರೆ ಲೋಕಸಭೆ ಚುನಾವಣೆ ಬಳಿಕ ನಾನೇ ಸಿಎಂ ಆಗುತ್ತೇನೆ, ಏನಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಲೋಕಸಭೆ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆಂಬುದು ಗೊತ್ತಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದರು.

    ಇದನ್ನೂ ಓದಿ: ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಬೆಂಕಿ

    ಬಾಗಲಕೋಟೆ ಲೋಕಸಭೆ ಅಭ್ಯರ್ಥಿ ತಂದೆ ಡಿ.ಕೆ. ಶಿವಕುಮಾರ ಬೆಂಬಲಿಗ. ಅವರು ಸಿದ್ದರಾಮಯ್ಯ ವಿರೋಧವಿದ್ದಾರೆ. ಅದನ್ನು ಬಳಸಿಕೊಳ್ಳಲು ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ. ಅದಕ್ಕಾಗಿ ಲಿಂಗಾಯತ-ಒಕ್ಕಲಿಗ ಒಂದು ಎಂಬ ಸಂದೇಶ ಕೊಡಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಒಡೆದು ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳುವುದಿಷ್ಟೆ- ಡಿಕೆಶಿ ಪರ ಇರುವ ಅಭ್ಯರ್ಥಿಗಳನ್ನು ಸೋಲಿಸದೇ ಹೋದರೆ ನಿಮ್ಮ ಸಿಎಂ ಸ್ಥಾನ ಹೋಗುವುದು ಗ್ಯಾರಂಟಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts