More

    INDIA ಒಕ್ಕೂಟ ಗೆದ್ದರೆ ಸಿಎಎ, ಎನ್​ಆರ್​ಸಿ ರದ್ದು.. ಟಿಎಂಸಿ ಪ್ರಣಾಳಿಕೆಯಲ್ಲಿ ದೀದಿ ಘೋಷಣೆ!

    ಕೋಲ್ಕತ್ತಾ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಕೆಲವೇ ಗಂಟೆ ಬಾಕಿ ಇರುವಾಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಬುಧವಾರ ತನ್ನ 10 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಚಿತ್ರವೆಂದರೆ ಸಿಎಎ, ಎನ್‌ಆರ್‌ಸಿ, ಯುಸಿಸಿ ಜಾರಿಗೊಳಿಸುವುದಿಲ್ಲ ಎಂದು ಪ್ರಕಟಿಸಿದೆ.

    ಇದನ್ನೂ ನೋಡಿ: ಕಿರುತೆರೆ ನಟಿ ಶಾಕಿಂಗ್ ಕಾಮೆಂಟ್ಸ್.. ಡೈರೆಕ್ಟರ್ ಜೊತೆ ರಾತ್ರಿ ಕಳೆದರೆ ಸೀರಿಯಲ್ ಆಫರ್..!

    ಮೊದಲ ಹಂತದಲ್ಲಿ ಕೂಚ್‌ಬೆಹಾರ್, ಅಲಿಪುರ್‌ದೌರ್ ಮತ್ತು ಜಲಪೈಗುರಿಯಲ್ಲಿ ಮತದಾನ ನಡೆಯಲಿದೆ. ಟಿಎಂಸಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 10 ಪ್ರಮುಖ ಭರವಸೆಗಳನ್ನು ಪ್ರಕಟಿಸಿದೆ.

    ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಸಾಮಾನ್ಯ ಪೌರತ್ವ (ಯುಸಿಸಿ) ಜಾರಿಗೆ ತರುವುದಿಲ್ಲ ಎಂದು ಟಿಎಂಸಿ ತನ್ನ ಪ್ರಣಾಳಿಕೆಯಲ್ಲಿ ಸ್ಪಷ್ಟಪಡಿಸಿದೆ.

    ‘INDIA’ ಮೈತ್ರಿಯ ಭಾಗವಾಗಿ ಕೇಂದ್ರದಲ್ಲಿ ಟಿಎಂಸಿ ಸರ್ಕಾರ ರಚನೆಯಾದರೆ, ಅದು ನೀಡಿದ ಭರವಸೆಗಳನ್ನು ಜಾರಿಗೆ ತರುತ್ತದೆ ಎಂದು ಅದು ಹೇಳಿದೆ.

    ಟಿಎಂಸಿ ಪ್ರಣಾಳಿಕೆಯು ಉದ್ಯೋಗಗಳು, ಸಾರ್ವತ್ರಿಕ ವಸತಿ ಮತ್ತು ಉಚಿತ ಎಲ್​ಪಿಜಿ ಸಿಲಿಂಡರ್‌ ಒದಗಿಸುವ ಭರವಸೆ ನೀಡಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ರಾಜ್ಯದಲ್ಲಿ ಮೈತ್ರಿ ಇಲ್ಲದಿದ್ದರೂ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ‘INDIA’ ಮೈತ್ರಿಕೂಟವನ್ನು ಬೆಂಬಲಿಸುವುದಾಗಿ ಟಿಎಂಸಿ ನಾಯಕರು ಈ ಸಂದರ್ಭದಲ್ಲಿ ಘೋಷಿಸಿದರು.

    ‘ನಮಗೆ ಸಂಬಂಧವಿಲ್ಲ, ವಿ ಡೋಂಟ್ ಕೇರ್’: ಪ್ರಧಾನಿ ಮೋದಿ ಹೇಳಿಕೆಗೆ ಮ್ಯಾಥ್ಯೂ ಮಿಲ್ಲರ್ ಹೀಗೆ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts