More

    ಅಸ್ಥಿಪಂಜರ ಪತ್ತೆ ಕೇಸ್‌: ಟ್ವಿಸ್ಟ್ ಮೇಲೆ ಟ್ವಿಸ್ಟ್…ಜಗನ್ನಾಥರೆಡ್ಡಿ ಮನೆ ಗೋಡೆ ಮೇಲೆ ರಕ್ತದ ಕಲೆ ಮಾದರಿಯಲ್ಲಿರುವ 5 ಹಸ್ತದ ಗುರುತು ಪತ್ತೆ

    ಚಿತ್ರದುರ್ಗ: ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿ ಪಂಜರಗಳು ದೊರೆತಿರುವ ಪ್ರಕರಣದ ಮುಂದಿನ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಪೋಸ್ಟ್ ಮಾರ್ಟಮ್ ಹಾಗೂ ಎಫ್‌ಎಸ್‌ಎಲ್ ವರದಿ ಸೇರಿದಂತೆ ತಜ್ಞವೈದ್ಯರ ಪಾಳುಮನೆ ಗೋಡೆ ಮೇಲಿದೆ ಎಂದು ಹೇಳಲಾಗುತ್ತಿರುವ ರಕ್ತದ ಕಲೆ ಮಾದರಿಯಲ್ಲಿರುವ ಹಸ್ತ ಗುರುತು ಕುರಿತು ಎಫ್‌ಎಸ್‌ಎಲ್ ತಜ್ಞರ ಜತೆ ಚರ್ಚಿಸಲು ಎಸ್‌ಪಿ ಮುಂದಾಗಿದ್ದಾರೆ. ಮನೆಯಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ, ಆದರೆ ಡೈರಿಯೊಂದರ ಹಾಳೆಯಲ್ಲಿ ಯಾವುದೇ ದಿನಾಂಕ, ಸಹಿ ಇಲ್ಲದ ಬರಹವೊಂದರಲ್ಲಿದ್ದ ಇಬ್ಬರ ಹೆಸರಿತ್ತು.

    ಈ ಕುರಿತಂತೆ ನಡೆಸಿದ ವಿಚಾರಣೆಯಲ್ಲಿ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ್ದೆಂದು ವಿಚಾರಣೆ ವೇಳೆ ಗೊತ್ತಾಗಿದೆ. ‘ನಾವು ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು’ ಹಾಳೆಯಲ್ಲಿದ್ದು, ಕೈ ಬರಹ ಜಗನ್ನಾಥರೆಡ್ಡಿ ಅವರ ಪುತ್ರಿ ತ್ರಿವೇಣಿ ಅವರದ್ದಾಗಿರ ಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.

    ಈ ಹಾಳೆ ಚಿಕಿತ್ಸೆ ದಾಖಲೆಗಳ ನಡುವೆ ಲಭ್ಯವಾಗಿದೆ. ಲಭ್ಯ ಮಾಹಿತೆಯಂತೆ ಅಸ್ಥಿ ಪಂಜರಗಳ ಮೇಲೆ ಯಾವುದೇ ಗಾಯದ ಗುರುತಿಲ್ಲವೆಂದು ಗೊತ್ತಾಗಿದೆ. ಹಗ್ಗ ಬಿಗಿದಿಲ್ಲ, ಈ ಪ್ರಕರಣದ ಕುರಿತಂತೆ ನಿಖರ ಮಾಹಿತಿ ಹೇಳಲು ತಜ್ಞರ ಅಂತಿಮ ವರದಿ ನಮ್ಮ ಕೈ ಸೇರ ಬೇಕಿದೆ ಎಂದು ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ಹೇಳಿದ್ದಾರೆ.

    ಮನೆ ಆವರಣದಲ್ಲಿ ಶೋಧ
    ಜಿಲ್ಲಾ ಎಫ್‌ಎಸ್‌ಎಲ್ ತಂಡ ಮಂಗಳವಾರ ಮನೆ ಆವರಣದಲ್ಲಿದ್ದ ಗಿಡಗಂಟೆ ತೆರವು ಗೊಳಿಸಿ, ಏನಾದರೂ ಸುಳಿವು ದೊರೆಯಬಹುದೆಂದು ಶೋಧ ನಡೆಸಿದೆ. ನಾಯಿ ಕಳೆಬರ ಸಂಗ್ರಹಿಸಲಾಗಿದೆ. ಈ ಕಳೆಬರದ ಸ್ಯಾಂಪಲ್‌ನ್ನು ಈ ಮುನ್ನ ಪಶುವೈದ್ಯರಿಗೆ ಕಳಿಸಲಾಗಿತ್ತು ಎಂದು ತನಿಖಾಧಿಕಾರಿ ಹೇಳಿದ್ದಾರೆ.

    ಮೊಬೈಲ್ ಪರಿಶೀಲನೆ
    ಎಫ್‌ಎಸ್‌ಎಲ್ ತಜ್ಞರು ಈ ಮುನ್ನ ನಡೆಸಿದ್ದ ಶೋಧ ಸಂದರ್ಭದಲ್ಲಿ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರಂತೆ. ಅವುಗಳಲ್ಲಿರುವ ಮಾಹಿತಿ ಸಂಗ್ರಹಿಸಬೇಕಿದೆ. ಸಿಡಿಆರ್ ಸಂಗ್ರಹ ಅಸಾಧ್ಯ, ಪೋನ್‌ಗಳಲ್ಲಿರುವ ಮಾಹಿತಿ ಪರಿಶೀಲಿಸಬೇಕಿದೆ. ಪ್ರಕರಣದ ತನಿಖೆ ನಾವೇ ನಡೆಸಲಿದ್ದೇವೆ ಎಂದು ಎಸ್‌ಪಿ ಹೇಳಿದ್ದಾರೆ.

    ಒಂದರೆಡು ದಿನಗಳಲ್ಲಿ ಪಿಎಂ ವರದಿ
    ಪೋಸ್ಟ್ ಮಾರ್ಟಮ್ ವರದಿಯನ್ನು ಪೊಲೀಸರಿಗೆ ಒಂದೆರೆಡು ದಿನಗಳಲ್ಲಿ ಸಲ್ಲಿಸಲಾಗುವುದು. ಪಿಎಂ ರಿಪೋರ್ಟ್ ಸಲ್ಲಿಕೆ ವೇಳೆ ಎಫ್‌ಎಸ್‌ಎಲ್ ವರದಿ ಪೆಂಡಿಂಗ್ ಇದೆ ಎಂದು ತಿಳಿಸಿರುತ್ತೇವೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಅಂತಿಮ ವರದಿಯನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 

    ನಾವು ಆತ್ಮಹತ್ಯೆ ಮಾಡಿಕೊಳ್ಳಹುದು: ಅಸ್ತಿಪಂಜರದ ಮನೆಯಲ್ಲಿ ಸಿಕ್ಕ ಹಾಳೆ ಇಂಜಿನಿಯರ್ ಪುತ್ರಿಯ ಕೈ ಬರಹ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts