More

    ಚುನಾವಣಾ ಕಣಕ್ಕಿಳಿದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ; ನಾಳೆಯೇ ನಾಮಪತ್ರ ಸಲ್ಲಿಕೆ!

    ಬಾಗಲಕೋಟೆ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಒಂದಿಲ್ಲೊಂದು ವಿದ್ಯಮಾನಗಳು ನಡೆಯುತ್ತಿದ್ದು, ಪ್ರಮುಖ ಪಕ್ಷಗಳಿಗೆ ಬಂಡಾಯದ ಬಿಸಿ ತಾಗುತ್ತಿವೆ. ಅಸಮಾಧಾನದಿಂದ ಪಕ್ಷಾಂತರ ಮಾಡುತ್ತಿರುವುದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವ ಬೆಳವಣಿಗೆಗಳು ಕಳೆದ ಒಂದು ವಾರದಿಂದ ನಡೆಯುತ್ತಿವೆ.

    ನಾಳೆಯೇ ನಾಮಪತ್ರ?

    ಇದೀಗ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಯೊಂದು ನಡೆದಿದ್ದು, ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಸ್ವಾಮೀಜಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತ ವಿವಿಧ ಸಮುದಾಯಗಳ ಒಂಭತ್ತು ಜನರ ಬೆಂಬಲ ದೊರಕಿದ್ದು, ನಾಳೆಯೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಈಡುಗಾಯಿ ಹರಕೆ ತೀರಿಸಿದ ಡಿಕೆಶಿ; ದೇವಸ್ಥಾನದ ಹುಂಡಿಗೆ ಬಿತ್ತು 500 ರೂ. ನೋಟಿನ ಕಂತೆ ಕಂತೆ ಹಣ…

    ನೇಕಾರರ ಮತಗಳೇ ನಿರ್ಣಾಯಕ

    ತೇರದಾಳ ಕ್ಷೇತ್ರದಲ್ಲಿ ನೇಕಾರರ ಮತಗಳು ನಿರ್ಣಾಯಕರಾಗಿರುವ ಹಿನ್ನೆಲೆ. ಹೀಗಾಗಿ ಈ ಬಾರಿ ನೇಕಾರರಿಗೆ ಟಿಕೆಟ್ ಕೊಡುವಂತೆ ಬಿಜೆಪಿಯನ್ನು ಒತ್ತಾಯಿಸಲಾಗಿತ್ತು. ಆದರೆ ಬಿಜೆಪಿ ಹಾಲಿ ಶಾಸಕ ಸಿದ್ದು ಸವದಿಗೆ ಟಿಕೆಟ್ ಘೋಷಣೆ ಮಾಡಿದೆ. ಇತ್ತ ಕಾಂಗ್ರೆಸ್ ಪಕ್ಷ ಕೂಡ ನೇಕಾರ ಮಹಿಳೆ ಮಾಜಿ ಸಚಿವೆ ಉಮಾಶ್ರೀ ಬಿಟ್ಟು ಸಿದ್ದು ಕೊಣ್ಣೂರಗೆ ಟಿಕೆಟ್ ನೀಡಿದೆ.

    ನೇಕಾರರಿಗೆ ಟಿಕೆಟ್ ನೀಡದ ಬಿಜೆಪಿ-ಕಾಂಗ್ರೆಸ್

    ಪ್ರಮುಖ ಎರಡೂ ಪಕ್ಷಗಳು ನೇಕಾರರಿಗೆ ಟಿಕೆಟ್ ನೀಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಅಸಮಾಧಾನಗೊಂಡ ನಾಯಕರು ನೇಕಾರ ಸ್ವಾಮೀಜಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದರು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ.

    ಇದನ್ನೂ ಓದಿ: ಇತರ ಪಕ್ಷದವರು ಕಾಂಗ್ರೆಸ್​​ಗೆ ಬರುತ್ತಿದ್ದಂತೆ ಕನ್ವರ್ಟ್ ಆಗುತ್ತಾರೆ; ಜಿ.ಪರಮೇಶ್ವರ್

    ತೆರೆಮರೆಯಲ್ಲಿ ಬೆಂಬಲ!

    ಜಗದ್ಗುರು ಶಿವಶಂಕರ ಶಿವಾಚಾರ್ಯ ಸ್ವಾಮೀಜಿಗೆ ಬಿಜೆಪಿ ಹಾಗೂ ಕಾಂಗ್ರೆಸ್​ನ ಟಿಕೆಟ್ ವಂಚನ ನಾಯಕರು ತೆರೆಮರೆಯಲ್ಲಿ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ. 2008ರಲ್ಲಿ ಉದಯವಾದ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಎರಡು ಸಲ ಸಿದ್ದು ಸವದಿ ಹಾಗೂ ಒಂದು ಸಲ ಉಮಾಶ್ರೀ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

    ಇದನ್ನೂ ಓದಿ: ಲಿಂಗಾಯತರೇ ಮುಂದಿನ ಸಿಎಂ ಆಗುತ್ತಾರೆ; ಭವಿಷ್ಯ ನುಡಿದ ಯತ್ನಾಳ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts