More

    ಸಲಿಂಗಕಾಮಿ ಸೋದರನಿಗಾಗಿ ಬಾಡಿಗೆ ತಾಯಿಯಾದಳು; ಆರು ಮಕ್ಕಳ ತಾಯಿಯಿಂದ ವಿಶೇಷ ಪ್ರಯತ್ನ

    ನವದೆಹಲಿ: ಸಲಿಂಗಕಾಮಿ ಸೋದರನಿಗಾಗಿ ಮಹಿಳೆಯೊಬ್ಬಳು ಬಾಡಿಗೆ ತಾಯಿಯಾಗಿದ್ದು, ಆ ಮೂಲಕ ಸೋದರನ ಕನಸು ನನಸಾಗಿಸುವಲ್ಲಿ ಮಹತ್ವ ಪಾತ್ರ ವಹಿಸಿದ್ದಾಳೆ. ಆರು ಮಕ್ಕಳ ತಾಯಿಯ ಈ ಪ್ರಯತ್ನವನ್ನು ಸೋದರ ಬೆಲೆ ಕಟ್ಟಲಾಗದ್ದು ಎಂದು ವರ್ಣಿಸಿದ್ದಾನೆ.

    ಯುಕೆಯಲ್ಲಿನ ಆರು ಮಕ್ಕಳ ತಾಯಿ ಟ್ರೇಸಿ ಹಸಲ್​ ಸೋದರನಿಗಾಗಿ ಬಾಡಿಗೆ ತಾಯಿಯಾಗಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈಕೆಯ ಗೇ ಸೋದರ ಆ್ಯಂಥೋನಿ ಡೀಗನ್ ಹಾಗೂ ರೇ ವಿಲಿಯಮ್ಸ್ ಮದುವೆಯಾಗಿದ್ದು, ಈ ಜೋಡಿ ಮಕ್ಕಳನ್ನು ಪಡೆಯುವುದು ಹೇಗೆ ಎಂಬ ಚಿಂತೆಗೆ ಬಿದ್ದಿತ್ತು.

    ತಮ್ಮಿಂದ ಮಕ್ಕಳನ್ನು ಪಡೆಯುವ ಸಲುವಾಗಿ ಈ ಜೋಡಿ ಹಲವಾರು ಕಡೆ ಹುಡುಕಾಟ ನಡೆಸಿದ್ದರೂ ಬಾಡಿಗೆ ತಾಯಿಯಾಗಲು ಯಾವ ಮಹಿಳೆಯೂ ಸಿಕ್ಕಿರಲಿಲ್ಲ. ಸರೋಗೆಸಿ ಯುಕೆ ಎಂಬ ಸಾಮಾಜಿಕ ಕಾರ್ಯಕ್ರಮದ ಮೂಲಕ ಸುಮಾರು ಒಂದು ವರ್ಷದ ಪ್ರಯತ್ನ ನಡೆಸಿದ್ದರೂ ಬಾಡಿಗೆ ತಾಯಿ ಸಿಕ್ಕಿರಲಿಲ್ಲ. ಕೊನೆಗೆ ಸೋದರಿಯೊಂದಿಗೆ ಈ ವಿಷಯ ಹಂಚಿಕೊಂಡಾಗ ಆಕೆ ಒಪ್ಪಿಕೊಂಡಿದ್ದು, ಗೇ ದಂಪತಿ ಮಗು ಪಡೆಯುವುದು ಸಾಧ್ಯವಾಗಿದೆ.

    ಇದನ್ನೂ ಓದಿ: ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್​ಗೆ 100 ರೂ! ಇದು ಹೊಸ ರೀತಿಯ ಪ್ರತಿಭಟನೆ

    ಆರು ಮಕ್ಕಳ ತಾಯಿಯಾಗಿರುವ ಈಕೆ ಈ ಬಗ್ಗೆ ಪತಿಯ ಬಳಿ ಕೇಳಿಕೊಂಡಿದ್ದಾಗ, ಆತ ಈ ಪ್ರಯತ್ನಕ್ಕೆ ಆಕೆಯ ವಯಸ್ಸು ಅಡ್ಡಿ ಆದೀತು ಎಂದಿದ್ದರಂತೆ. ಆದರೆ ಸೋದರನಿಗಾಗಿ ರಿಸ್ಕ್​ ತೆಗೆದುಕೊಳ್ಳು ಮುಂದಾದ ಈ ಸೋದರಿ ಐವಿಎಫ್​ನ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, 2020ರ ಅಕ್ಟೋಬರ್ 12ರಂದು ಮಗುವಿಗೆ ಜನ್ಮ ನೀಡಿದ್ದಾರೆ. ಇತ್ತೀಚೆಗೆ ಈ ವಿಷಯ ಹಂಚಿಕೊಂಡಿರುವ ಸೋದರ, ಸೋದರಿಯ ಈ ಪ್ರಯತ್ನ ಬೆಲೆ ಕಟ್ಟಲಾಗದ್ದು ಇಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಆನ್​ಲೈನ್​ ರಮ್ಮಿ ಆಟಕ್ಕೆ ಬ್ರೇಕ್​! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್​ಲೈನ್​ ಜೂಜಾಡುವಂತಿಲ್ಲ

    ಟಿಕ್​ಟಾಕ್​ ಸ್ಟಾರ್​ ಆತ್ಮಹತ್ಯೆ ಹಿಂದೆ ಮಹಾ ಸಚಿವನ ಕೈವಾಡ? ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts