More

    ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

    ಸಿರವಾರ: ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಮೆಕೋ ಕನ್ಸ್ಟ್ರಕ್ಷನ್ ಅಧ್ಯಕ್ಷ ಎಂ. ಈರಣ್ಣ ಹೇಳಿದರು.
    ತಾಲೂಕಿನ ಮಾಚನೂರು ಗ್ರಾಮದಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಬ್ಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. 
    
    ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಸಧೃಡವಾಗುತ್ತೆವೆ. ಯುವಕರು ಇಂಟರ್‌ನೆಟ್‌ನಲ್ಲಿ ಕಾಲ ಕಳೆಯುವ ಬದಲು ಆಟೋಟದಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ದೇಶಿ ಕ್ರೀಡೆಗಳ ಉಳಿವು ಬೆಳವಣಿಗೆಗೆ ಮುಂದಾಗಬೇಕು. ಸೋತಾಗ ಹಿಗ್ಗದೆ ಗೆದ್ದಾಗ ಕುಗ್ಗದೆ ಸಮಚಿತ್ತದಿದ ಇರಬೇಕೆಂದು ಕಿವಿಮಾತು ಹೇಳಿದರು.
    
    ಮಾನ್ವಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ ಮಾನಾಡಿದರು. ಕ್ರೀಡೆಯಲ್ಲಿ 35ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ರಾಜಲಬಂಡಾ ತಂಡ ಪ್ರಥಮ, ಮಾಚನೂರು ತಂಡ ದ್ವಿತೀಯ, ಗಬ್ಬೂರು ತಂಡ ತೃತೀಯ ಬಹುಮಾನ ಪಡೆದುಕೊಂಡವು.
    
    ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿ ಸದಸ್ಯ ವೀರೇಶ ನಾಯಕ ಬೆಟ್ಟದೂರು, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ವೀರನಗೌಡ, ಸದಸ್ಯ ಅಂಬಣ್ಣ, ಮುಖಂಡರಾದ ರಾಮಣ್ಣ ಮಾನ್ವಿ, ವಜ್ರದಯ್ಯ ನಾಯಕ, ಆಂಜನೇಯ ಛಲವಾದಿ, ನಾಗರಾಜ ನಾಯಕ ತುಪ್ಪದೂರು, ಕರವೇ ಅಧ್ಯಕ್ಷ ಶಿವಪ್ಪ ಕೊಸಗಿ, ಮುಖ್ಯಶಿಕ್ಷಕ ಗಿರೀಶ್ ಜಿ, ಶಿಕ್ಷಕರಾದ ಮಾಲತೇಶ ಟಿ, ರವಿಕುಮಾರ್, ಜಯಪ್ಪ, ಸ್ವಾಮಿ ವಿವೇಕಾನಂದ ಸಂಘದ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಅನಿಲ್ ಕುಮಾರ, ಪ್ರ.ಕಾ. ನರಸಿಂಹ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts