More

    ಜನಪ್ರತಿನಿಧಿಗಳಿಗೆ ಸೌಜನ್ಯ ಅಗತ್ಯ

    ಸಿರಿಗೇರಿ: ಜನರಿಂದ ಚುನಾಯಿತರಾದವರು ಜನರನ್ನು ಗೌರವಿಸುವ ಸೌಜನ್ಯ ರೂಢಿಸಿಕೊಳ್ಳಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

    ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದ ರಂಗಮಂದಿರದಲ್ಲಿ ಅನ್ನಪೂರ್ಣ ಪ್ರಕಾಶನ ಭಾನುವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದಲ್ಲಿ ಮೌಲ್ಯಗಳು ಒಂದು ಅವಲೋಕನ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು.

    ರಾಷ್ಟ್ರಪತಿಯಿಂದ ಹಿಡಿದು ಸಾರ್ವಜನಿಕರ ವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು. ಮಹಾನ್ ಮಾನವತಾವಾದಿಗಳಾ ಬುದ್ಧ, ಬಸವ, ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದ್ದಾರೆ. ಭೂಮಿ, ನೀರು, ಗಾಳಿ, ಆಕಾಶಕ್ಕೆ ಜಾತಿ ಇಲ್ಲ. ಇವುಗಳನ್ನು ಬಳಸಿಕೊಳ್ಳುವ ನಾವು ಸಮಾನತೆ ಇಟ್ಟುಕೊಂಡಿಲ್ಲ ಎಂದರು.

    ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಯೋಜನೆಗಳನ್ನು ಜನರಿಗೆ ತಲುಪಿಸುವ, ಅವುಗಳ ಪ್ರಾಮಾಣಿಕ ಅನುಷ್ಠಾನ ಮಾಡುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ. ಸಾರ್ವಜನಿಕವಲಯದಲ್ಲಿ ಕಳ್ಳತನ, ಸುಳ್ಳು, ಮೋಸದ ಹಾವಳಿ ಜಾಸ್ತಿಯಾಗಿದೆ. ಹೆಸರಿಷ್ಟೆ ಪ್ರಜಾಪ್ರಭುತ್ವ ಎಂಬಂತಾಗಿದೆ ಎಂದರು.

    ಚುನಾವಣಾ ಸಮಯದಲ್ಲಿ ಸಾರ್ವಜನಿಕರು ಜಾಗೃತರಾಗಿರಬೇಕು. ಯಾವುದೇ ಚುನಾಯಿತ ಪಕ್ಷ ಇರಲಿ. ಜನರಿಂದ ಆಯ್ಕೆಯಾದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡದೆ ಶೋಕಿಗಾಗಿ ತಿರುಗಾಡುವವರನ್ನು ತಿರಸ್ಕರಿಸಬೇಕು. ಗ್ರಾಪಂ ಸದಸ್ಯರಿಂದ ಹಿಡಿದು ಸಂಸದರ ವರೆಗೂ ಅವರು ಮಾಡಿದ ಕೆಲಸಗಳನ್ನು ಗಮನಿಸಿ ಮತ ಹಾಕಬೇಕು ಎಂದರು.

    ಲೇಖಕ ಸಿರಿಗೇರಿ ಯರ‌್ರಿಸ್ವಾಮಿ, ಗ್ರಾಪಂ ಉಪಾಧ್ಯಕ್ಷ ರಮೇಶ್ ಭಜಂತ್ರಿ, ಮುಖಂಡ ಬೀಮಲಿಂಗಪ್ಪ , ಅಂಬರೀಷ ಗೌಡ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts