More

    ಕಾಂಗ್ರೆಸ್‌ನಿಂದ ಪೊಳ್ಳು ರಾಜಕೀಯ

    ಸಿರಿಗೇರಿ: ಪ್ರಧಾನಿ ನರೇಂದ್ರ ಮೋದಿ ಅವರ ಕೋರಿಕೆಯ ಮೇರೆಗೆ ಗ್ರಾಮದ ನಾಗನಾಥೇಶ್ವರ ದೇವಸ್ಥಾನದ ಆವರಣವನ್ನು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸ್ವಚ್ಛಗೊಳಿಸಿದರು.

    ಅಯೋಧ್ಯೆಯಲ್ಲಿ 22 ರಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ

    ಅಯೋಧ್ಯೆಯಲ್ಲಿ 22 ರಂದು ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪಣೆಯಾಗಲಿದೆ. ಹಾಗಾಗಿ ದೇವಸ್ಥಾನಗಳನ್ನು ಸ್ವಚ್ಛತೆ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನ ಪೇಟೆ ಆಂಜನೇಯ, ಬನ್ನಿ ಮಹಾಂಕಾಳಿ, ಕಾಡಸಿದ್ದೇಶ್ವರ, ವೀರಭದ್ರೇಶ್ವರ ದೇವಸ್ಥಾನಗಳ ಆವರಣವನ್ನು ಸ್ವಚ್ಛತೆ ಮಾಡಲಾಗಿದೆ ಎಂದು ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

    ಇದನ್ನೂ ಓದಿ: 10 ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳು, ಡ್ರೋನ್ ಗಾರ್ಡ್, ಮೂಲೆ ಮೂಲೆಯಲ್ಲಿ ಸೈನಿಕರು; ಉಕ್ಕಿನ ಕೋಟೆಯಾಗಿ ರೂಪಾಂತರಗೊಂಡ ಅಯೋಧ್ಯೆ

    ನರೇಂದ್ರ ಮೋದಿ ಅವರ ದಿಟ್ಟ ಹೆಜ್ಜೆಯಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದರಿಂದ ಇಡೀ ಪ್ರಪಂಚ ತಿರುಗಿ ನೋಡುವಂತಾಗಿದೆ. ರಾಜ್ಯ ಸರ್ಕಾರ ನಿದ್ದೆಯಲ್ಲಿ ಜಾರಿದೆ. ಕಾಂಗ್ರೆಸ್ ನಾಯಕರು ಕೆಲಸ ಮಾಡದೆ ಪೊಳ್ಳು ರಾಜಕೀಯ ಮಾಡುತ್ತಿದ್ದಾರೆ. ಟೀಕಿಸುವುದನ್ನು ಬಿಟ್ಟು ಕೆಲಸ ಮಾಡಲಿ. ರಾಜ್ಯದಲ್ಲಿ ಬರ ಆವರಿಸಿದೆ. ಜನರು ಗುಳೆ ಹೋಗುತ್ತಿದ್ದಾರೆ. ಈ ಕೂಡಲೇ ರೈತರಿಗೆ ಪರಿಹಾರವನ್ನು ನೀಡಲಿ ಎಂದು ಆಗ್ರಹಿಸಿದರು.
    ಪ್ರಮುಖರಾದ ಶೇಖಣ್ಣ, ಹಾಗಲೂರು ಮಲ್ಲನಗೌಡ, ಬಕಾಡೆ ಈರಯ್ಯ, ಗುಂಡಿಗನೂರು ಪ್ರಕಾಶಗೌಡ, ಡ್ರೈವರ್ ಹುಲುಗಪ್ಪ, ಆರ್.ನಾಗರಾಜ್ ಗೌಡ, ಪೂಜಾರಿ ಸಿದ್ದಯ್ಯ, ಮುದಿಯಪ್ಪ, ಗುಡಟ್ಟಿ ಈರಣ್ಣ, ವೀರಭದ್ರ ಗೌಡ, ಎರ‌್ರಿಸ್ವಾಮಿ, ಎನ್.ಹನುಮಂತ, ಮಂಜುನಾಥ್, ವಿ.ಶೇಖರ್, ಎಚ್.ಭೀಮೇಶ್,ಅನಿಲ್, ಬಿ.ಬಸವರಾಜ್, ಪಂಚಾಕ್ಷರಿ ಗೌಡ, ಭಜಂತ್ರಿ ರಮೇಶ್, ಹೊನ್ನೂರಪ್ಪ, ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts