More

    ಜನರಲ್ಲಿನ ಸಂಶಯ ದೂರಗೊಳಿಸಿ

    ಸಿರಿಗೆರೆ: ಕೇಂದ್ರ ಸರ್ಕಾರದಿಂದ ಜಾರಿಗೊಂಡ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನರಲ್ಲಿರುವ ಅನುಮಾನಗಳ ನಿವಾರಣೆ ಮಾಡಿ ಕಾಯ್ದೆಯ ಉಪಯೋಗದ ಬಗ್ಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

    ಸೋಮವಾರ ಸಿರಿಗೆರೆಗೆ ಭೇಟಿ ನೀಡಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.

    ಕಾಯ್ದೆಯ ಅನ್ವಯ ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಬಾಂಗ್ಲದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೊಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆನಿಂತ ಹಿಂದು, ಬೌದ್ಧ, ಸಿಖ್, ಜೈನ್, ಪಾರ್ಸಿ ಹಾಗೂ ಕ್ರೈಸ್ತರಿಗೆ ಪೌರತ್ವ ನೀಡಲಾಗುತ್ತದೆ ಎಂದು ತಿಳಿಸಿದರು.

    ಒಳನುಸುಳುವಿಕೆ ನಿಲ್ಲಿಸುವುದು ಪ್ರತಿ ದೇಶದ ಜವಾಬ್ದಾರಿ. ಇಲ್ಲಿ ಬಂದವರೆಲ್ಲರಿಗೂ ಪೌರತ್ವ ಕೊಡಲು ಸಾಧ್ಯವಿಲ್ಲ. ತನ್ನ ಗಡಿ ರಕ್ಷಣೆ, ಒಳ ನುಸುಳುವಿಕೆ ನಿಯಂತ್ರಣ, ನಿರಾಶ್ರಿತರು ಹಾಗೂ ಒಳನುಸುಳುಕೋರರ ನಡುವಿನ ವ್ಯತ್ಯಾಸ ಗುರುತಿಸುವ ಅಗತ್ಯ ಕ್ರಮವೇ ಪೌರತ್ವದ ಅಭಿಯಾನ ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಸಿರಿಗೆರೆ ಮೋಹನ್, ಮುಖಂಡರಾದ ಕೆ.ಎನ್.ಬಸವಂತಪ್ಪ, ಎಸ್.ಎಲ್.ಪಂಚಾಕ್ಷರಿ, ಪೆ.ಬಸವರಾಜು, ಸತೀಶ್, ಸಿದ್ದೇಶ್, ಮಧು ಹಾಗೂ ಕಾರ್ಯಕರ್ತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts