More

    ಲೋಕಕಲ್ಯಾಣಾರ್ಥಕ್ಕಗಿ ದೇವಿಯರಿಗೆ ಕುಂಭೋತ್ಸವ

    ಸಿರಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ಎಳ್ಳು ಅಮಾವಾಸ್ಯೆ ಅಂಗವಾಗಿ ಗ್ರಾಮದ ಶ್ರೀ ದ್ಯಾವಮ್ಮ ದೇವಿ, ಶ್ರೀ ಸುಂಕ್ಲಮ್ಮ ದೇವಿ, ಶ್ರೀ ಗುಡ್ಡದ ಮಾರೆಮ್ಮ ದೇವಿ, ಶ್ರೀ ಚೌಡೇಶ್ವರಿ ದೇವಿ, ಶ್ರೀ ತಾಯಮ್ಮ ದೇವಿ ಹಾಗೂ ಕೋಣನೂರು ಮಾರೆಮ್ಮ ದೇವಿಯರಿಗೆ ಗ್ರಾಮದ ಭಕ್ತರಿಂದ 115 ಕುಂಭಗಳ ಉತ್ಸವ ಶುಕ್ರವಾರ ನಡೆಯಿತು.

    ಗ್ರಾಮದ ಮುಖಂಡ ಎಸ್.ಸೂಗನಗೌಡ ಮಾತನಾಡಿ, ಪುರಾತನ ಕಾಲದಿಂದಲೂ ಅಮಾವಾಸ್ಯೆಯಂದು ದೇವತೆಯರಿಗೆ ಕುಂಭಗಳನ್ನು ಹೊತ್ತು ಶ್ರದ್ದಾ ಭಕ್ತಿಯಿಂದ ಅರ್ಪಿಸಲಾಗುತ್ತಿದೆ. ಗ್ರಾಮದ ಎಲ್ಲ ಸಮುದಾಯದ ಜನರು ಲೋಕ ಕಲ್ಯಾಣಾರ್ಥವಾಗಿ ಹಾಗೂ ಗ್ರಾಮಕ್ಕೆ ರಕ್ಷಣೆ ನೀಡಲೆಂದು ಹಾಗೂ ಅವರವರ ಭಕ್ತಿಗನುಸಾರವಾಗಿ ಗ್ರಾಮದೇವತೆಗಳಿಗೆ ಕುಂಭ ಹೊತ್ತು ಭಕ್ತಿ ಸಮರ್ಪಣೆ ಮಾಡಲಾಗುತ್ತಿದೆ ಎಂದರು.

    ಮೊಬೈಲ್ ಹಾಗೂ ದೂರದರ್ಶನದಿಂದಾಗಿ ಗ್ರಾಮೀಣ ಸೊಗಡಿನ ಸಂಸ್ಕೃತಿ ಆಚಾರ ವಿಚಾರಗಳು, ಕ್ರೀಡೆಗಳು, ನಾಟಕಗಳು ಇಲ್ಲದಂತಾಗಿದೆ. ಗ್ರಾಮಕ್ಕೆ ಬಂದ ಅತಿಥಿಗಳು ಹಾಗೂ ನೆರೆಹೊರೆ ಗ್ರಾಮಸ್ಥರಿಗೆ, ಮಕ್ಕಳಿಗೆ ಮಹಾಭಾರತದ ದೃಶ್ಯಗಳನ್ನು ವಿವರಿಸುವುದರೊಂದಿಗೆ ಮನರಂಜನೆಗಾಗಿ ರಾತ್ರಿ ಪಾಂಡು ವಿಜಯ ಎಂಬ ಬಯಲಾಟವನ್ನು ಏರ್ಪಡಿಸಲಾಗಿದೆಂದು ತಿಳಿಸಿದರು.

    ಗ್ರಾ.ಪಂ.ಅಧ್ಯಕ್ಷ ಕಾಲೆಕಾಯಿ ಹನುಮಂತಪ್ಪ, ಮುಖಂಡರಾದ ಹೊನ್ನಪ್ಪನಾಯಕ, ವೀರಭದ್ರಗೌಡ, ಅಡಿವೆಪ್ಪ, ರಾಮರಾಜ, ಶರೀಫ್‌ಸಾಬ್, ಮಂಜುನಾಥಗೌಡ, ಬೆಂಡೆಕಾಯಿ ವೀರೇಶ, ಸಣ್ಣ ಹನುಮಂತಪ್ಪ, ಎಳ್ಳಾರ‌್ತಿ ವೆಂಕಪ್ಪ, ವೀರಭದ್ರಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts