More

    ಮೆಟ್ರೋ ಕಾಮಗಾರಿ ನಡೆಯುತ್ತಿದ್ದಾಗ ಕುಸಿದ ಭೂಮಿ..!

    ಬೆಂಗಳೂರು: ಎರಡೇ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಕಂಬವೊಂದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಕುಸಿದು ಬಿದ್ದು ತಾಯಿ ಮಗು ಮೃತಪಟ್ಟ ಘಟನೆ ನಡೆದಿತ್ತು. ಆ ಘಟನೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಭೂಮಿ ಒಮ್ಮಿಂದೊಮ್ಮೆಲೆ ಕುಸಿದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

    ಮೆಟ್ರೋ ಕಾಮಗಾರಿಯಿಂದಾಗಿ ಅಲ್ಲಿಯೇ ಸಮೀಪದಲ್ಲಿ ಸಿಂಕ್ ಹೋಲ್ ಸೃಷ್ಟಿಯಾಗಿದ್ದು ಇದ್ದಕ್ಕಿದ್ದಂತೆ ರಸ್ತೆ ಕುಸಿದಿದೆ. ಈ ಅನಾಹುತ ಬ್ರಿಗೇಡ್ ರಸ್ತೆಯ ಮೆಟ್ರೋ ಮಾರ್ಗದ ಬಳಿ ನಡೆದಿದೆ. ಬ್ರಿಗೇಡ್ ರಸ್ತೆಯ ಬಳಿ ಇರುವ ಟ್ರಿನಿಟಿ ಸರ್ಕಲ್​ನಿಂದ ಶಿವಾಜಿನಗರದವರೆಗೂ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು ಶಿವಾಜಿನಗರದಿಂದ ಎರಡನೇ ಹಂತದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ.

    ಸುರಂಗ ಮಾರ್ಗ ಕಾಮಗಾರಿಯಲ್ಲಿ ಟಿಬಿಎಂ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಿಂಕ್ ಹೋಲ್ ಸೃಷ್ಟಿಯಾಗಿದೆ. ಸದ್ಯಕ್ಕೆ ಪೊಲೀಸರು ರಸ್ತೆ ಕ್ಲೋಸ್ ಮಾಡಿದ್ದು ಸಿಂಕ್​ ಹೋಲ್​ಅನ್ನು ಕೂಡ ಜನರ ಕಣ್ಣಿಗೆ ಕಾಣದಂತೆ ಟರ್ಪಾಲ್​ ಹಾಕಿ ಮುಚ್ಚಿದ್ದಾರೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಆಗುವ ಮೊದಲೇ ಈ ಸಿಂಕ್​ ಹೋಲ್​ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ಬಿಎಂಆರ್​ಸಿಎಲ್​ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

    ಮೆಟ್ರೋ ಕಾಮಗಾರಿ ನಡೆಯುತ್ತಿದ್ದಾಗ ಕುಸಿದ ಭೂಮಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts