More

    ‘ನಿನ್ನನ್ನು ನಕಲಿ ಎನ್​ಕೌಂಟರ್​ನಲ್ಲಿ ಮುಗಿಸುತ್ತಾರೆ, ನ್ಯಾಯಾಲಯಕ್ಕೆ ಶರಣಾಗು’ ಎಂದು ಸ್ಯಾಂಟ್ರೋ ರವಿಗೆ ಬಹಿರಂಗ ಪತ್ರ..!

    ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಆತನನ್ನು ಹುಡುಕುತ್ತಿದ್ದಾರೆ. ಇದೀಗ ಕೃಷ್ಣ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಬೇಗನೇ ಶರಣಾಗುವಂತೆ ಸ್ಯಾಂಟ್ರೋ ರವಿಗೆ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ಎಲ್ಲೆಡೆ ವೈರಲ್​ ಆಗುತ್ತಿದ್ದು ಒಳಗಡೆ ತಮ್ಮ ಪರಿಚಯ ಹೇಳಿಕೊಂಡ ಕೃಷ್ಣ, ಸ್ಯಾಂಟ್ರೋ ರವಿಗೆ ಯಾರೆಲ್ಲ ಏನೇನು ಮಾಡಲಿದ್ದಾರೆ ಎನ್ನುವ ಬಗ್ಗೆ ಎಚ್ಚರಿಸಿದ್ದಾರೆ. ಅದಲ್ಲದೇ ನ್ಯಾಯಾಲಯಕ್ಕೆ ಶರಣಾಗುವಂತೆ ಕೂಡ ಸಲಹೆ ನೀಡಿದ್ದಾರೆ.

    ಪತ್ರದ ಒಳಗಡೆ ‘ನನಗೆ ಇದೀಗ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ನಿನಗೆ ಈ ಬಹಿರಂಗ ಪತ್ರವನ್ನು ಬರೆದು, ಸಾಮಾಜಿಕ ಜಾಲತಾಣದ ಮೂಲಕ ನಿನಗೆ ತಿಳಿಸುವುದೇನೆಂದರೆ, ನಿನ್ನ ಹಿಂದೆ ಪೊಲೀಸ್​ ಅಧಿಕಾರಿಗಳಲ್ಲದೇ ನಿನ್ನೊಂದಿಗೆ ಅಕ್ರಮ ವ್ಯವಹಾರಗಳನ್ನು ನಡೆಸಿದ್ದ ಸರ್ಕಾರದ ಆಯಾಕಟ್ಟಿನ ಅಧಿಕಾರಿಗಳು, ಸರ್ಕಾರದ ಒಂದು ಭಾಗವಾಗಿರುವ ರಾಜಕಾರಣಿಗಳು, ಹಾಲಿ ವಿರೋಧ ಪಕ್ಷದಲ್ಲಿರುವ ರಾಜಕಾರಣಿಗಳೆಲ್ಲರೂ ನಿನ್ನ ಹಿಂದೆ ಬಿದ್ದಿದ್ದಾರೆ. ನಿನ್ನನ್ನು ನಕಲಿ “ಎನ್‌ಕೌಂಟರ್” ಮೂಲಕ ಸಾಯಿಸಬೇಕು ಅಥವಾ ನಿನ್ನ ಬಳಿ ಇರುವ ಎಲ್ಲಾ ಸಾಕ್ಷಾಧಾರಗಳನ್ನು ನಾಶಪಡಿಸಬೇಕು. ಈ ಮೂಲಕ ನಿನ್ನ ಜೀವ, ಜೀವನದ ಜೊತೆ ಆಟವಾಡಿ, ಅವರು ತಮ್ಮ ಅಪರಾಧ ಕೃತ್ಯಗಳನ್ನು ಮುಚ್ಚಿಟ್ಟು, ನಿನ್ನನ್ನು ಮುಗಿಸಿ ಅಥವಾ ಕಾನೂನಿನ ಕುಣಿಕೆಯಲ್ಲಿ ನಿನ್ನನ್ನು ಸಿಲುಕಿಸಿ ತಪ್ಪಿಸಿಕೊಳ್ಳಲಿದ್ದಾರೆ. ಈ ಏಕಮೇವ ದುರದ್ದೇಶದಿಂದ ಸಾಕಷ್ಟು ಅಧಿಕಾರಿಗಳು ತಮ್ಮ ಕೆಲಸ, ಕಾರ್ಯಗಳನ್ನು, ಊಟ-ನಿದ್ದೆಗಳನ್ನು ಬಿಟ್ಟು ನಿನ್ನನ್ನು ಹುಡುಕುತ್ತಿದ್ದಾರೆ.

    ಆದ್ದರಿಂದ ನಿನಗೆ ಈ ಮೂಲಕ ತಿಳಿಸುವುದೇನೆಂದರೆ, ಕೂಡಲೇ ನಿನಗೆ ಅನುಕೂಲವಾಗುವ ಯಾವುದಾದರೂ ಒಂದು ಮಾನ್ಯ ನ್ಯಾಯಾಲಯದಲ್ಲಿ ಶರಣಾಗಿ, ನಿನ್ನ ಹೇಳಿಕೆಯನ್ನು ನೀಡು. ಅದರಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿ/ರಾಜಕಾರಣಿಗಳ ಸಹಕಾರವನ್ನು ಪಡೆದುಕೊಂಡು, ನಿನ್ನ ಅಕ್ರಮ ವ್ಯವಹಾರಗಳನ್ನು ಹೇಗೆ ನಡೆಸಲಾಯಿತು?ಯಾರ ಜೊತೆಗೆ ನಿನ್ನ ಅಕ್ರಮ ವ್ಯವಹಾರಗಳ ಸಂಬಂಧಗಳಿದ್ದವು, ಹೇಗೆಲ್ಲಾ ಕೆಲಸ ಮಾಡುತ್ತಿದ್ದೆ, ನಿನ್ನ ಎಲ್ಲಾ ಅಕ್ರಮ ವ್ಯವಹಾರಗಳಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿರುವ ಪೊಲೀಸ್‌ ಅಧಿಕಾರಿಗಳು ಅಥವಾ ಸರ್ಕಾರಿ ಅಧಿಕಾರಿ ರಾಜಕಾರಣಿಗಳು ಯಾರು ಎಂಬ ಎಲ್ಲಾ ವಿವರವನ್ನು ತಿಳಿಸಿ, ನಿನ್ನ ಬಳಿ ಇರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಕೊಟ್ಟು, ಗುರುತು ಮಾಡಿಸಿಬಿಡು’ ಎಂದು ಬರೆಯಲಾಗಿದೆ.

    'ನಿನ್ನನ್ನು ನಕಲಿ ಎನ್​ಕೌಂಟರ್​ನಲ್ಲಿ ಮುಗಿಸುತ್ತಾರೆ, ನ್ಯಾಯಾಲಯಕ್ಕೆ ಶರಣಾಗು' ಎಂದು ಸ್ಯಾಂಟ್ರೋ ರವಿಗೆ ಬಹಿರಂಗ ಪತ್ರ..! 'ನಿನ್ನನ್ನು ನಕಲಿ ಎನ್​ಕೌಂಟರ್​ನಲ್ಲಿ ಮುಗಿಸುತ್ತಾರೆ, ನ್ಯಾಯಾಲಯಕ್ಕೆ ಶರಣಾಗು' ಎಂದು ಸ್ಯಾಂಟ್ರೋ ರವಿಗೆ ಬಹಿರಂಗ ಪತ್ರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts