More

    ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

    ನವದೆಹಲಿ: ಏಕಬಳಕೆ (ಸಿಂಗಲ್ ಯೂಸ್)​ ಅಂದರೆ ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್​ ಕಪ್​, ಪ್ಲೇಟ್​ ಹಾಗೂ ಸ್ಟ್ರಾಗಳ ಉತ್ಪಾದನೆಯನ್ನೇ ಬಂದ್​ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಏಕಬಳಕೆಯ ಪ್ಲಾಸ್ಟಿಕ್​ ವಸ್ತುಗಳ ಉಪಯೋಗ ನಿಷೇಧಿಸಿ ಸರ್ಕಾರ ಕ್ರಮಜರುಗಿಸಿದಾಗೆಲ್ಲ ಅವುಗಳ ಉತ್ಪಾದನೆಯನ್ನೇ ಏಕೆ ನಿಷೇಧಿಸಬಾರದು ಎಂದು ಜನರು ಪ್ರಶ್ನಿಸುತ್ತಿದ್ದರು. ಅದಿನ್ನು ಜಾರಿಯಾಗುವ ಭರವಸೆ ಈ ಘೋಷಣೆಯಿಂದ ಉಂಟಾಗಿದೆ.

    ಭಾರತವನ್ನು ಏಕಬಳಕೆಯ ಪ್ಲಾಸ್ಟಿಕ್​ ಉತ್ಪನ್ನಗಳಿಂದ ಮುಕ್ತಗೊಳಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದು, ಈ ವರ್ಗಕ್ಕೆ ಸೇರುವ ಸ್ಟ್ರಾ, ಕಪ್​, ಪ್ಲೇಟ್​, ಟ್ರೇ, ಪಾಲಿಸ್ಟಿರೀನ್​ ಮುಂತಾದವುಗಳ ಉತ್ಪಾದನೆಯನ್ನೇ ನಿಲ್ಲಿಸಲಿದೆ. ಖರೀದಿ ಬಳಿಕ ಒಮ್ಮೆ ಮಾತ್ರ ಬಳಸಿ ವರ್ಜಿಸುವ ಪ್ಲಾಸ್ಟಿಕ್​ ಉತ್ಪನ್ನಗಳನ್ನು ಏಕಬಳಕೆ ಉತ್ಪನ್ನ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದು, 2022ರ ಜುಲೈ 1ರಿಂದ ಈ ನಿಷೇಧ ಜಾರಿಗೆ ಬರಲಿದೆ ಎಂಬುದನ್ನೂ ತಿಳಿಸಿದೆ.

    ಇದನ್ನೂ ಓದಿ: ಭಾರತದಲ್ಲಿ ಪ್ರತಿನಿತ್ಯ 1,157 ಮಹಿಳೆಯರು ನಾಪತ್ತೆ!; ದೇಶದಲ್ಲಿ ಹೆಚ್ಚಾಗಿದೆ ಸ್ತ್ರೀಯರ ಮಿಸ್ಸಿಂಗ್​ ಕೇಸ್​..

    ಈ ನಡುವೆ ಪ್ಲಾಸ್ಟಿಕ್ ಕವರ್ (ಪಾಲಿಥೀನ್​ ಬ್ಯಾಗ್​) ದಪ್ಪವನ್ನು ಕೂಡ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಅದನ್ನು ಎರಡು ಹಂತಗಳಲ್ಲಿ ಜಾರಿಗೆ ತರಲಿರುವುದಾಗಿ ಹೇಳಿದೆ. ಮೊದಲಿಗೆ ಪಾಲಿಥೀನ್​ ಬ್ಯಾಗ್​ಗಳ ಥಿಕ್​​ನೆಸ್​(ದಪ್ಪ) 50 ಮೈಕ್ರಾನ್​ನಿಂದ 120 ಮೈಕ್ರಾನ್​ಗೆ ಹೆಚ್ಚಿಸಿರುವುದಾಗಿ ಸರ್ಕಾರ ತಿಳಿಸಿದೆ. ಮೊದಲ ಹಂತದಲ್ಲಿ 75 ಮೈಕ್ರಾನ್​ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್​ ಕವರ್​ಗಳನ್ನು ಸೆಪ್ಟೆಂಬರ್​ 30ರಿಂದ ನಿಷೇಧಿಸಲಾಗುವುದು ಎಂದಿರುವ ಸರ್ಕಾರ, ಎರಡನೆಯ ಹಂತದಲ್ಲಿ 120 ಮೈಕ್ರಾನ್​ಗಿಂತ ಕಡಿಮೆ ದಪ್ಪದ ಕವರ್​ಗಳನ್ನು 2022ರ ಡಿ.31ರಿಂದ ನಿಷೇಧಿಸಲಾಗುವುದು ಎಂದು ತಿಳಿಸಿದೆ.

    ಆದರೆ ಈ ಥಿಕ್​ನೆಸ್​ ಗೈಡ್​ಲೈನ್ಸ್ ಕಾಂಪೊಸ್ಟೇಬಲ್ ಪ್ಲಾಸ್ಟಿಕ್​ನಿಂದ ಮಾಡಿದ ಕ್ಯಾರಿಬ್ಯಾಗ್​ಗಳಿಗೆ ಅನ್ವಯಿಸುವುದಿಲ್ಲ ಎಂದೂ ಸರ್ಕಾರ ಹೇಳಿದೆ. ಅಂಥ ಬ್ರ್ಯಾಂಡ್​ಗಳ ಮಾಲೀಕರು ಆ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಅವರಿಂದ ಪ್ರಮಾಣಪತ್ರ ಪಡೆದಿರಬೇಕು ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)

    ನಾನು ಆರ್​ಎಸ್​ಎಸ್​ ಸ್ವಯಂಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ: ಸಿ.ಟಿ. ರವಿ

    ಹಾರ-ತುರಾಯಿ ಬದಲು ಪುಸ್ತಕ ಆಯ್ತು; ಇದೀಗ ಮತ್ತೊಂದು ಆದೇಶ ಹೊರಡಿಸಲು ಸಜ್ಜಾಗಿದ್ದಾರೆ ಸಿಎಂ ಬೊಮ್ಮಾಯಿ..

    ಮತ್ತೆ ಎದುರಾಯ್ತು ಹಬ್ಬಗಳಿಗೂ ನಿರ್ಬಂಧ; ಮನೆ-ದೇವಸ್ಥಾನಗಳ ಒಳಗಷ್ಟೇ ಹಬ್ಬ ಆಚರಿಸಿ ಎಂದು ಆದೇಶಿಸಿದ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts