More

    ಅಬ್ಬಾ!! ಇದೆಂಥ ಸಾಹಸ: ಒಂದೇ ಚಕ್ರದ ಸೈಕಲ್‌ನಲ್ಲಿ ದೇಶ ಸುತ್ತುತ್ತಿರುವ ಯುವಕ

    ಭಟ್ಕಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕ್ಲಿಂಗ್ ಮಾಡುವುದು ಎಂದರೇ ಒಂದು ಕಷ್ಟದ ಕೆಲಸ. ಅದರಲ್ಲೂ ಒಂದೆ ಚಕ್ರ ಹೊಂದಿದ ಸೈಕಲ್ ತುಳಿದು ಸುಮಾರು 4500ಕ್ಕಿಂತಲೂ ಅಧಿಕ ದೂರ ಪ್ರಯಾಣಿಸುವದು ಎಂದರೆ ಇದೊಂದು ಸಾಹಸವೆ ಸರಿ.
    ಇಂತಹ ಒಂದು ಸಾಹಸಕ್ಕೆ ಕೇರಳದ ಕಣ್ಣೂರಿನ 23ರ ಹರೆಯದ ಸನೀದ್ ಕೈ ಹಾಕಿದ್ದು ಒಂದೇ ಚಕ್ರ ಹೊಂದಿದ ಸೈಕಲ್‌ನೊಂದಿಗೆ 3 ತಿಂಗಳ ಹಿಂದೆ ಕೇರಳದಿಂದ ಪ್ರಯಾಣ ಬೆಳೆಸಿದ್ದಾರೆ. ಗುರುವಾರ ಅವರು ಒಂದೇ ಚಕ್ರದ ಸೈಕಲ್‌ ತುಳಿಯುತ್ತ ಭಟ್ಕಳ ದಾಟಿದ್ದಾರೆ.

    ಸವಾದ್ ಮತ್ತು ಸಜಾದ್ ಅವರಿಂದ ಸ್ಫೂರ್ತಿ ಪಡೆದು ಅವರು ಕೂಡ ಸೈಕಲ್ ಮೇಲೆ ಅವರೊಂದಿಗೆ ತೆರಳುತ್ತಿದ್ದಾರೆ. ಡ್ರಗ್ಸ್ ವಿರುದ್ಧದ ಜಾಗೃತಿ ಮೂಡಿಸುವ ಸಲುವಾಗಿ “ಸೇ ನೋ ಟು ಡ್ರಗ್ಸ್”ಫಲಕವನ್ನು ತಮ್ಮ ಸೈಕಲ್‌ ಗೆ ಅಂಟಿಸಿಕೊಂಡು ಪ್ರಯಾಣ ಮಾಡುತ್ತಿದ್ದಾರೆ.
    ಕಳೆದ ಒಂದು ವರ್ಷದಿಂದ ಒಂದೇ ಚಕ್ರದಲ್ಲಿ ಸಂಚರಿಸಲು ನಿರಂತರವಾಗಿ ಪ್ರಯತ್ನಿಸಿದ್ದ ಸನೀದ್ ಇದೀಗ ಈ ಸಾಹಸದಲ್ಲಿ ಯಶಸ್ವಿಯಾಗಿದ್ದು, ಇದೀಗ ಒಂದೇ ಟಯರ್ ಇರುವ ಸೈಕಲ್ ಮೂಲಕ ದೇಶ ಸುತ್ತುವ ಹಂತಕ್ಕೆ ಬಂದಿದ್ದಾರೆ. ಈಗಾಗಲೇ ಸುಮಾರು 2500 ಕಿಲೋಮೀಟರ್ ನಷ್ಟು ಸೈಕಲ್ ಸವಾರಿ ಮಾಡಿದ್ದಾರೆ. ಭಟ್ಕಳ ದಾಟಿರುವ ಈ ಯುವಕರ ತಂಡ, ಕೇರಳದ ಪ್ರತಿ ಜಿಲ್ಲೆಗೂ ತೆರಳಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದೆ.
    ಸುಮಾರು 4500 ಸಾವಿರ ಕಿಲೋಮೀಟರ್ ದೂರದ ಈ ಯಾತ್ರೆಯನ್ನು ನೇರ ಮಾರ್ಗದ ಮೂಲಕ ಕಾಶ್ಮೀರ ತಲುಪುವ ಪ್ಲಾನ್ ಕೂಡಾ ಹಾಕಿಕೊಂಡಿದ್ದಾರೆ.

    ಅಷ್ಟೇ ಅಲ್ಲ, ಒಂದೇ ಚಕ್ರದ ಸೈಕಲ್ ತುಳಿಯೋದರೊಂದಿಗೆ ಸನೀದ್ ಹೊಸ ದಾಖಲೆ ಬರೆಯುವ ಧಾವಂತದಲ್ಲಿದ್ದಾರೆ. ಪ್ರತಿದಿನ ಸುಮಾರು 40ಕಿ.ಮಿ ಕ್ರಮಿಸುವ ಇವರು ರಮಜಾನ್ ಉಪವಾಸ ಇರುವದರಿಂದ ಪ್ರತಿದಿನ 20ಕಿ.ಮಿಗಳನ್ನು ಕ್ರಮಿಸುತ್ತಿದ್ದಾರೆ. ರಾತ್ರಿಯಾಗುತ್ತಿರುವಂತೆ ಯಾವುದಾದರೂ ಮಸೀದಿ, ಮಂದಿರ ಅಥವಾ ಪೆಟ್ರೋಲ್ ಪಂಪ್ ಬಳಿಯಲ್ಲಿ ವಿಶ್ರಮಿಸಿ ಮತ್ತೆ ಯಾತ್ರೆಯನ್ನು ಮುಂದುವರೆಸುತ್ತಿದ್ದಾರೆ. ಪ್ರತಿಯೊಬ್ಬರೂ 60 ಕೆಜಿಯನ್ನು ಹೊತ್ತುಕೊಂಡು ಸವಾರಿ ಮಾಡುತ್ತಿದ್ದು ಆದಷ್ಟು ಬೇಗ ನಾವು ನಮ್ಮ ಗುರಿಯನ್ನು ತಲುಪಿ ವಿಶ್ವದಾಖಲೆ ಬರೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ: ಚೆಕ್‌ ಪೋಸ್ಟ್‌ಗಳಲ್ಲಿ ಕಂಟೇನರ್‌ ಹೌಸ್‌ ನೆರಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts