More

    ಚೆಕ್‌ಪೋಸ್ಟ್‌ಗಳಲ್ಲಿ ಕಂಟೇನರ್‌ ಹೌಸ್‌ ನೆರಳು

    ಕಾರವಾರ: ಚುನಾವಣೆ ಅಕ್ರಮ ತಡೆಯುವ ಸಲುವಾಗಿ ಜಿಲ್ಲೆಯ 25 ಕಡೆಗಳಲ್ಲಿ ವಿಶೇಷ ತನಿಖಾ ಠಾಣೆ(ಚೆಕ್ ಪೋಸ್ಟ್) ಗಳನ್ನು ತೆರೆಯಲಾಗಿದೆ. ಕೆಲವು ಚೆಕ್ ಪೋಸ್ಟ್ಗಳಲ್ಲಿ ಅಳವಡಿಸಲಾದ ಕಂಟೇನರ್ ಹೌಸ್‌ಗಳು ಗಮನ ಸೆಳೆಯುತ್ತಿವೆ.
    ಕಾರವಾರ ತಾಲೂಕಿನ ಮೈಗಿಣಿ, ಮುಂಡಗೋಡ ತಾಲೂಕಿನ ಬಾಚಣಕಿ, ಸನವಳ್ಳಿ, ಶಿರಸಿ ತಾಲೂಕಿನ ತಿಗಣಿ, ಸಿದ್ದಾಪುರ ತಾಲೂಕಿನ ಚೂರಿಕಟ್ಟೆ, ಜೊಯಿಡಾ ತಾಲೂಕಿನ ರಾಮನ ನಗರ, ಸಿದ್ದಾಪುರ ತಾಲೂಕಿನ ಬಿಣಗಿ ಚೆಕ್ ಪೋಸ್ಟ್ಗಳಿಗೆ ಕಂಟೇನರ್ ಹೌಸ್‌ಗಳನ್ನು ಒದಗಿಸಲಾಗಿದೆ.
    ಸುಮಾರು 10 X 10 ಅಡಿ ವಿಸ್ತೀರ್ಣದ ಕಬ್ಬಿಣದ ಕಂಟೇನರ್ ಗೌಸ್‌ನಲ್ಲಿ ಎರಡು ಕಿಟಕಿಗಳಿವೆ. ಒಳಗಡೆ ಫ್ಲೈ ವುಡ್, ಸನ್‌ಮೈಕ್ ಹಾಕಿ ಕೋಣೆಯನ್ನು ಸಜ್ಜು ಮಾಡಲಾಗಿದೆ. ಅದರೊಳಗೆ ಮೊಬೈಲ್ ಚಾರ್ಜಿಂಗ್ ಸಾಕೆಟ್, ಫ್ಯಾನ್ ಮುಂತಾದ ಸೌಕರ್ಯಗಳಿವೆ. ಕಾಡಿನೊಳಗೆ, ಮಳೆ, ಬಿಸಿಲಿನ ಸಂದರ್ಭದಲ್ಲಿ ರಕ್ಷಣೆ ಪಡೆಯಲು ಈ ಕಂಟೇನರ್ ಹೌಸ್‌ಗಳು ಅನುಕೂಲವಾಗಲಿವೆ.
    ಅಂತಾರಾಜ್ಯ ಚೆಕ್ ಪೋಸ್ಟ್ಗಳಾದ ಕಾರವಾರದ ಮಾಜಾಳಿ ಹಾಗೂ ಅನಮೋಡಗಳು ಶಾಶ್ವತ ತನಿಖಾ ಠಾಣೆಗಳಾಗಿದ್ದು, ಅಲ್ಲಿ ಕಾಯಂ ಕಟ್ಟಡಗಳೂ ಇವೆ. ಆದರೆ, ಉಳಿದ ಹಲವೆಡೆ ತಾತ್ಕಾಲಿಕ ಚೆಕ್‌ಪೋಸ್ಟ್ ತೆರೆಯುವುದರಿಂದ ಅಲ್ಲಿ ಸಿಬ್ಬಂದಿಗೆ ಚಪ್ಪರ ಅಥವಾ ಪೆಂಡಾಲ್ ಗತಿಯಾಗಿದೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅನುಕೂಲವಾಗಲು ತಲಾ 2 ಲಕ್ಷ ರೂ. ವೆಚ್ಚದಲ್ಲಿ ಕಂಟೇನರ್‌ಗಳನ್ನು ಜಿಲ್ಲಾಡಳಿತ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಖರೀದಿಸಿದ್ದು, ಈಗ ಅನುಕೂಲವಾಗಿದೆ.
    ವೆಬ್ ಕಾಸ್ಟಿಂಗ್
    ಕಾಯಂ ಚೆಕ್ ಪೋಸ್ಟ್ಗಳಿಗೆ ಈಗಾಗಲೇ ಸಿಸಿ ಕ್ಯಾಮರಾ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ ಮೈಂಗಿಣಿಯಲ್ಲಿ ಅಂತಾರಾಜ್ಯ ಹಾಗೂ ಹಲವು ಅಂತರ ಜಿಲ್ಲಾ ಮತ್ತು ಜಿಲ್ಲೆಯೊಳಗಿನ ಚೆಕ್ ಪೋಸ್ಟ್ಗಳನ್ನು ತರೆಯಲಾಗಿದೆ. ಎಲ್ಲ 25 ಚೆಕ್ ಪೋಸ್ಟ್ಗಳಿಗೂ ಸಿಸಿ ಕ್ಯಾಮರಾ ಅಳವಡಿಸಿ ಅದರ ನೇರ ಸಂಪರ್ಕವನ್ನು ಕಾರವಾರದ ಜಿಲ್ಲಾಽಕಾರಿ ಕಚೇರಿಯಲ್ಲಿ ತೆರೆಯಲಾದ ಜಿಲ್ಲಾ ಚುನಾವಣಾ ನಿಯಂತ್ರಣ ಕೊಠಡಿಗೆ ನೀಡಲಾಗಿದೆ.
    ಒಂದೆರಡು ಕಡೆ ನೆಟ್ವರ್ಕ್ ಸಮಸ್ಯೆ ಹೊರತುಪಡಿಸಿ ಉಳಿದೆಲ್ಲ ಕಡೆಯ ಸಿಸಿ ಕ್ಯಾಮರಾದ ವಿಡಿಯೋಗಳನ್ನು ನೇರವಾಗಿ ಜಿಲ್ಲಾಽಕಾರಿ ಕಚೇರಿಯಲ್ಲಿ ಕುಳಿತೇ ವೀಕ್ಷಿಸಬಹುದಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಸಿಸಿ ಕ್ಯಾಮರಾ ವೀಕ್ಷಣೆಗಾಗಿಯೇ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ವೆಬ್ ಕಾಸ್ಟಿಂಗ್ ಇಲ್ಲದಿದ್ದರೂ ಪ್ರತಿ ಚೆಕ್ ಪೋಸ್ಟ್ನ ಹಾರ್ಡ್ ಡಿಸ್ಕ್ನನ್ನು ಕಾಲಕಾಲಕ್ಕೆ ತಂದು ಚುನಾವಣಾ ಕೋಶಕ್ಕೆ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಕನ್ನಡ ನಾಮಫಲಕ-ನಗರಸಭೆಯಿಂದ 235 ನೋಟಿಸ್‌ ಜಾರಿ



    ಪ್ರತಿ ಚೆಕ್ ಪೋಸ್ಟ್ಗೆ ಕಂದಾಯ ಇಲಾಖೆಯ ಒಬ್ಬ, ಗ್ರಾಮೀಣಾಭಿವೃದ್ಧಿ ಇಲಾಖೆಯ ಒಬ್ಬ ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿ ತಂಡವು 8 ತಾಸು ಕೆಲಸ ಮಾಡದಲಿದ್ದು, ದಿನದ 24 ಗಂಟೆಯೂ ನಿಗಾ ಇರಲಿದೆ.
    ಗಂಗೂಬಾಯಿ ಮಾನಕರ್
    ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts