More

    ಲಾಕ್​ಡೌನ್​ನಲ್ಲಿ ‘ಸಿಂಗಲ್ಸ್​’ ಕಷ್ಟಕ್ಕೆ ಸ್ಪಂದಿಸಿದೆ ಈ ಸರ್ಕಾರ; ಸೆಕ್ಸ್​ಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ

    ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ಲಾಕ್​ಡೌನ್ ಇದೆ. ಇದರಿಂದಾಗಿ ಜನರು ದಿನದ ಬಹುಪಾಲು ಸಮಯ ಮನೆಯಲ್ಲಿಯೇ ಕಳೆಯಬೇಕು. ಕೆಲಸಕ್ಕೆಂದು ಕಚೇರಿಗಳಿಗೆ ಹೋಗುವಂತಿಲ್ಲ. ಆಯಾ ರಾಷ್ಟ್ರಗಳು ನೀಡಿದ ಮಾರ್ಗಸೂಚಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

    ಮನೆಯಲ್ಲಿ ಕುಟುಂಬದವರೊಟ್ಟಿಗೆ ಇರುವವರಿಗೆ ಅಷ್ಟೊಂದು ಏಕತಾನತೆ ಕಾಡದು. ಬೇಸರ ಉಂಟಾಗದು. ಆದರೆ ಸಿಂಗಲ್​ (ಏಕಾಂಗಿ) ಆಗಿರುವವರಿಗೆ ಸಮಯ ಕಳೆಯುವುದೇ ಕಷ್ಟವಾಗಿದೆ. ಅಂತಹ ಏಕಾಂಗಿ ಮಹಿಳೆ, ಪುರುಷರಿಗೆ ಡಚ್​ ಸರ್ಕಾರ ಒಂದು ವಿಶಿಷ್ಟ ಸಲಹೆ ನೀಡಿದೆ. ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಾರ್ಗಸೂಚಿಯನ್ನೇ ಬಿಡುಗಡೆ ಮಾಡಿದೆ.

    ಲಾಕ್​ಡೌನ್​ನಲ್ಲಿ ಕಾಡುವ ಏಕತಾನತೆಯಿಂದ ಪಾರಾಗಲು ಒಬ್ಬಂಟಿ (ಪುರುಷ/ಮಹಿಳೆ)ಯಾಗಿ ಇರುವವರು ಸೆಕ್ಸ್​ಗಾಗಿ ಸಂಗಾತಿಗಳನ್ನು ಹುಡುಕಿಕೊಳ್ಳಿ ಎಂದು ನೆದರ್​​ಲ್ಯಾಂಡ್​ನ ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕಾಗಿ ಇರುವ ರಾಷ್ಟ್ರೀಯ ಸಂಸ್ಥೆ ತನ್ನ ಹೊಸ ಮಾರ್ಗಸೂಚಿಯಲ್ಲಿ ಹೇಳುವ ಮೂಲಕ, ಸಿಂಗಲ್​ ಇರುವವರಿಗೆ ಬಂಪರ್​ ಐಡಿಯಾ ಕೊಟ್ಟಿದೆ.

    ಇದನ್ನೂ ಓದಿ: ಫೋನ್​​ನಲ್ಲಿ ಕೇಳಿಬರುವ ಕರೊನಾ ಕಾಲರ್​ ಟ್ಯೂನ್​ಗೆ ಕನ್ನಡದಲ್ಲಿ ಧ್ವನಿ ಕೊಟ್ಟವರು ಇವರೇ ನೋಡಿ…

    ಲಾಕ್​ಡೌನ್​ ವೇಳೆ ಸಮಯ ಕಳೆಯಲು ಲೈಂಗಿಕ ಸಂಪರ್ಕ ಹೊಂದಿ. ಆದರೆ ಸೂಕ್ತ ಸಂಗಾತಿಯನ್ನು ನೀವೇ ಹುಡುಕಿಕೊಳ್ಳಿ. ಹೀಗೆ ಸೆಕ್ಸ್​ ಜತೆಗಾರನನ್ನು/ ಜತೆಗಾರ್ತಿಯನ್ನು ಹುಡುಕಿಕೊಳ್ಳುವಾಗ ಎಚ್ಚರವಿರಲಿ. ಅವರಲ್ಲಿ ಕರೊನಾ ಲಕ್ಷಣಗಳು ಇರಬಾರದು. ಒಮ್ಮೆ ಅವರನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಸೋಂಕಿನ ಲಕ್ಷಣಗಳು ಕಂಡುಬಂದರೆ, ಯಾವ ಕಾರಣಕ್ಕೂ ಲೈಂಗಿಕ ಕ್ರಿಯೆ ನಡೆಸಬೇಡಿ ಎಂದು ಡಚ್​ ಸರ್ಕಾರ ಸಲಹೆ ನೀಡಿದೆ.

    ಇದು ಪತಿ ಅಥವಾ ಪತ್ನಿಯಿಂದ ದೂರ ಆಗಿ ಒಂಟಿಯಾಗಿ ಜೀವಿಸುತ್ತಿರುವವರಿಗೆ ನೀಡಲಾದ ಮಾರ್ಗಸೂಚಿ. ಡಚ್​ ಸರ್ಕಾರ ಲಾಕ್​ಡೌನ್​ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದಂತೆ ಅಲ್ಲಿನ ಕೆಲವು ವಿಶ್ಲೇಷಕರು ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಸಿಂಗಲ್ ಆಗಿರುವವರ ದೈಹಿಕ ವಾಂಛೆಯ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದರು.
    ಹಾಗಾಗಿ ಪರಿಷ್ಕೃತ ಗೈಡ್​ಲೈನ್​ ನೀಡಿರುವ ಸರ್ಕಾರ, ಒಬ್ಬಂಟಿಯಾಗಿರುವವರೂ ಲೈಂಗಿಕ ಸಂಪರ್ಕವನ್ನು ಬಯಸುತ್ತಾರೆ ಎಂಬುದು ಸತ್ಯ. ಹಾಗಾಗಿ ಈ ಅವಕಾಶ ನೀಡಲಾಗಿದೆ. ನೀವು ಇಷ್ಟು ದಿನ ಯಾರೊಂದಿಗಾದರೂ ನಿರಂತರವಾಗಿ ಸೆಕ್ಸ್​ನಲ್ಲಿ ತೊಡಗಿದ್ದರೆ ಮೊದಲು ಅವರನ್ನೇ ಸಂಪರ್ಕಿಸಿ. ಇಲ್ಲವಾದರೆ ಜಾಗರೂಕತೆಯಿಂದ ಹುಡುಕಿಕೊಳ್ಳಿ ಎಂದು ಹೇಳಿದೆ.

    ದನ್ನೂ ಓದಿ: ಲಾಕ್​ಡೌನ್​ ತೆರವಾದ ಬಳಿಕ ಸಾರ್ವಜನಿಕ ಸಾರಿಗೆ ಬಳಕೆ ಟ್ರೆಂಡ್​ ಹೇಗಿರುತ್ತೆ?

    ಹಾಗೇ ತುಂಬ ಜನರ ಸಂಪರ್ಕಕ್ಕೆ ಹೋದರೆ, ಅಲ್ಲಿ ಕೂಡ ಕರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದನ್ನು ಮರೆಯದಿರಿ ಎಂದೂ ತಿಳಿಸಿದೆ.

    ನೆದರ್​ಲ್ಯಾಂಡ್​ನಲ್ಲಿ 43,880 ಸೋಂಕಿತರು ಇದ್ದು, 5,500 ಜನರು ಮೃತಪಟ್ಟಿದ್ದಾರೆ.

    ಇದನ್ನೂ ಓದಿ:ವೃದ್ಧೆಯ ಕೊಂದ ಚಿರತೆ ಸೆರೆ ಹಿಡಿಯಲು ಡ್ರೋನ್‌ ಬಳಕೆ! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts