More

    ಗಾಯಕಿ ಎಸ್​. ಜಾನಕಿ ಸಾವಿನ ವದಂತಿ!; ಕುಟುಂಬದ ಮೂಲಗಳು ಹೇಳುವುದೇನು?

    ಹಿರಿಯ ಗಾಯಕಿ ಎಸ್​ ಜಾನಕಿ ನಿಧನರಾಗಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ವದಂತಿಗೆ ಕುಟುಂಬದ ಮೂಲಗಳು ಬ್ರೇಕ್​ ಹಾಕಿವೆ. ಎಸ್​. ಜಾನಕಿಯವರಿಗೆ ಏನೂ ಆಗಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಜಾನಕಿ ಕುಟುಂಬ ತಿಳಿಸಿದೆ.
    ವಯೋಸಹಜ ಕಾಯಿಲೆಯಿಂದ ಎಸ್​.ಜಾನಕಿ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ, ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ, ಮನೋ ಮತ್ತು ಮನೋಬಾಲ ಸೇರಿ ಹಲವರು ಜಾನಕಿ ಸಾವಿನ ಸುದ್ದಿ ಸುಳ್ಳು ಎಂದು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಸುದೀಪ್​ ಚಿತ್ರಕ್ಕೆ ರಾಜಮಂಡ್ರಿಯಿಂದ 22 ಲಾರಿಗಳಲ್ಲಿ ಬಂದಿದ್ದೇನು?

    ಜಾನಕಿ ಅವರ ಆರೋಗ್ಯದ ಬಗ್ಗೆ ಬೆಳಗ್ಗೆಯಿಂದ ಏನಿಲ್ಲ ಅಂದರೂ 20ಕ್ಕೂ ಅಧಿಕ ಫೋನ್​ ಕರೆಗಳನ್ನು ಸ್ವೀಕರಿಸಿದ್ದೇನೆ. ಒಂದಷ್ಟು ಮಂದಿ ಜಾಲತಾಣಗಳಲ್ಲಿ ಜಾನಕಿ ಇನ್ನಿಲ್ಲ ಎಂಬ ಸುದ್ದಿ ಪ್ರಕಟಿಸುತ್ತಿದ್ದಾರೆ. ಎಂಥ ನಾನ್ಸೆನ್ಸ್ ಕೆಲಸವದು? ಜಾನಕಿ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿದ್ದಾರೆ. oಂದಷ್ಟು ಕಲಾವಿದರು ಪ್ರಾಣಕ್ಕಿಂತ ಹೆಚ್ಚು ಅವರನ್ನು ಇಷ್ಟಪಡುತ್ತಾರೆ, ಈ ಸುದ್ದಿ ಕೇಳಿ ಅವರ ಎದೆಯೇ ನಡುಗಿರುತ್ತದೆ. ದಯವಿಟ್ಟು ಜಾಲತಾಣಗಳನ್ನು ಪಾಸಿಟಿವಿಟಿಗಾಗಿ ಬಳಕೆ ಮಾಡಿ, ತಮಾಷೆ ಮಾಡಬೇಡಿ’ ಎಂದು ಎಸ್​.ಇ. ಬಾಲಸುಬ್ರಮಣ್ಯ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಅಂಬಿ-ವಿಷ್ಣು ಸ್ನೇಹ-ಬಾಂಧವ್ಯಕ್ಕೆ ಮಸಿ ಬೆಳೆಯೋದು ಬೇಡ …

    ಇನ್ನು ಎಸ್​. ಜಾನಕಿ ಸಾವಿನ ಕುರಿತ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇದೇ ರೀತಿ ವದಂತಿಗಳು ಹರಿದಾಡಿದ್ದವು. ಆಗ ನೇರವಾಗಿ ಎಸ್​. ಜಾನಕಿ ಉತ್ತರ ಕೊಟ್ಟಿದ್ದರು. ಇದೀಗ ಮತ್ತೆ ಅವರ ಸಾವಿನ ಸುದ್ದಿ ಹರಿದಾಡುತ್ತಿರುವುದಕ್ಕೆ ಕಾರಣ ಇದೆ. ಇತ್ತೀಚೆಗಷ್ಟೇ ಸಣ್ಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅದನ್ನೇ ತಿರುಚಿ ಅವರ ನಿಧನವಾಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ.
    ಅಂದಹಾಗೆ, 1957ರಲ್ಲಿ ಕಾಲಿವುಡ್​ ಮೂಲಕ ಗಾಯನ ಲೋಕಕ್ಕೆ ಆಗಮಿಸಿದ ಎಸ್​. ಜಾನಕಿ ಇಲ್ಲಿಯವರೆಗೂ 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 2016ರಲ್ಲಿ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದರು.

    ಆಗೋದೆಲ್ಲ ಒಳ್ಳೇದಕ್ಕೆ… ನಿರ್ದೇಶನಕ್ಕೆ ಅಪೂರ್ವ ತಯಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts