More

    ಹೆಚ್ಚುವರಿ ಜಿಲ್ಲಾ, ಸೆಷನ್ಸ್ ಕೋರ್ಟ್ ಆರಂಭಿಸಿ

    ಸಿಂಧನೂರು: ತಾಲೂಕಿನಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶೀಘ್ರ ಕಾರ್ಯಾರಂಭಕ್ಕೆ ಒತ್ತಾಯಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿಗೆ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮನಗೌಡ ನೇತೃತ್ವದಲ್ಲಿ ವಕೀಲರ ನಿಯೋಗ ಶುಕ್ರವಾರ ಮನವಿ ಸಲ್ಲಿಸಿತು.

    ತಾಲೂಕಿನ ವಕೀಲರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಉಚ್ಚ ನ್ಯಾಯಾಲಯ ಹೆಚ್ಚುವರಿ ಸೆಷನ್ ನ್ಯಾಯಾಲಯ ಆರಂಭಕ್ಕೆ ಅನುಮತಿ ನೀಡಿದ್ದು, ಅದರ ಕಡತವನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಮಾ.21ರಂದು ಕಳುಹಿಸಲಾಗಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿ ಶೀಘ್ರ ನ್ಯಾಯಾಲಯ ಕಾರ್ಯಾರಂಭಿಸಲು ಒತ್ತಾಯಿಸಬೇಕೆಂದು ಮನವಿ ಮಾಡಿದರು.

    ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಮುನೇನಕೊಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿಗೂ ಮನವಿ ಸಲ್ಲಿಸಲಾಯಿತು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಜಿಪಂ ಮಾಜಿ ಸದಸ್ಯ ಎನ್. ಶಿವನಗೌಡ ಗೊರೇಬಾಳ, ವಕೀಲರ ಸಂಘದ ಕಾರ್ಯದರ್ಶಿ ವೀರೇಶ ಚಿಂಚರಕಿ, ಖಜಾಂಚಿ ಕೆ.ವೀರಭದ್ರೇಗೌಡ, ವಕೀಲರಾದ ಅಮರೇಗೌಡ ಕಲ್ಮಂಗಿ, ಜೆ.ರಾಯಪ್ಪ, ಪ್ರಹ್ಲಾದ ಗುಡಿ, ಎಚ್.ವೀರಭದ್ರಪ್ಪ, ರಾಮು ಕೆಂಗಲ್, ಈಶಪ್ಪ ದೇಸಾಯಿ, ಚಿದಾನಂದಪ್ಪ, ಪ್ರಾಣೇಶ ದೇಶಪಾಂಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts