More

    ರಾಗಲಪರ್ವಿಯಲ್ಲಿ 17ನೇ ಶತಮಾನದ ವೀರಗಲ್ಲು ಪತ್ತೆ

    ಸಿಂಧನೂರು: ತಾಲೂಕಿನ ರಾಗಲಪರ್ವಿ ಗ್ರಾಮದ ಸುಂಕಲಮ್ಮದೇವಿ ದೇವಸ್ಥಾನದ ಹಿಂಬದಿಯಲ್ಲಿ ಕ್ರಿ.ಶ.17-18ನೇ ಶತಮಾನದ ವೀರಗಲ್ಲು ಪತ್ತೆಯಾಗಿದೆ ಎಂದು ಸಂಶೋಧಕ ಹಾಗೂ ಇತಿಹಾಸ ಉಪನ್ಯಾಸಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿ ತಿಳಿಸಿದ್ದಾರೆ.

    ಈ ಶಾಸನವು ಕಣಶಿಲೆಯಲ್ಲಿದ್ದು, ಕನ್ನಡ ಲಿಪಿಯಿಂದ ರಚಿತವಾಗಿದೆ. ಇದು ಒಟ್ಟು ಹನ್ನೆರಡು ಸಾಲುಗಳಿಂದ ರಚಿತಗೊಂಡು ಮೂರು ಅಡಿ ಎತ್ತರ, ಒಂದೂವರೆ ಅಡಿ ಅಗಲವಿದೆ. ಇದು ಶಭ ಶಭಾಯ ಎಂದು ಆರಂಭಗೊಂಡಿದ್ದು ದೂಪ ಕಂಬಾರರ ಕುರಿತು ತಿಳಿಸುತ್ತದೆ. ಹಾಗೆಯೇ ಶಾಸನ ಮುಂದುವರಿದು ಛತ್ರ (ಸತ್ರ)ದೊಂದಿಗೆ ಊರಿನ ನಾಯಕ ಜನಾಂಗದವರು ಹಜಾರ ಕಟ್ಟಿಸಿದ ಮಾಹಿತಿ ನೀಡುತ್ತದೆ. ರಾಗಲಪರ್ವಿ ಗ್ರಾಮವು ಮಧ್ಯಯುಗದಲ್ಲ್ಲಿ ಬಹುಶಃ ಶ್ರೀಶೈಲ ಅಥವಾ ಬೇರೊಂದು ಸ್ಥಳಕ್ಕೆ ಭೇಟಿ ನೀಡುವ ಯಾತ್ರಿಕರಿಗಾಗಿ ಇಲ್ಲೊಂದು ವಿಶ್ರಾಂತಿ ಸ್ಥಳ (ತಂಗುದಾಣ, ಧರ್ಮಶಾಲೆ)ವನ್ನು ನಿರ್ಮಿಸಲಾಗಿತ್ತು.

    ಪ್ರಸ್ತುತ ದಿನಗಳಲ್ಲಿ ಬಾಗಲಕೋಟೆ, ವಿಜಯಪುರ ಮೊದಲಾದ ಜಿಲ್ಲೆಗಳ ಜನರು ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಾಲನಡಿಗೆ ಮೂಲಕ ಪ್ರಯಾಣಿಸುವಾಗ ಈ ಗ್ರಾಮದ ಮುಖಾಂತರ ಹಾದು ಹೋಗುತ್ತಾರೆ. ಹಾಗೆಯೇ ಶಾಸನೋಕ್ತ ಹಜಾರ (ಮನೆಯ ಅಂಗಳ, ದಿವಾನ ಖಾನೆ) ವನ್ನು ಬಹುಶಃ ಛತ್ರದ ಹತ್ತಿರ ಅಂದಿನ ದಿನಗಳಲ್ಲಿರಬೇಕು. ಇದನ್ನು ಸ್ಥಳೀಯ ನಾಯಕ ಜನಾಂಗದವರು ನಿರ್ಮಿಸಿದ್ದರು. ಆದರೆ ಈಗ ಛತ್ರ ಮತ್ತು ಹಜಾರಗಳು ಇದ್ದ ಅವಶೇಷಗಳು ಕಾಣುತ್ತಿಲ್ಲ.

    ರಾಗಲರ್ವಿಯಲ್ಲಿ ಶಾಸನದೊಂದಿಗೆ ಕ್ರಿ.ಶ 17-18ನೇ ಶತಮಾನದ ಒಂದು ಕಣಶಿಲೆ ಮತ್ತು ಮೂರು ಕಪ್ಪು ಶಿಲೆಯ ವೀರಗಲ್ಲು, ಪಾತಪ್ಪನ ಕಟ್ಟೆ, ಸುಂಕಲೆಮ್ಮ, ಮಾರಿಕಾಂಬೆ, ಈಶ್ವರ, ಆಂಜನೇಯ ಮೊದಲಾದ ದೇವಾಲಯಗಳು ಕಂಡುಬರುತ್ತವೆ. ಇಲ್ಲಿನ ಅವಶೇಷಗಳನ್ನು ಪತ್ತೆ ಮಾಡುವಲ್ಲಿ ಸ್ಥಳೀಯರಾದ ಲಿಂಗಾರಡ್ಡೆಪ್ಪ ಬಂಗಿ, ಮಹಾದೇವಪ್ಪ, ಕ್ಕೀರಯ್ಯ ಪೋಲೀಸ್ ಪಾಟೀಲ, ತಳವಾರ ರಾಮಣ್ಣ, ಲಕ್ಷ್ಮಣ ಪೂಜಾರಿ, ಮಹಾದೇವ ನಾಯಕ, ಸಾಬಣ್ಣ ಬಂಗಿ, ಬಸವಲಿಂಗ ದೇವಿಪುರ, ನಾಗರಾಜ ಪೋತ್ನಾಳರವರು ನೆರವಾಗಿದ್ದಾರೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts