More

    ಗ್ರಂಥಾಲಯ ಕಟ್ಟಡಗಳಿಗಿಲ್ಲ ಸ್ವಂತ ಕಟ್ಟಡ

    ಸಿಂಧನೂರು: ಜಾಲಿಹಾಳ ಸೇರಿ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಕಾರ್ಯಾರಂಭಿಸಿ 35 ಅಧಿಕ ವರ್ಷಗಳು ಗತಿಸಿದ್ದರೂ ಗ್ರಂಥಾಲಯ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಬಾಡಿಗೆ ಕಟ್ಟಡದಲ್ಲಿರುವ ಗ್ರಂಥಾಲಯಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲ.

    ಸರ್ಕಾರ ಗ್ರಾಪಂಗೊಂದು ಗ್ರಂಥಾಲಯ ತೆರೆದಿದೆ. ಆದರೆ, ಈ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಭಾಗ್ಯ ಇಲ್ಲವಾಗಿದೆ. ಆರಂಭದಿಂದಲೂ ಗ್ರಂಥಾಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿವೆ.

    ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯ ಪೂರಕ

    ಗ್ರಾಪಂ ವ್ಯಾಪ್ತಿಯಲ್ಲಿ ಸಾವಿರಾರು ಜನ ವಾಸಿಸುತ್ತಿದ್ದು, ವಿದ್ಯಾವಂತರ ಸಂಖ್ಯೆಯೂ ಅಧಿಕವಾಗಿದೆ. ಆದರೆ, ತಾಲೂಕಿನ 15ಕ್ಕೂ ಹೆಚ್ಚಿನ ಗ್ರಂಥಾಲಯಗಳು ಜನರು ಕುಳಿತುಕೊಂಡು ಓದುವಷ್ಟ ಸ್ಥಳ ಇಲ್ಲದ ಕಟ್ಟಡಗಳಲ್ಲಿವೆ. ಏಳೆಂಟು ಜನರು ಓದಲು ಕುಳಿತರೆ, ಉಳಿದವರಿಗೆ ಜಾಗವಿಲ್ಲದಂತಹ ಪರಿಸ್ಥಿತಿ ಇದೆ.

    ಗ್ರಂಥಾಲಯಗಳಲ್ಲಿ ದಿನಪತ್ರಿಕೆಗಳು, ಕನ್ನಡ ಸಾಹಿತ್ಯದ ಗ್ರಂಥಗಳು, ವಿವಿಧ ಪುಸ್ತಕಗಳಿದ್ದರೂ ಓದುಗರಿಗೆ ಸರಿಯಾಗಿ ತಲುಪುತ್ತಿಲ್ಲ. ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ ಸೌಲಭ್ಯ ಕಲ್ಪಿಸಿದರೆ ಜನರಲ್ಲಿ ಓದುವ ಸಂಸ್ಕೃತಿ ಮತ್ತಷ್ಟು ಹೆಚ್ಚಾಗಲಿದೆ.

    ಮೂಲ ಸೌಲಭ್ಯಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಗ್ರಾಮೀಣ ಗ್ರಂಥಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿಯಲ್ಲಿವೆ. ಕೆಲವು ಗ್ರಾಪಂಗಳಲ್ಲಿ ಕಟ್ಟಡ, ಸೌಲಭ್ಯ ಕೊರತೆಯಿಂದ ಇದುವರೆಗೆ ಗ್ರಂಥಾಲಯದ ಬಾಗಿಲು ತೆರೆದಿಲ್ಲ.

    ತಾಲೂಕಿನ ಐದು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಕೆಲ ಗ್ರಾಪಂಗಳ ಗ್ರಂಥಾಲಯಗಳಿಗೆ ಕಟ್ಟಡ ಇಲ್ಲದಿರುವ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ಒದಗಿಸಲಾಗುವುದು. ಗ್ರಂಥಾಲಯಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಗ್ರಾಪಂಗಳಿಗೆ ಸೂಚಿಸಲಾಗಿದೆ.
    | ಚಂದ್ರಶೇಖರ, ತಾಪಂ ಇಒ, ಸಿಂಧನೂರು

    ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜ್ಞಾನಾರ್ಜನೆ ಹೆಚ್ಚಿಸುವ ಉದ್ದೇಶದೊಂದಿಗೆ ಆರಂಭಿಸಿರುವ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಲ್ಲ. ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಗ್ರಾಪಂಗಳು ಅನುದಾನ ನಿಗದಿಪಡಿಸುವ ಮೂಲಕ ಆದ್ಯತೆ ನೀಡಬೇಕು.
    | ಡಿ.ಶಂಕರಗೌಡ, ಗ್ರಾಮಸ್ಥ, ತುರ್ವಿಹಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts