More

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಂಥಾಲಯ ಪೂರಕ

    ಕಾನಹೊಸಹಳ್ಳಿ: ಗ್ರಂಥಾಲಯಗಳು ಶೈಕ್ಷಣಿಕ ದೇಗುಲಗಳಂತಿದ್ದು, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.

    ಹುಡೇಂ ಗ್ರಾಪಂನಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಿಂದ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸೋಮವಾರ ಮಾತನಾಡಿದರು.

    ಪುಸ್ತಕ-ಪತ್ರಿಕೆಗಳನ್ನು ನಿತ್ಯವೂ ಓದುವುದರಿಂದ ನಾನಾ ವಿಷಯ ಸೇರಿ ಸಾಮಾನ್ಯ ಜ್ಞಾನವನ್ನು ತಿಳಿಯಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಗ್ರಂಥಾಲಯದ ಪುಸ್ತಕಗಳು ಪೂರಕವಾಗಲಿವೆ ಎಂದರು.

    ಇದನ್ನು ಓದಿ:ಉದ್ಯೋಗ ನೀಡದ‌ ಐಟಿ ಕಂಪನಿಗೆ ಯುವತಿ ಹುಸಿ ಬಾಂಬ್ ಕರೆ?

    ಶಿಕ್ಷಕ ತಾಯಕನಹಳ್ಳಿ ಮಚ್ಚೇಂದ್ರಪ್ಪ ಮಾತನಾಡಿ, ಗ್ರಂಥಾಲಯದಲ್ಲಿ ಚಿಣ್ಣರಿಂದ ಹಿಡಿದು ವಿದ್ಯಾರ್ಥಿಗಳು, ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂಥ ಪುಸ್ತಕಗಳು ಲಭ್ಯ ಇವೆ. ನಿತ್ಯವೂ ಪತ್ರಿಕೆಗಳು ಬರುವುದರಿಂದ ಸ್ಥಳೀಯ, ಜಿಲ್ಲೆ, ರಾಜ್ಯ ದೇಶ, ವಿದೇಶದ ಸುದ್ದಿಗಳನ್ನು ತಿಳಿಯಬಹುದಾಗಿದೆ ಎಂದರು.
    ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಗ್ರಾಪಂ ಪಿಡಿಒ ಲಕ್ಷ್ಮೀಬಾಯಿ, ಸದಸ್ಯ ತಾಯಕನಹಳ್ಳಿ ಕುಮಾರ್, ಮುಖಂಡರಾದ ಕೋಣನವರ ಮಲ್ಲಿಕಾರ್ಜುನಪ್ಪ, ಗುಡ್ಡದ ಬೋಸಯ್ಯ, ಶಂಕ್ರಣ್ಣರ ಜಯಣ್ಣ, ಪೂಜಾರಿ ಪಾಲಣ್ಣ, ಪಾಪನಾಯಕ, ಕನಕ ವಿದ್ಯಾಕೇಂದ್ರದ ಮುಖ್ಯಶಿಕ್ಷಕಿ ಸುನಿತಾ ಗುರುರಾಜ, ಶಿಕ್ಷಕಿ ಸರೋಜಾ, ಕಂಪಳರಂಗ ಪ್ರೌಢಶಾಲೆ ಶಿಕ್ಷಕಿಯರಾದ ಲಲಿತಾ, ಮಧುಶ್ರೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts