More

    ಆರ್ಥಿಕ ಸ್ಥಿರತೆಗೆ ಗ್ಯಾರಂಟಿ ಯೋಜನೆ ಪೂರಕ

    ಐನಾಪುರ: ಮಧ್ಯಮ ವರ್ಗದವರ ಆರ್ಥಿಕ ಸ್ಥಿರತೆಗೆ ಮತ್ತು ಕೊಂಡುಕೊಳ್ಳುವಿಕೆಯ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪೂರಕವಾಗಿವೆ. ಈಗಾಗಲೇ ತಾಲೂಕಿನ ಎಲ್ಲ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ಮುಟ್ಟಿವೆ ಎಂದು ತಹಸೀಲ್ದಾರ್ ಇಂಗಳೆ ಹೇಳಿದರು.

    ಪಟ್ಟಣದ ಶ್ರೀ ಸಿದ್ದೇಶ್ವರ ಸಭಾಭವನದಲ್ಲಿ ಜಿಪಂ ಬೆಳಗಾವಿ, ತಾಲೂಕಾಡಳಿತ ಹಾಗೂ ತಾಪಂ, ಗ್ರಾಪಂ, ಪಪಂ ಮತ್ತು ಪುರಸಭೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಈಗಾಗಲೇ 5 ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಿವೆ. ಸಾಕಷ್ಟು ಫಲಾನುಭವಿಗಳು ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಯಾರಿಗೆ ಈ ಯೋಜನೆಗಳಿಂದ ಸರಿಯಾಗಿ ತಲುಪದೆ ವಂಚಿತರಾಗಿದ್ದಾರೆ ಅಂತಹ ಫಲಾನುಭವಿಗಳು ನಮ್ಮ ಗಮನಕ್ಕೆ ತನ್ನಿ, ಸಮಸ್ಯೆ ಬಗೆಹರೆಸುತ್ತೇವೆ ಎಂದರು.
    ದ್ವೀಪ ಬೆಳಗುವ ಜತೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಗ್ಯಾರಂಟಿ ಯೋಜನೆಗಳ ಅನುಕೂಲಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಸಿಡಿಪಿಒ ಸಂಜೀವ ಕುಮಾರ ಸದಲಗಿ, ತಾಪಂ ಇಒ ಪ್ರವೀಣ ಪಾಟೀಲ, ಬಿಇಒ ಎಂ.ಆರ್.ಮುಂಜೆ, ಪಪಂ ಅಧಿಕಾರಿ ಮಹಾಂತೇಶ ಕವಲಾಪುರೆ, ಹೆಸ್ಕಾಂ ಅಧಿಕಾರಿ ಡಿ.ಎಸ್.ಮಾಳಿ, ಪಪಂ ಅಧಿಕಾರಿ ಕೆ.ಕೆ.ಗಾವಡೆ, ಉಗಾರ ಖುರ್ದ ಪುರಸಭೆ ಅಧಿಕಾರಿ ಟಿ.ಎಂ.ಯಶೋಧಾ, ಪಪಂ ಸದಸ್ಯರಾದ ಅರುಣ ಗಾಣಿಗೇರ, ಸಂಜು ಭೀರಡಿ, ಕುಮಾರ ಜಯಕರ, ವೃತ್ತ ನಿರೀಕ್ಷಕ ಶಫೀಕ್ ಮುಲ್ಲಾ, ಹಿರಿಯ ಮೇಲ್ವಿಚಾರಕಿ ಸುಜಾತಾ ಪಾಟೀಲ, ಆಹಾರ ಇಲಾಖೆಯ ಅಧಿಕಾರಿ ಸಂತೋಶ ಬುಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts