More

    ಜಮೀನಿನಲ್ಲಿ ಬಂಗಾರ ಹುಡುಕಿ ಕೊಡುವುದಾಗಿ ವಂಚಿಸಿದ್ದ ನಾಲ್ವರು ಅಪಹರಣಕಾರರ ಸೆರೆ

    ಸಿಂಧನೂರು: ಜಮೀನಿನಲ್ಲಿ ಬಂಗಾರ, ವಜ್ರದ ಹರಳು ಇರುವುದಾಗಿ ನಂಬಿಸಿ, ಅದನ್ನು ಹುಡುಕಿ ಕೊಡುವ ನೆಪದಲ್ಲಿ ಜಮೀನು ಮಾಲೀಕರಿಂದ ಹಣ ಪಡೆದು ಬಳಿಕ ಅವರ ಮಗನನ್ನೇ ಅಪಹರಿಸಿದ ಪ್ರಕರಣವನ್ನು ಶುಕ್ರವಾರ ಗ್ರಾಮಾಂತರ ಠಾಣೆ ಪೊಲೀಸರು ಬೇಧಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಸಿದ್ದರಾಮ ಜೋಷಿ, ರಾಘವೇಂದ್ರ ಜೋಷಿ, ದಿನೇಶ ಹೊನ್ನಪ್ಪ, ಮಂಜುನಾಥ ಜಗದೀಶ ಬಂಧಿತರು. ಆರೋಪಿಗಳಿಂದ 6.50 ಲಕ್ಷ ರೂ. ನಗದು ಹಾಗೂ ಒಂದು ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

    ಏನಿದು ಪ್ರಕರಣ?
    ತಾಲೂಕಿನ ಅರಗಿನಮರಕ್ಯಾಂಪ್ ನಿವಾಸಿ ವೆಂಕಟರಾಮರೆಡ್ಡಿ ಅವರಿಗೆ ತಮ್ಮ ಮಗ ವೆಂಕಟರಾಮರೆಡ್ಡಿ ಮೂಲಕ ಸಿದ್ದರಾಮ ಜೋಷಿ ಎಂಬಾತ ಪರಿಚಯವಾಗಿದ್ದೇನೆ. ನಿಮ್ಮ ಜಮೀನಿನಲ್ಲಿ ಬಂಗಾರ-ವಜ್ರದ ಹರಳುಗಳಿರುವುದು ನನ್ನ ವಿಶೇಷ ಶಕ್ತಿಯಿಂದ ಗೊತ್ತಾಗಿದೆ. ಅವುಗಳನ್ನು ಹುಡುಕಿಕೊತ್ತೇನೆಂದು ವೆಂಕಟರಾಮರೆಡ್ಡಿಯನ್ನು ನಂಬಿಸಿ, ಮೂರು ವರ್ಷದಿಂದ ಹಣ ಪಡೆದಿದ್ದಾನೆ.

    ಮೂರು ವರ್ಷಗಳ ಬಳಿಕ ಸಿದ್ದರಾಮ ಜೋಷಿ ನಡೆ ಕುರಿತು ಅನುಮಾನಗೊಂಡ ಜಮೀನು ಮಾಲೀಕ ವೆಂಕಟರಾಮರೆಡ್ಡಿ, ತಾವು ನೀಡಿದ ಹಣ ವಾಪಸ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಆರೋಪಿ ನ.8ರಂದು ಅರಗಿನಮರಕ್ಯಾಂಪ್‌ಗೆ ಬಂದು ಹಣ ಹಿಂತಿರುಗಿಸುತ್ತೇನೆಂದು ಹೇಳಿ, ತನ್ನೊಂದಿಗೆ ಇತರ ಮೂವರನ್ನು ಕರೆ ತಂದು ಜಮೀನು ಮಾಲೀಕನ ಮಗ ವೆಂಕಟೇಶ ರೆಡ್ಡಿಯನ್ನು ಅಪಹರಿಸಿದ್ದಾನೆ. ನಂತರ 20 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದನು. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲ ಪ್ರಕರಣ ದಾಖಲಾಗಿತ್ತು.

    ಎಸ್ಪಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ ಹಾಗೂ ಸಿಪಿಐ ಉಮೇಶ ಕಾಂಬ್ಳೆ ನೇತೃತ್ವದ ಪಿಎಸ್‌ಐ ಎರಿಯಪ್ಪ ತಂಡ ಕಾರ್ಯಾಚರಣೆ ನಡೆಸಿ, ನ.19ರಂದು ಆರೋಪಿಗಳನ್ನು ಬಂಧಿಸಿಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts