More

    ಪಠ್ಯದಲ್ಲಿ ಜೀವನ ರೂಪಿಸುವ ಅಂಶ ಅಳವಡಿಕೆ ಅಗತ್ಯ

    ಸಿಂಧನೂರು: ಪ್ರಸ್ತುತ ದಿನಗಳಲ್ಲಿ ವಿಶ್ವವಿದ್ಯಾಲಯ ನೀಡುವ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಜೀವನ ರೂಪಗೊಳ್ಳಲು ಬೇಕಾದ ಅಂಶಗಳನ್ನು ಪಠ್ಯದಲ್ಲಿ ಅಳವಡಿಸುವಂತಾಗಬೇಕು ಎಂದು ಉಪನ್ಯಾಸಕ ಗೋವಿಂದರಾಜ ಬಾರಕೇರ ಹೇಳಿದರು.

    ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ಕನ್ನಡ ವಿಭಾಗದಿಂದ ಎಂಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವಷರ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಮುಂದಿನ ದಿನಗಳಲ್ಲಿ ಜ್ವಲಂತ ಸಮಸ್ಯೆಯಾದ ನಿರುದ್ಯೋಗಕ್ಕೆ ಬಲಿಯಾಗಿ ಬದುಕನ್ನು ಕಟ್ಟಿಕೊಳ್ಳಲು ಹರಸಹಾಸ ಪಡಬೇಕಾಗುತ್ತದೆ.ಭ್ರಮೆಯನ್ನು ಬಿಟ್ಟಾಗ ವಾಸ್ತವಿಕವಾದ ಬದುಕು ಅರ್ಥವಾಗುತ್ತದೆ. ಇಂದಿನ ಪಠ್ಯಗಳು ನಮಗೆ ಬದುಕು ಕಟ್ಟಿಕೊಳ್ಳಲು ಸಹಕಾರಿ ಆಗದಿರುವುದು ದುರಂತ ಕಲಿಕೆ,ಬದುಕಿಗೂ ವ್ಯತಿರಿಕ್ತವಾಗಿದೆ. ಬದುಕಿನ ರಂಗಸ್ಥಳದಲ್ಲಿ ಅನುಭವ ಮುಖ್ಯವಾಗಿರುತ್ತದೆ. ಓದು ಅನುಭವಕ್ಕೆ ಪ್ರಾವಣ್ಯದ ಸಾಣಿ ಇಡಬೇಕಾದ ಅಗತ್ಯವಿದೆ ಎಂದರು.

    ಕಾಲೇಜ್ ಪ್ರಾಂಶುಪಾಲ ಡಾ. ಸಿ.ಬಿ ಚಿಲ್ಕರಾಗಿ ಮಾತನಾಡಿ, ಓದುಗರ ಸಂಖ್ಯೆ ಕಡಿಮೆಯಾಗಿ ಪುಸ್ತಕಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತೀಕರಣ ಭರಾಟೆಯಲ್ಲಿ ಸಾಹಿತ್ಯದ ಓದುವಿನ ಕಡೆ ಗಮನ ಕಡಿಮೆ ಆಗಿದೆ ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ ಖಾದರಬಾಷಾ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಹಳೆಗನ್ನಡ ಓದಿಗೆ ಭಯಪಟ್ಟು ಕನ್ನಡ ವಿಷಯ ಆಯ್ಕೆ ಮಾಡುಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಅಧ್ಯಾಪಕರು ಮಾತ್ರ ಅಲ್ಲ, ವಿದ್ಯಾರ್ಥಿಗಳ ಅಧ್ಯಯನದ ಕೊರತೆ ಎಂದರು. ಸಹಾಯಕ ಪ್ರಾಧ್ಯಾಪಕರಾದ ಬಸವರಾಜ ತಡಕಲ್, ಯಲ್ಲಪ್ಪ ಗೊನ್ವಾರ, ಹನುಮನಗೌಡ, ಕನ್ನಡ ವಿಭಾಗದ ಸಂಚಾಲಕರಾದ ಡಾ.ಹುಲಿಯಪ್ಪ ದುಮತಿ, ಡಾ.ಪರಶುರಾಮ ಕಟ್ಟಿಮನಿ, ಉಪನ್ಯಾಸಕರಾದ ಡಾ.ಬಸವರಾಜ ನಾಯಕ, ರಾಮಣ್ಣ ಬೇರ‌್ಗಿ, ಶಂಕರ್ ಗುರಿಕಾರ, ಡಾ.ಅರುಣಕುಮಾರ ಬೇರ‌್ಗಿ, ಮಲ್ಲಯ್ಯಸ್ವಾಮಿ, ಶಂಕರ ಪತ್ತಾರ, ಉಮೇಶ ಗುರಿಕಾರ, ಮೆರಿ ಗ್ರೇಸಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts