More

    ಮಹಿಳೆ ಕಾಲಿಡದ ಕ್ಷೇತ್ರವಿಲ್ಲ


    ಸಿಂಧನೂರು: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಎಂದು ಪತಂಜಲಿ ಯೋಗ ಸಮಿತಿ ಪ್ರಭಾರಿ ಎಂ.ಭಾಸ್ಕರ್ ಹೇಳಿದರು.
    ನಾಲ್ಕುಮೈಲ್‌ಕ್ಯಾಂಪಿನ ಮಾಧವ ಸದನದಲ್ಲಿ ಗುರುವಾರ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಕ್ಕಳನ್ನು ತಿದ್ದಿ ತೀಡುವ ಅಂಗನವಾಡಿ ಕಾರ್ಯಕರ್ತೆಯಿಂದ ಹಿಡಿದು ಅಂತರಿಕ್ಷದಲ್ಲಿ ವಿಮಾನ ಓಡಿಸುವ ಪೈಲೆಟ್ ಆಗಿ ಮಹಿಳೆ ಹೊರಹೊಮ್ಮಿದ್ದಾಳೆ. ಮಹಿಳೆ ಕಾಲಿಡದ ಕ್ಷೇತ್ರವಿಲ್ಲ. ಆರ್ಥಿಕ ಭದ್ರತೆ, ದಕ್ಷತೆಗೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮಹಿಳೆ ಎಂದರು.

    ಪಿಎಸ್‌ಐ ಹನುಮಂತಪ್ಪ ಮಾತನಾಡಿ, ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ ಸಾವಿತ್ರಿಬಾಯಿ ಫುಲೆ ಅವರ ಸೇವೆ ಅವಿಸ್ಮರಣೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕದ ರಾಯಚೂರು ಜಿಲ್ಲಾಧ್ಯಕ್ಷೆ ರಮಾದೇವಿ ಶಂಭೋಜಿ ಮಾತನಾಡಿ, ಪುರುಷ, ಮಹಿಳೆ ಎನ್ನುದೆ ಕರ್ತವ್ಯ ನಿರ್ವಹಿಸಿದರೆ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದರು. ವಚನ ಸಾಹಿತ್ಯ ಪರಿಷತ್ತು ತಾಲೂಕಾಧ್ಯಕ್ಷ ಜಿ.ಜೆ ದೇವಿರಮ್ಮ ಮಹಿಳೆಯರ ಕುರಿತು ಸ್ವ ರಚಿತ ಕವನ ವಚನ ಮಾಡಿದರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ, ಪ್ರಮುಖರಾದ ಶರಣಮ್ಮ, ತಿಮ್ಮಮ್ಮ ಗೀತಾ, ಬಸಮ್ಮ ತಾಳಿಕೋಟಿ, ಕೃಷ್ಣವೇಣಿ ಸುವರ್ಣ,ಅಮರಮ್ಮ ,ಯಶೋದಾ, ಸುಮಿತ್ರಾ, ಚಂಪಕ್ಕ, ಪುಷ್ಪಾ, ರಾಘವೇಂದ್ರ ಸಾಸಲಮರಿಕ್ಯಾಂಪ್, ನಿಖಿತಾ ರಾಣಿ, ಶ್ರೀನಿವಾಸ, ಗೀತಾ ಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts