More

    ಕುಡಿವ ನೀರಿನ ಕೆರೆ 31 ರೊಳಗೆ ತುಂಬಿಸಿ- ಶಾಸಕ ನಾಡಗೌಡ ಖಡಕ್ ಸೂಚನೆ

    ಸಿಂಧನೂರು: ತಾಲೂಕಿನಲ್ಲಿರುವ 156 ಕೆರಗಳನ್ನು ಮಾ.31 ರೊಳಗಾಗಿ ಆಯಾ ಗ್ರಾಪಂ ಪಿಡಿಒ, ಅಧಿಕಾರಿಗಳು ತುಂಬಿಸಿಕೊಳ್ಳಬೇಕು. ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮಕ್ಕೆ ಒಳಗಾಗಬೇಕಾಗುತ್ತದೆಂ ಎದು ಶಾಸಕ ವೆಂಕಟರಾವ ನಾಡಗೌಡ ಖಡಕ್ ಎಚ್ಚರಿಕೆ ನೀಡಿದರು.

    ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಕುಡಿವ ನೀರಿನ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕೆರಗಳನ್ನು ತುಂಬಿಸಿಕೊಳ್ಳಲು ತಾಪಂ ಇಒ ಈಗಾಗಲೇ ಸೂಚನೆ ನೀಡಿದ್ದು ಕೆರೆ ಸ್ವಚ್ಛಗೊಳಿಸಿ, ನೀರು ತುಂಬಿಸಿಕೊಳ್ಳಲು ಕೆಲಸ ಪ್ರಗತಿಯಲ್ಲಿರುಬೇಕು. ಮಾ.31 ರೊಳಗಾಗಿ ತುಂಬಬೇಕಿದೆ.

    ಇನ್ನೂವರೆಗೆ ಯಾರು ಕೆರೆಗಳನ್ನು ಸ್ವಚ್ಛಗೊಳಿಸಿಲ್ಲವೋ, ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಗ್ರಾಪಂ ವ್ಯಾಪ್ತಿಗೆ ಎಷ್ಟೇ ಕೆರೆಗಳು ಬರಲಿ, ಅವೆಲ್ಲ ಕೆರೆಗಳು ತುಂಬಿರಬೇಕು. ಸಮಸ್ಯೆ ಇದ್ದರೆ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು. ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಅಥವಾ ಬೋರವೆಲ್ ಕೊರೆಸುವುದು ಇದ್ದರೆ ಮಾಹಿತಿ ನೀಡಬೇಕು.

    ಗ್ರಾಮೀಣ ಕುಡಿವ ನೀರು ಸರಬರಾಜು ವಿಭಾಗವು ಹೆಚ್ಚಿನ ಕಾಳಜಿ ವಹಿಸಿ, ಅರೆಬರೆಗೊಂಡಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಜೆಜೆಎಂ ಯೋಜನೆ ಬಗ್ಗೆ ಅಪಸ್ವರ ಇದ್ದು ಈ ಬಗ್ಗೆ ಗಮನಹರಿಸಬೇಕು. ಯೋಜನೆ ಪೂರ್ಣಗೊಂಡಿದ್ದರೆ ಗ್ರಾಪಂಗಳಿಗೆ ಹಸ್ತಾಂತರಿಸಿ, ನೀರು ತುಂಬಿಸಲು ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ನೀವು ನಿರ್ಲಕ್ಷ್ಯವಹಿಸಿದರೆ ಸಮಸ್ಯೆಯಾಗಲಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.

    ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸಬೇಕಿರುವುದರಿಂದ 32, 36, 45 ಸೇರಿ ಇತರ ಉಪಕಾಲುವೆಗಳಿಂದ ಗ್ರಾಪಂ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ನೀರಾವರಿ ಅಧಿಕಾರಿಗಳು ರೈತರ ಮನವೊಲಿಸಿ, ಅನುವು ಮಾಡಿಕೊಡಬೇಕು. ಅವಶ್ಯಬಿದ್ದರೆ ಪೊಲೀಸರ ಸಹಕಾರ ಪಡೆದುಕೊಳ್ಳಬಹುದು. ಕೆಳ ಭಾಗದಲ್ಲಿರುವ ಕೆರೆ ತುಂಬಿಸಲು ಕಾಳಜಿವಹಿಸಬೇಕು ಎಂದರು. ನೀರಾವರಿ ಇಲಾಖೆ ಅಧಿಕಾರಿ ದೇವೇಂದ್ರಪ್ಪ ಕಾಲುವೆ ನೀರು ಲಭ್ಯವಿರುವ ಬಗ್ಗೆ ಮಾಹಿತಿ ನೀಡಿದರು. ತಾಪಂ ಇಒ ಲಕ್ಷ್ಮೀದೇವಿ, ಎಡಿ ಅಮರಗುಂಡಪ್ಪ ಇದ್ದರು.

    ಗಿಳಿಪಾಠ ಹೇಳಿದ ಶಾಸಕ, ಹೂಂಗುಟ್ಟಿದ ಪಿಡಿಒಗಳು: ಶಾಸಕ ವೆಂಕಟರಾವ ನಾಡಗೌಡ, ತಾಲೂಕುವಾರು ಗ್ರಾಪಂ ವ್ಯಾಪ್ತಿಯ ಕೆರೆಗಳ ಸಂಖ್ಯೆ ಹೇಳಿ, ತುಂಬಿದ್ದಿರಾ ಎಂಬ ಪ್ರಶ್ನೆಗೆ ಆಗಿದೆ, ತುಂಬುತ್ತಿದೆ, ಸ್ವಚ್ಛವಾಗುತ್ತಿದೆನ್ನುವ ಉತ್ತರಗಳನ್ನೇ ಬಹುತೇಕ ಪಿಡಿಒಗಳು ಹೇಳಿದರು. ಇದಕ್ಕೆ ಶಾಸಕರು ಹೂಂಗುಟ್ಟಿದರು. ವಾಸ್ತವದಲ್ಲಿ ತಾಲೂಕಿನ ಬಹುತೇಕ ಕೆರೆಗಳು ಸ್ವಚ್ಛಗೊಂಡಿಲ್ಲ. ಸದ್ಯ ಅಶುದ್ಧ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ಗ್ರಾಪಂ ವ್ಯಾಪ್ತಿಗೆ 14-12 ಕೆರೆಗಳು ಬರುತ್ತಿದ್ದು ಅಲ್ಲಿ ಒಂದು ಕೆರೆ ತುಂಬಿಲ್ಲ, ಸ್ವಚ್ಛಗೊಳಿಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts