More

    ಅವೈಜ್ಞಾನಿಕ ತೀರ್ಮಾನದಿಂದ ನೀರಿನ ಸಮಸ್ಯೆ

    ಸಿಂಧನೂರು: ತುಂಗಭದ್ರಾ ಜಲಾಶಯದಲ್ಲಿನ ನೀರಿನ ಸಂಗ್ರಹಣೆಯ ಲೆಕ್ಕಾಚಾರ ಮಾಡದೆ ಈ ಭಾಗದ ಶಾಸಕರೆಲ್ಲರೂ ಐಸಿಸಿ ಸಭೆಯಲ್ಲಿ ಅವೈಜ್ಞಾನಿಕ ತೀರ್ಮಾನ ತೆಗೆದುಕೊಂಡಿದ್ದರಿಂದ ನಾಲೆಯಲ್ಲಿ ಕಡಿಮೆ ಪ್ರಮಾಣದ ನೀರು ಹರಿಯುತ್ತಿದೆಂದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ಜಲಾಶಯಕ್ಕೆ ಒಳಹರಿವು ಜಾಸ್ತಿ ಬರುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ 5 ಟಿಎಂಸಿ ನೀರು ಜಾಸ್ತಿ ಇದ್ದಾಗ್ಯೂ ಜ.1 ರಿಂದ ಮಾ.31 ರವರೆಗೆ 3500 ಕ್ಯೂಸೆಕ್‌ನಂತೆ ಕಾಲುವೆಗೆ ನೀರು ಹರಿಸುವ ತೀರ್ಮಾನ ಎಷ್ಟು ಸಮಂಜಸ. ಹೆಚ್ಚಿನ ನೀರು ಇರುವುದರಿಂದ ಏ.15 ರವರೆಗೆ 4000 ಕ್ಯೂಸೆಕ್‌ನಂತೆ ಹರಿಸಲು ತೀರ್ಮಾನ ಕೈಗೊಳ್ಳದಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ ಎಂದರು.

    ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು, ಒಳಹರಿವು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಪಾಲು, ಉಳಿಯುವ ನೀರಿನ ಸಮರ್ಪಕ ಲೆಕ್ಕಾಚಾರ ಮಾಡುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಬಾದರ್ಲಿ ದೂರಿದರು.

    ಕಾಂಗ್ರೆಸ್ ಸೇರ್ಪಡೆ: ರೌಡಕುಂದಾ ಗ್ರಾಪಂನ ಇಬ್ಬರು ಸದಸ್ಯರು ಹಾಗೂ ಇಬ್ಬರು ಮಾಜಿ ಸದಸ್ಯರು ಜೆಡಿಎಸ್ ತೊರೆದು ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಂಡರು. ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ನಗರಸಭೆ ಅಧ್ಯಕ್ಷ ಸೈಯದ್ ಜಾಫರ್ ಜಾಗೀರದಾರ್, ಜಿಪಂ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡ, ಶಿವನಗೌಡ ಎಲೆಕೂಡ್ಲಿಗಿ, ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ, ಎಂ.ಲಿಂಗಪ್ಪ ದಢೇಸುಗೂರು, ರಂಗನಗೌಡ ಗೊರೇಬಾಳ, ಛತ್ರಪ್ಪ ಕುರುಕುಂದಿ, ವೆಂಕೋಬ ಬಾವಿಕಟ್ಟಿ, ಖಾಜಿ ಮಲಿಕ್, ಅನಿಲಕುಮಾರ, ನಾಗವೇಣಿ ಪಾಟೀಲ್, ಶ್ರೀದೇವಿ ಶ್ರೀನಿವಾಸ, ಲಕ್ಷ್ಮೀದೇವಿ ಭಂಗಿ, ನಾಗರಾಜ ಕವಿತಾಳ, ಶರಣಪ್ಪ ಗಿಣಿವಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts