More

    ನೀರಿಲ್ಲಾ…. ನೀರಿಲ್ಲಾ…., ಕುಡಿಯಲು ನೀರಿಲ್ಲ.


    ತಾಪಮಾಣ ತಣ್ಣಗಾಗುತ್ತಿಲ್ಲ, ಕುಡಿಯುಲು ನೀರಿಲ್ಲ.
    20 ದಿನಗಳಿಂದ ಹಲವಡೆ ನೀರಿಲ್ಲ, ಪ್ರತಿಭಟನೆಗಳಿಗೂ ಬರವಿಲ್ಲ.
    ಹರಿಬಿಟ್ಟ ನೀರು ಎಷ್ಟು ದಿನ ಸಾಕಾಗುತ್ತದೆ ಎಂಬುದೇ ಚಿಂತೆ?

    ಶಿವಾನಂದ ಹಿರೇಮಠ, ಗದಗ
    ಜಿಲ್ಲೆಯಲ್ಲಿ ತಾಪಮಾನ ತಣ್ಣಗಾಗುತ್ತಿಲ್ಲ. 20 ದಿನಗಳಿಂದ ಜಿಲ್ಲೆಯ ಹಲವಡೆ ಕುಡಿಯಲು ನೀರಿಲ್ಲ. ಕುಡಿಯುವ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ಭರವಿಲ್ಲ. ತುಂಗಭದ್ರಾ ಡ್ಯಾಂ ನಿಂದ ಹರಿಬಿಟ್ಟ ನೀರು ಎಷ್ಟು ದಿನ ಸಾಕಾಗುತ್ತದೆ ಎಂಬ ಲೆಕ್ಕವೂ ಅಧಿಕಾರಿಗಳ ಬಳಿಯಿಲ್ಲ. ಉಲ್ಭಣಿಸಿರುವ ನೀರಿನ ಸಮಸ್ಯೆಗೆ ಯಾರ ಬಳಿಯೂ ಸಮರ್ಪಕ ಉತ್ತರವಿಲ್ಲ. ಒಟ್ಟಿನಲ್ಲಿ “ಕರಿಮಣಿ ಮಾಲೀಕ ನೀನಲ್ಲ…’ ಎಂಬ ಸಾಹಿತ್ಯದಂತೆ “ನೀರಿಲ್ಲ.. ನೀರಿಲ್ಲ.., ಕುಡಿಯಲು ನೀರಿಲ್ಲ, ಪಾತ್ರೆ ತೊಳೆಯಲು ನೀರಿಲ್ಲ’ ಎಂದು ಜನರು ಜಿಲ್ಲೆಯಾದ್ಯಂತ ಗುಣುಗುತ್ತಿದ್ದಾರೆ.
    ಗದಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಬೀಸಿಲಿಗೆ ಬಸವಳಿದ ಜನರು ನೀರಿಗಾಗಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಂದೆ, ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಹಗಲೆನ್ನದೇ ರಾತ್ರಿ ಎನ್ನದೇ ಪ್ರತಿಭಟನೆ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವೆ. ತಾಪಮಾನ 39 ರಿಂದ 41 ಡಿಗ್ರಿ ಸೆಲ್ಸಿಯಸ್​ ವರೆಗೂ ಹೊಯ್ದಾಟ ನಡೆಸುತ್ತಿರುವ ಹಿನ್ನೆಲೆ ತುಂಗಭದ್ರಾ, ಮಲಪ್ರಭಾ ಕಾಲುವೆಗಳಲ್ಲಿ, ಕುಡಿಯುವ ನೀರಿನ ಕೆರೆಗಳಲ್ಲಿ, ಹಮ್ಮಗಿ ಬ್ಯಾರೇಜ್​ ನಲ್ಲಿ ನ ನೀರು ಆವಿ ಆಗುತ್ತಿದೆ. ಇತ್ತೀಚೆಗೆ ಮುಂಡರಗಿ ಬಳಿಯ ಹಮ್ಮಗಿ ಬ್ಯಾರೇಜ್​ ನಲ್ಲಿ ನೀರು ಸಂಪೂರ್ಣ ಖಾಲಿಯಾದ ಹಿನ್ನೆಲೆ ತುಂಗಭದ್ರ ಡ್ಯಾಂ ನಿಂದ 2 ಟಿಎಂಸಿ ನಿರು ಹರಿಬಿಡಲಾಗಿದೆ. ಹರಿ ಬಿಟ್ಟ ನೀರು ಎಷ್ಟು ಪ್ರಮಾಣದಲ್ಲಿ ಹಮ್ಮಗಿ ಬ್ಯಾರೇಜ್​ ಬಂದು ಸೇರುತ್ತದೆ ಮತ್ತು ಎಲ್ಲೆಲ್ಲಿ ಸೋರಿಕೆ ಕಾಣುತ್ತದೆ ಎಂಬುದೇ ಅಧಿಕಾರಿಗಳಿಗೂ ಅರಿಯದಂತಾಗಿದೆ.

    ತುಂಗಭದ್ರ ನದಿ ನೀರು?
    ಕಳೆದ ಒಂದು ತಿಂಗಳಿನಿಂದ ತುಂಗಭದ್ರಾ ಒಡಲು ಖಾಲಿ ಆಗಿದೆ. ಸಿಂಗಟಾಲೂರು ಬ್ಯಾರೇಜ್​ ಡೆಡ್​ ಸ್ಟೋರೇಜ್​ ತಲುಪಿದ ಹಿನ್ನೆಲೆ ಮಾ.29 ರಂದು ತುಂಗಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಹರಿಸಲಾಗಿತ್ತು. ಸೋಮವಾರ ಸಿಂಗಟಾಲೂರು ಬ್ಯಾರೇಜ್​ ನೀರು ತಲುಪಿದೆ. ಆದರೆ, ನದಿಗೆ ಹಾವೇರಿ ಜಿಲ್ಲೆಯ ಮೈಲಾರ ಬಳಿ ಮರಳು ಗೋಡೆ ಕಟ್ಟಲಾಗಿದೆ ಎನ್ನಲಾಗಿದೆ. ತುಂಗಭದ್ರ ಪಾತ್ರದ ಹಳ್ಳಿ ರೈತರು ಪಂಪ್​ ಸೆಟ್​ ಮೂಲಕ ಹೊಲ ಗದ್ದೆಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಬಿಸಿಲ ತಾಪಕ್ಕೂ ನೀರು ಆವಿ ಆಗುತ್ತಿರುವ ಹಿನ್ನೆಲೆ, ಹರಿಬಿಟ್ಟ 2 ಟಿಂಎಸಿ ನೀರಿನಲ್ಲಿ 1 ಟಿಎಂಸಿ ಗೂ ಅಧಿಕ ನೀರು ಬ್ಯಾರೇಜ್​ ತಲುಪುವುದು ಅನುಮಾನ. ಹಾಗಾಗಿ ಬ್ಯಾರೇಜ್​ ನಲ್ಲಿ ಸಂಗ್ರಹವಾದ ನೀರುನ್ನು ಭಾಗಶಃ 15 ದಿನಗಳ ವರೆಗೆ ಮಾತ್ರ ಪೂರೈಕೆ ಮಾಡಲು ಸಾಧ್ಯ ಎಂದು ಊಹಿಸಲಾಗಿದೆ. ಲೆ$್ಮಶ್ವರಕ್ಕೆ ತುಂಗಭದ್ರ ನದಿಯಿಂದ ನೀರು ಪೂರೈಸಲು ನೀರು ಸಂಗ್ರಹ ವ್ಯವಸ್ಥೆ ಇಲ್ಲ. ಹರಿಯುವ ನದಿ ನೀರಿನಲ್ಲೇ ಪಂಪಹೌಸ್​ ನಿಮಿರ್ಸಿ ಲೆ$್ಮಶ್ವರ ಪಟ್ಟಣಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹರಿವು ಸ್ಥಗಿತಗೊಂಡಾಗ ಲೆ$್ಮಶ್ವರಕ್ಕೆ ನೀರಿನ ಸಮಸ್ಯೆ ಉಲ್ಭಣಿಸುತ್ತದೆ. ಮುಂಡರಗಿ ಹಾಗೂ ಗದಗ ಪಟ್ಟಣಗಳಿಗೆ ಮುಂಡರಗಿ ಬಳಿಯ ಹಮ್ಮಗಿ ಗ್ರಾಮದ ಬಳಿಯ (ತುಂಗಭದ್ರ)ಸಿಂಗಟಾಲೂರು ಬ್ಯಾರೇಜ್​ ನಿಂದ ನೀರು ಪೂರೈಕೆ ಆಗುತ್ತಿದೆ. ಬ್ಯಾರೇಜ್​ ನಿಂದ ಗದಗ ಪಟ್ಟಣ 70 ಕಿಮೀ ದೂರ ಇರುವ ಹಿನ್ನೆಲೆ ಭಾಗಶಃ ನೀರು ಮಾರ್ಗ ಮಧ್ಯದಲ್ಲೇ ಸೋರಿಕೆ ಕಾಣುತ್ತಿದ್ದು, ಸಮರ್ಪ ನೀರು ಪೂರೈಕೆಯೂ ಅಸಾಧ್ಯ. ಹಾಗಾಗಿ, ತುಂಗಭದ್ರ ಜಲಾಶಯದಿಂದ ಹರಿಬಿಟ್ಟ ನೀರಿನಿಂದ ಭಾಗಶಃ ಎರಡೇ ವಾರ ಜನರ ನೀರಿನ ದಾಹ ಈಡೇರಿಸಬಹುದು.

    ಮಲಪ್ರಭೆ ನದಿ ನಿರು:
    ಸವದತ್ತಿ ಬಳಿಯ ಮಲಪ್ರಭೆಗೆ ಅಡ್ಡಲಾಗಿ ನಿಮಿರ್ಸಲಾದ ರೇಣುಕಾ ಸಾಗರ ಜಲಾಶಯ(ನವೀಲು ತೀರ್ಥ)ದಿಂದ ಕಾಲುವೆ ಮೂಲಕ ಕರೆಗಳಿಗೆ ನೀರು ಹರಿಸಿ ಜಿಲ್ಲೆಯ ನರಗುಂದ, ರೋಣ, ಗಜೇಂದ್ರಡ ಮತ್ತು ನರೇಗಲ್​ ಪಟ್ಟಣಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ನರಗುಂದ ಭಾಗದಲ್ಲಿ ಕೆಲವಡೆ 2 ದಿನಕ್ಕೊಮ್ಮೆ, ಕೆಲವಡೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ ಎನ್ನುವ ಮಾಹಿತಿ ಇದೆ. ಜಲಜೀವನ್​ ಮಿಷನ್​ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆ ನರಗುಂದ ಪಟ್ಟಣದಲ್ಲಿ ಕೆಲವಡೆ ನೀರು ಪೂರೈಕೆ ಸರಾಗವಿಲ್ಲ ಎನ್ನಲಾಗಿದೆ. ನರೇಗಲ್​ ಮತ್ತು ಗಜೇಂದ್ರಗಡದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ.

    ಗದಗನಲ್ಲಿ ಉಲ್ಭಣ:
    ನಗರದಲ್ಲಿ ತುಂಗಭದ್ರ ಮೂಲಕ ಹರಿಸಲಾಗುತ್ತಿದ್ದ 24/7 ಕುಡಿಯುವ ನೀರು ಕಳೆದ 15 ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿದೆ. ಟ್ಯಾಂಕರ್​ ಮೂಲಕ ನೀರನ್ನು ವಿವಿಧ ಬಡಾವಣೆಗಳಿಗೆ ನಗರಸಭೆ ಪೂರೈಕೆ ಮಾಡುತ್ತಿದೆ. ಆದರೆ, ಜನರ ಬೇಡಿಕೆ ಅನುಗುಣವಾಗಿ ಪೂರೈಕೆ ಮಾಡಲು ಸಾದ್ಯವಾಗುತ್ತಿಲ್ಲ. ಟ್ಯಾಂಕರ್​ನಿಂದ ಪೂರೈಕೆ ಮಾಡುವ ಸಂದರ್ಭದಲ್ಲಿ ಕುಡಿಯುವ ನೀರನ್ನು ಪಡೆಯಲು ಜನರು ಮುಗಿ ಬೀಳುತ್ತಿರುವದರಿಂದ ಅಲ್ಲಲ್ಲಿ ಸಣ್ಣ ಪುಟ್ಟ ಕಿರಿಕ್​ಗಳು ಆಗಾಗ ನಡೆಯುತ್ತಿರುವದು ಸಾಮಾನ್ಯವಾಗಿದೆ.

    ಹೆಚ್ಚಿದ ಬೇಡಿಕೆ :
    ಸುಡು ಬಿಸಿಲು ಹಾಗೂ ಕುಡಿಯುವ ನೀರಿನ ಕೊರತೆಯನ್ನು ಬಂಡವಾಳವಾಗಿಸಿಕೊಂಡ ಖಾಸಗಿ ನೀರಿನ ಟ್ಯಾಂಕರ್​ ಮಾಲಿಕರು ಪ್ರತಿ ಟ್ಯಾಂಕರ್​ಗಳಿಗೆ 350 ರೂ.ಗಳಿಂದ 800 ರೂ.ಗಳ ವರೆಗೆ ಹೆಚ್ಚಳ ಮಾಡಿರುವದರಿಂದ ಬಾಯಾರಿದ ಗಂಟಲೊಳಗೆ ಬಿಸಿನೀರು ಸುರಿದ ಹಾಗಿದೆ. ನಗರದಲ್ಲಿ ಕುಡಿಯುವ ನೀರಿನ ಸುಳಿವು ಕಾಣದೆ ಇರುವದರಿಂದ ಜನರೆ ಅವಳಿ ನಗರದಲ್ಲಿರುವ ಶುದ್ದ ಕುಡಿಯುವ ನೀರಿನ ಟಕಕ್ಕೆ ಮುಗಿ ಬಿದ್ದಿದ್ದಾರೆ. ನೀರಿಗಾಗಿ ದಿನವಿಡಿ ಸರತಿ ಸಾಲಿನಲ್ಲಿ ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.

    ಕೋಟ್​:
    ನದಿ ಪಾತ್ರದಲ್ಲಿ ನೀರು ಸಂಗ್ರಹ ಇದೆಯೋ? ಇಲ್ಲವೋ? ಎಷ್ಟು ಟಿಎಂಸಿ ನೀರು ಸಂಗ್ರಹ ಇದೆ? ಎಷ್ಟು ಟಿಎಂಸಿ ನೀರು ಅಗತ್ಯವಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುವ ಕೆಲಸ ಈ ಭಾಗದ ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಮಾಡಬೇಕು. ನೀರು ಖಾಲಿ ಆಗುವ ಮುಂಚೆಯೇ ನಿರ್ಧಾರ ತೆಗೆದುಕೊಳ್ಳಬೇಕು ವಿನಹ ನೀರು ಖಾಲಿ ಆದ ನಂತರ ರಾಜ್ಯ ಸರ್ಕಾರ ಯೋಚಿಸುತ್ತಿದೆ.
    ಯಳವತ್ತಿ, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts