ಕೋಮುವಾದಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಿ; ಬಹುತ್ವ ಕರ್ನಾಟಕ ವೇದಿಕೆಯಿಂದ ಪ್ರತಿಭಟನೆ

12042022 sindhanoor protest
Published on

ಸಿಂಧನೂರು: ಧಾರವಾಡದ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ವ್ಯಾಪಾರಿ ನಬೀಸಾಬ್ ಮೇಲೆ ಗೂಂಡಾಗಿರಿ ಮಾಡಿದ ಕೋಮುವಾದಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಬಹುತ್ವ ಕರ್ನಾಟಕ ವೇದಿಕೆ ತಾಲೂಕು ಘಟಕ ನಗರದ ತಾಲೂಕು ಆಡಳಿತ ಸೌಧದ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.

ಕೋಮುವಾದಿ ಸಂಘಟನೆಗಳು ದಲಿತ, ಶೂದ್ರ ಹಾಗೂ ಹಿಂದುಳಿದ ವರ್ಗದ ಯುವಕರಿಗೆ ಧರ್ಮದ ನಶೆ ಏರಿಸಿ, ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಕೋಮುವಾದಿ ಗೂಂಡಾಗಿರಿಗೆ ಸರ್ಕಾರ ಪ್ರೇರಪಣೆ ನೀಡುತ್ತಿದೆ. ಕೋಮುವಾದಿ ಗೂಂಡಾ ಸಂಘಟನೆಗಳನ್ನು ನಿಷೇಧಿಸಬೇಕು. ಶಾಂತಿ, ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆ ಕಾಪಾಡಬೇಕೆಂದು ಆಗ್ರಹಿಸಿದರು.

ಸಂಚಾಲಕರಾದ ನಾಗರಾಜ ಪೂಜಾರ್, ಅಶೋಕ ನಂಜಲದಿನ್ನಿ, ಮಂಜುನಾಥ ಗಾಂಧಿನಗರ, ವೀರೇಶ ಬಾವಿಮನಿ, ವೆಂಕಟೇಶ ಗಿರಿಜಾಲಿ, ಅಮೀನ್ ಪಾಷಾ ದಿದ್ದಿಗಿ, ಗೋಪಾಲಕೃಷ್ಣ, ದಾವಲದಾಸ ದೊಡ್ಮನಿ, ಶ್ರೀನಿವಾಸ ಬುಕ್ಕನಹಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net