More

    ಸಿಂಧನೂರಿನ ಕಲಾಕೃತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ

    ಎ4 ಸೀಟ್‌ನಲ್ಲಿ 548 ವರ್ಲಿ ಚಿತ್ರ ಬಿಡಿಸಿದ ಉಮೇಶ ಪತ್ತಾರ

    ಸಿಂಧನೂರು: ಲಾಕ್‌ಡೌನ್ ಸಮಯದಲ್ಲಿ ಸಿಂಧನೂರಿನ ಯುವಕನೊಬ್ಬ ಬಿಡಿಸಿದ ಒಂದು ಕಲಾಕೃತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ. ಮೂಲತ ವೃತ್ತಿಪರ ಚಿತ್ರ ಕಲಾವಿದ ಉಮೇಶ ಪತ್ತಾರ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪುರಸ್ಕಾರ ಪಡೆದಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಬಿಡಿಸಿದ ಕಲಾಕೃತಿ ವಿಶೇಷತೆ ಪಡೆದುಕೊಂಡಿದೆ. ಎ4 ಅಳತೆಯ ಡ್ರಾಯಿಂಗ್ ಸೀಟ್‌ನಲ್ಲಿ ಬುಡಕಟ್ಟು ಜನಾಂಗದ ದೇಸಿಯ ಜಾನಪದ ಶೈಲಿಯ 548 ವರ್ಲಿ ಚಿತ್ರಗಳನ್ನು ಬಿಡಿಸಿ ಹರಿಯಾಣದಲ್ಲಿರುವ ಕಚೇರಿಗೆ ಇಮೇಲ್ ಮೂಲಕ ಇಂಡಿಯನ್ ಬುಕ್ ಆಫ್ ರೇಕಾರ್ಡ್‌ಗೆ ಕಳಿಸಲಾಗಿತ್ತು. ಕಲಾಕೃತಿ ಪರಿಶೀಲಿಸಿದ ನಂತರ ವಿಶೇಷ ಸಾಧನೆಯೆಂದು ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts