More

    ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿ, ಮುಖ್ಯಶಿಕ್ಷಕ ಕೆ.ಪಿ. ದಿನೇಶ ಸಲಹೆ

    ಸಿಂಧನೂರು: ಪ್ರಜಾಪ್ರಭುತ್ವದ ಮೌಲ್ಯಗಳನ್ನು ದೇಶದ ಪ್ರತಿಯೊಬ್ಬರೂ ತಿಳಿಯಬೇಕು ಎಂದು ತಿಡಿಗೋಳ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಕೆ.ಪಿ.ದಿನೇಶ ಹೇಳಿದರು.

    ತಾಲೂಕಿನ ತಿಡಿಗೋಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ 2023-24ನೇ ಸಾಲಿನ ಶಾಲಾ ಸಂಸತ್‌ಗೆ ಚುನಾವಣೆ ಮೂಲಕ ಆಯ್ಕೆಯಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

    ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅದರ ಆಶಯದಂತೆ ನಮ್ಮರಾಷ್ಟ್ರವನ್ನು ಸರ್ವ ಸಮಾನತೆ ದೇಶವನ್ನಾಗಿಸಲು ನಾವೆಲ್ಲರೂ ನಮ್ಮ ಪಾಲಿನ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಬೇಕು ಎಂದರು.

    ಶಾಲಾ ಸಂಸತ್ತಿಗೆ ಆಯ್ಕೆ: ಶಿವರಾಜ(ರಾಷ್ಟ್ರಪತಿ), ಈರಮ್ಮ ವೆಂಕೋಬ (ಪ್ರಧಾನ ಮಂತ್ರಿ), ಭೀಮೇಶ (ಉಪಪ್ರಧಾನಮಂತ್ರಿ), ವರುಣ್ (ಗ್ರಂಥಾಲಯ ಮಂತ್ರಿ), ಚೈತ್ರಾ ನಾಗಪ್ಪ (ಮಹಿಳಾ ಮಂತ್ರಿ), ಪೂರ್ಣಿಮಾ ಹನುಮಂತ (ಕ್ರೀಡಾ ಮಂತ್ರಿ), ಪೂರ್ಣಿಮಾ ಬಲವಂತಗೌಡರ್ (ಸಾಂಸ್ಕೃತಿಕ ಮಂತ್ರಿ), ಶಿವರಾಜ ಭುರಪ್ಪ (ಸ್ಕೌಟ್ ಗೈಡ್ ಮಂತ್ರಿ), ಕವನಾ (ಸ್ವಚ್ಛತಾ ಮಂತ್ರಿ), ಚೇತನ (ಪ್ರವಾಸ ಮಂತ್ರಿ), ಮಹೇಶ ಹುಸೇನಪ್ಪ (ಹಣಕಾಸು ಮಂತ್ರಿ), ವೀರಭದ್ರ(ಆಹಾರ ಮಂತ್ರಿ), ಅಶೋಕ (ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ) ಈರಮ್ಮ ನಿಂಗಪ್ಪ (ತೋಟಗಾರಿಕೆ ಮಂತ್ರಿ)ಯಾಗಿ ಆಯ್ಕೆಯಾದರು.

    ವಿದ್ಯಾರ್ಥಿಗಳಿಗೆ ದೇಣಿಗೆ

    ಬೆಂಗಳೂರಿನ ಚಾರಿಟಿ ಕಮ್ಯುನಿಟಿ ಮಮತಾ ಹಾಗೂ ಸದಸ್ಯರು ಶಾಲಾ ಮಕ್ಕಳಿಗೆ 10 ಸಾವಿರ ರೂ.ಮೌಲ್ಯದ ನೋಟ್ ಪುಸ್ತಕಗಳನ್ನು ದೇಣಿಗೆ ನೀಡಿದರು. ಬೆಂಗಳೂರಿನ ಆರ್‌ಬಿಐ ಲೇಔಟ್ ನಿವಾಸಿಗಳಾದ ಕುಮಾರಿ ತನ್ವಿ ಕುದುವಳ್ಳಿ 10 ಸಾವಿರ ರೂ. ಮೌಲ್ಯದ ಜಾಮಿಟ್ರಿ ಬಾಕ್ಸ್ ಗಳನ್ನು ಶಾಲಾ ಮಕ್ಕಳಿಗೆ ದೇಣಿಗೆ ನೀಡಿದರು.

    ಶಿಕ್ಷಕರಾದ ನಾಗವೇಣಿ, ಜಯಲಕ್ಷ್ಮೀ, ನೀಲನಗೌಡ, ನಾಗಪ್ಪ ಕೆಲ್ಲೂರು, ಸಂಜೀವ್ ಬಲವಂತಗೌಡ, ಬಸಪ್ಪ ಹ್ಯಾಟಿ, ಬಿ. ಕೊಟ್ರೇಶ್, ಸೋಮಣ್ಣ, ವಿ.ಸತ್ಯಮ್ಮ, ಅಕ್ಕಮಹಾದೇವಿ, ಶಿವಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts