More

    ಮುಸ್ಲಿಮರಿಗೆ ಪ್ರಶಸ್ತಿಕೊಡಲ್ಲ ಎಂದುಕೊಂಡಿದ್ದೆ, ಪ್ರಧಾನಿ ನನ್ನ ಅಭಿಪ್ರಾಯ ಬದಲಿಸಿದರು: ಪದ್ಮಶ್ರೀ ಪ್ರಶಸ್ತಿ ವಿಜೇತ

    ನವದೆಹಲಿ: ಹೆಸರಾಂತ ಬಿದ್ರಿವೇರ್​ ಕಲಾವಿದ ಕರ್ನಾಟಕ,ರಶೀದ್ ಅಹ್ಮದ್ ಖಾದ್ರಿ, ಪದ್ಮಶ್ರೀ ಪ್ರಶಸ್ತಿ ಪಡೆಯಲು ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದರು ಎಂದು ಹೇಳಿದರು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಶಸ್ತಿಯನ್ನು ಪಡೆಯುವ ಭರವಸೆಯನ್ನು ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ. ನಂತರ ಪ್ರಧಾನಿಯನ್ನು ಹೊಗಳಿದ್ದಾರೆ.

    ಈ ವರ್ಷ ಪ್ರಶಸ್ತಿ ಪಡೆದ ಕರ್ನಾಟಕದ ಎಂಟು ವ್ಯಕ್ತಿಗಳಲ್ಲಿ ಕಲಾವಿದ ಖಾದ್ರಿ ಕೂಡ ಒಬ್ಬರಾಗಿದ್ದು “ನಾನು ಈ ಪ್ರಶಸ್ತಿಯನ್ನು ಪಡೆಯಲು 10 ವರ್ಷಗಳಿಂದ ಪ್ರಯತ್ನಿಸಿದೆ. ಬಿಜೆಪಿ ಸರ್ಕಾರ ಬಂದಾಗ ನಾನು ಈ ಪ್ರಶಸ್ತಿಯನ್ನು ಪಡೆಯುವುದಿಲ್ಲ ಎಂದು ನಾನು ಭಾವಿಸಿದ್ದೆ. ಏಕೆಂದರೆ ಬಿಜೆಪಿ ಎಂದಿಗೂ ಮುಸ್ಲಿಮರಿಗೆ ಏನನ್ನೂ ನೀಡುವುದಿಲ್ಲ ಎಂದುಕೊಂಡಿದ್ದೆ. ಪ್ರಧಾನಿ ಮೋದಿ ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡುವ ಮೂಲಕ ನನ್ನ ಅಭಿಪ್ರಾಯ ಬದಲಿಸಿದರು” ಎಂದು ಹೇಳಿದರು.

    ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಕಲಾಕೃತಿಗಳಿಗಾಗಿ ಶ್ರೀ ಶಾ ರಶೀದ್ ಅಹ್ಮದ್ ಖಾದ್ರಿ ಅವರಿಗೆ ಪದ್ಮಶ್ರೀ ಪ್ರದಾನ ಮಾಡಿದರು. ಬಿದ್ರಿ ಕರಕುಶಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿ, ಅವರು ಅನೇಕ ಬಿದ್ರಿ ವೇರ್​ಗಳನ್ನು ನಿರ್ಮಿಸುತ್ತಾ ಬಂದಿದ್ದು ನೂರಾರು ಕಲಾವಿದರಿಗೆ ತರಬೇತಿ ನೀಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts