More

    58 ಸೋಂಕಿತರು ಕೋವಿಡ್ ಕೇಂದ್ರಕ್ಕೆ; ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವ

    ಸಿಂಧನೂರು: ತಾಲೂಕಿನ ಕರೊನಾ ಸೋಂಕಿತರನ್ನು ಕೋವಿಡ್ ಕೇಂದ್ರಕ್ಕೆ ಕರೆ ತರಲು ತಹಸೀಲ್ದಾರ್ ಮಂಜುನಾಥ ಭೋಗಾವತಿ ತಂಡ ವಿಶೇಷ ಕಾಳಜಿ ವಹಿಸಿದ್ದು ಮಂಗಳವಾರ ಹಾಗೂ ಬುಧವಾರ 58 ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಕರೆತರಲಾಗಿದೆ.

    ಸೋಂಕಿತರು ಹೋಂ ಕ್ವಾರಂಟೈನ್ ಆಗುತ್ತಿದ್ದರಿಂದ ಹಳ್ಳಿಗಳಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿದ್ದವು. ಈ ತಂಡ ಆಯಾ ಗ್ರಾಮಗಳಿಗೆ ತೆರಳಿ ಸೋಂಕಿತರು, ಅವರ ಕುಟುಂಬದವರಿಗೆ ಮನವರಿಕೆ ಮಾಡಿ, ಆತ್ಮಸ್ಥೈರ್ಯ ತುಂಬಿ ಕೋವಿಡ್ ಕೇಂದ್ರಕ್ಕೆ ಕರೆ ತರುತ್ತಿದ್ದಾರೆ.

    ಬೂತಲದಿನ್ನಿ, ದೇವರಗುಡಿ, ರಾಮಾ ಕ್ಯಾಂಪ್‌ನಲ್ಲಿ ಮಂಗಳವಾರ 17 ಸೋಂಕಿತರನ್ನು, ಮುಳ್ಳೂರು(ಇಜೆ), ಶಾಂತಿನಗರ ಹಾಗೂ ಬೂದಿಹಾಳ ಕ್ಯಾಂಪ್‌ನಲ್ಲಿ ಬುಧವಾರ 41 ಸೋಂಕಿತರನ್ನು ಮನವೊಲಿಸಿ ಸಿಂಧನೂರಿನ ಕೋವಿಡ್ ಕೇಂದ್ರಕ್ಕೆ ಸೇರಿಸಲಾಗಿದೆ. ಆಯಾ ಗ್ರಾಮವಾರು ಅಧಿಕಾರಿಗಳ ತಂಡ ಸೋಂಕಿತರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ.


    ರಾಯಚೂರು ಡಿಸಿ ಸೂಚನೆ ಮೇರೆಗೆ ತಾಲೂಕಿನ ಎಲ್ಲ ಹಳ್ಳಿಗಳಿಗೆ ಭೇಟಿ ನೀಡಿ, ಕರೊನಾ ಸೋಂಕಿತರನ್ನು ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತರು, ಅವರ ಮನೆಯವರ ಮನವೊಲಿಸಿ ಕೋವಿಡ್ ಕೇಂದ್ರಕ್ಕೆ ಕರೆ ತರಲಾಗುತ್ತಿದೆ. ಜನ ಜಾಗೃತರಾಗಬೇಕು. ಮನೆಯಲ್ಲೇ ಇರಬೇಕು. ಕಡ್ಡಾಯ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು.
    | ಮಂಜುನಾಥ ಭೋಗಾವತಿ ಸಿಂಧನೂರು ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts