More

    ಶಿವತತ್ವದಿಂದ ಸಾತ್ವಿಕ ಬದುಕು

    ಸಿಂದಗಿ: ಗುರು ತೋರಿದ ಸನ್ಮಾರ್ಗ ಆಶ್ರಯಿಸಿ ನಡೆದರೆ ಭವಿಷ್ಯದ ದಾರಿದೀಪ ತಾನಾಗಿಯೇ ಪ್ರಜ್ವಲಿಸುತ್ತದೆ ಎಂದು ಯಲಬುರ್ಗಾದ ಬಸವಾಶ್ರಮ ವನಗೇರಿ ಶ್ರೀಮಠದ ಯಶವಂತ ಶರಣರು ಹೇಳಿದರು.

    ಸಿಂದಗಿ ತಾಲೂಕಿನ ಯಂಕಂಚಿ ಹಿರೇಮಠದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ, ಶಿವದೀಕ್ಷೆ, ಜಾಗರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ನಾವೆಲ್ಲರೂ ಶಿವತತ್ವ ಪಾಲಿಸಿಕೊಂಡು ಸಾತ್ವಿಕ ಮಾರ್ಗದತ್ತ ಪ್ರಯಾಣಿಸಿ ಶಿವಮುಕ್ತಿ ಕಾಣಬೇಕು ಎಂದರು.

    ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ, ಪರಮಾನಂದ ಬಗಲಿ, ಕ್ರೀಡಾಪಟು ಮಲ್ಲನಗೌಡ ಬಿರಾದಾರ ಮಾತನಾಡಿದರು. ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿಕ್ಕ ಸಿಂದಗಿ ಹಿರೇಮಠದ ಮಲ್ಲಿಕಾರ್ಜುನಯ್ಯ ಸ್ವಾಮಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಬಂದಾಳ ಗ್ರಾಪಂ ಸದಸ್ಯರು ಅರವಿಂದಗೌಡ ರಾಮಗೊಂಡ, ರಮೇಶ ಭಾವಿಮನಿ, ಶಂಕರಗೌಡ ಖೈನೂರ, ಸಂತೋಷ ಹಡಗಿನಾಳ, ಸಾಹಿತಿ ಈರನಗೌಡ ಬಿರಾದಾರ(ಹಂದಿಗನೂರ), ಮಾಹಾಂತೇಶ ನಾಗೋಜಿ, ಸೈನಾಜ ಮಸಳಿ, ಶ್ರೀಶೈಲ ಪತ್ತಾರ ಮತ್ತಿತರರಿದ್ದರು.

    ಶಿಕ್ಷಕ ಶಿವು ಹಡಗಲಿ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಚಂದ್ರಗೌಡ ಬಿರಾದಾರ ನಿರೂಪಿಸಿದರು. ನಂತರ ಸಿಂದಗಿಯ ಸಪ್ತಸ್ವರ ಹಾಗೂ ಗ್ರಾಮದ ಕಲಾವಿದರಿಂದ ರಾತ್ರಿ ಭಜನೆ, ಸಂಗೀತ ಸುಧೆಯೊಂದಿಗೆ ಶಿವನಾಮ ಸ್ಮರಣೆ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts