More

  ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ

  ಸಿಂದಗಿ: ಮತಕ್ಷೇತ್ರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತ ಪ್ರತಿ ಹಳ್ಳಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದು ಶಾಸಕ ಎಂ.ಸಿ. ಮನಗೂಳಿ ಹೇಳಿದರು.

  ತಾಲೂಕಿನ ಬೋರಗಿಯಲ್ಲಿ ಜಿಪಂ ಲೆಕ್ಕ ಶೀರ್ಷಿಕೆ 5054-03-337-0-059ರ ಯೋಜನೆಯಡಿ 20 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

  ಮೂರು ವರ್ಷಗಳಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

  ಗ್ರಾಮದ ಮುಖಂಡ ಶಿವಣ್ಣ ಕೋಠಾರಗಸ್ತಿ ಮಾತನಾಡಿ, ಸಿಂದಗಿ ಕ್ಷೇತ್ರಕ್ಕೆ ಎಂ.ಸಿ. ಮನಗೂಳಿ ಅವರು ಆಯ್ಕೆಯಾದಾಗಲೊಮ್ಮೆ ಸಚಿವರಾಗಿ ಶಾಶ್ವತ ಕಾಮಗಾರಿಗಳನ್ನು ಕೈಕೊಂಡು ಜನಮಾನಸರಾಗಿದ್ದಾರೆ. ಈ ಬಾರಿ ಕೆಲವೇ ತಿಂಗಳು ಸಚಿವರಾದರೂ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿದ್ದಾರೆ. ಇವರ ಅವಧಿಯಲ್ಲಿ ಬಂದಂತ ಅನುದಾನ ಮುಂಬರುವ ಯಾವ ಶಾಸಕರಿಂದಲೂ ತರಲು ಅಸಾಧ್ಯ ಎಂದರು.

  ಕೆಆರ್‌ಐಡಿಎಲ್ ಇಂಜಿನಿಯರ್ ಪ್ರುಲ್ ಕ್ಯಾತನ್, ಮುಖಂಡರಾದ ಪ್ರಭು ದುದ್ದಣಗಿ, ಶರಣಪ್ಪ ಡಂಬಳ, ಷಣ್ಮುಖ ತೆಲಗಾಣಿ, ವಿಶ್ವನಾಥ ಹಗಟಗಿ, ಶಂಕರ ಬೋರಗಿ, ಗೋಲ್ಲಾಳ ಡಂಬಳ, ಬಸವರಾಜ ಕಾಳಗಿ, ಬಸವರಾಜ ಯಲಗೋಡ, ಕಾಸಯ್ಯ ಸಾಲಿಮಠ, ಕಲ್ಲಪ್ಪ ಕೊಂಡಗೂಳಿ, ಭೀಮಣ್ಣ ಇಂಚಗೇರಿ, ಸಿದ್ದರಾಮ ರಠಗಲ್ಲ, ವೀರಭದ್ರ ಶಾಬಾದಿ, ಈರಣ್ಣ ರಠಗಲ್ಲ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts