More

    ಶಿವರಾತ್ರಿ ಆಚರಣೆಗೆ ಸನ್ನದ್ಧ

    ಗದಗ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ, ಲಕ್ಷೆ್ಮೕಶ್ವರದ ಮುಕ್ತಿಮಂದಿರ, ಗದಗಿನ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನ ಸೇರಿ ಜಿಲ್ಲೆಯ ಪ್ರಮುಖ ಶಿವನ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ನಡೆಯಲಿವೆ.

    ನಗರದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿಯಂದು ಇಲ್ಲಿ ಅಹೋರಾತ್ರಿ ಯಾಮಿ ಪೂಜಾ ಕೈಂಕರ್ಯ ನಡೆಯಲಿದೆ. ಶಿವರಾತ್ರಿ ದಿನ ಬೆಳಗ್ಗೆ 6 ರಿಂದ 9 ಗಂಟೆವರೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಎಳನೀರು ಅಭಿಷೇಕ ನಡೆಯುತ್ತದೆ. ಜಾಗರಣೆ ದಿನ ಭಕ್ತರು ಉಪವಾಸ ವ್ರತ ಮಾಡುತ್ತಿರುವುದರಿಂದ ಅಂದು ತ್ರಿಕೂಟೇಶ್ವರನಿಗೆ ಅಲಂಕಾರ ಮತ್ತಿತರ ಪೂಜಾ ಕಾರ್ಯ ನಡೆಯುವುದಿಲ್ಲ. ಮರುದಿನ ಅಮವಾಸ್ಯೆಯಂದು ರಾತ್ರಿ 10.30 ರಿಂದ ಬೆಳಗ್ಗೆ 5.30ರವರೆಗೆ ಅಹೋರಾತ್ರಿ ಪೂಜೆ ನಡೆಯಲಿದೆ.

    ಈ ದೇವಸ್ಥಾನದ ಆವರಣದಲ್ಲಿ ಸರಸ್ವತಿ ದೇವಾಲಯವಿದ್ದು, 11ನೇ ಶತಮಾನದಲ್ಲಿ ಇದನ್ನು ನಿರ್ವಿುಸಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಶೃಂಗೇರಿ ಶಾರದಾಂಬೆ ದೇವಸ್ಥಾನ ಹೊರತುಪಡಿಸಿ ಸರಸ್ವತಿಯ ದೇವಸ್ಥಾನ ತ್ರಿಕೂಟೇಶ್ವರ ದೇವಸ್ಥಾನದಲ್ಲಿದೆ. ಶಿವರಾತ್ರಿಯಂದು ಇಲ್ಲಿ ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಪೂಜೆ ನಡೆಯುತ್ತದೆ.

    ಹಬ್ಬದ ಸಂಭ್ರಮ: ಕರೊನಾ ಹಾವಳಿ ಕಡಿಮೆಯಾಗಿದ್ದು, ಶಿವರಾತ್ರಿ ಸಂಭ್ರಮ ಜಿಲ್ಲೆಯಲ್ಲಿ ಮನೆಮಾಡಿದೆ. ಜನರು ಫಲ-ಪುಷ್ಪ ಖರೀದಿಗೆ ಮಾರುಕಟ್ಟೆಗೆ ಧಾವಿಸಿದ್ದರಿಂದ ಬುಧವಾರ ನಗರದ ಗ್ರೇನ್ ಮಾರ್ಕೆಟ್, ಬ್ಯಾಂಕ್ ರೋಡ್, ಜನತಾ ಬಜಾರ್ ಹಾಗೂ ಟಾಂಗಾ ಕೂಟ ಭಾಗದಲ್ಲಿ ಜನಜಂಗುಳಿ ಕಂಡುಬಂದಿತು.

    ಹೂವು-ಹಣ್ಣು ದುಬಾರಿ

    ಕಲ್ಲಂಗಡಿ ಗಾತ್ರದ ಅನುಗುಣವಾಗಿ ಚಿಕ್ಕ ಗಾತ್ರದ ಹಣ್ಣಿಗೆ 50ರಿಂದ 100 ರೂಪಾಯಿ, ಸೇಬು ಕೆಜಿಗೆ 150ರಿಂದ 200 ರೂಪಾಯಿ, ದ್ರಾಕ್ಷಿ 60 ರೂಪಾಯಿ, ಖರ್ಜೂರ 60 ರೂಪಾಯಿ, ಬಾಳೆಹಣ್ಣು 30ರಿಂದ 50 ರೂಪಾಯಿ, ಚಿಕ್ಕು 40ರಿಂದ 60 ರೂಪಾಯಿ, ಕರಬೂಜ್ 30ರಿಂದ 100 ರೂಪಾಯಿ, ಸೇವಂತಿಗೆ ಹೂವು ಕೆಜಿಗೆ 300 ರೂಪಾಯಿ, ಮಲ್ಲಿಗೆ ಹೂವು 600 ರೂಪಾಯಿ, ಅಬಾಲಿ 1000-1200 ಹಾಗೂ ಸುಗಂಧಿ ಹೂವು 200 ರೂಪಾಯಿಗೆ ಮಾರಾಟವಾಯಿತು.

    ಕರೊನಾ ಹೊಡೆತದಿಂದ ಶಿವರಾತ್ರಿ ಹಬ್ಬಕ್ಕೆ ಕಳೆ ಇಲ್ಲ. ಹೂವು-ಹಣ್ಣುಗಳ ದರಗಳು ದುಪ್ಪಟ್ಟಾಗಿದ್ದು, ವ್ಯಾಪಾರ ಕುಸಿತ ಕಂಡಿದೆ. ಕಳೆದ ವರ್ಷ ಹೀಗೆ ಆಯಿತು. ಈ ವರ್ಷವಾದರೂ ಅನುಕೂಲ ಆಗಬಹುದು ಎಂದುಕೊಂಡರೆ ಅದೇ ಸ್ಥಿತಿ ಮುಂದುವರಿದಿದೆ. ಎಲ್ಲರಿಗೂ ಸಂಕಷ್ಟದ ಸಮಯವಿದು.

    ಫಾರೂಕ್ ಹುಬ್ಬಳ್ಳಿ, ಹೂವು-ಹಣ್ಣು ವ್ಯಾಪಾರಿ, ಗದಗ



    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts