More

    ಮುಂಬಯಿಯಂತೆ ಹುಬ್ಬಳ್ಳಿಯಲ್ಲೂ ಈ ಸಲ ಗಣಪತಿ ಮೂರ್ತಿ ನಾಲ್ಕೇ ಅಡಿ!

    ಹುಬ್ಬಳ್ಳಿ: ಅದ್ದೂರಿತನ ಮತ್ತು ಸೃಜನಶೀಲತೆಗೆ ಹೆಸರಾದ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಕರೊನಾ ಛಾಯೆ ಆವರಿಸಿದೆ. 15-20 ಅಡಿ ಎತ್ತರದ ದೊಡ್ಡ ದೊಡ್ಡ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಿ 11 ದಿನಗಳವರೆಗೆ ಸಂಭ್ರಮ-ಸಡಗರದಿಂದ ನಡೆಸುತ್ತಿದ್ದ ಗಣಪತಿಯ ಉತ್ಸವ ಈ ಸಲ ತುಸು ಮಂಕಾಗಲಿದೆ. ಹೆಚ್ಚು ಜನ ಸೇರುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ ಇತ್ಯಾದಿ ಕಟ್ಟಳೆಗಳು ಇರುವುದರಿಂದ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಸಹ ಸರಳ ರೀತಿಯಲ್ಲಿ ಉತ್ಸವ ಆಚರಿಸಲು ಮುಂದಾಗಿದ್ದಾರೆ.

    21 ಅಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಭಕ್ತರ ಗಮನ ಸೆಳೆಯುತ್ತಿದ್ದ ಇಲ್ಲಿಯ ದಾಜಿಬಾನ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಗಜಾನನ ಉತ್ಸವ ಸಮಿತಿ ಕೂಡ ಈ ಬಾರಿ ಮೂರ್ತಿಯ ಎತ್ತರ ಕಡಿಮೆ ಮಾಡಲು ನಿರ್ಧರಿಸಿದೆ. ಪ್ರತಿ ವರ್ಷ ಪಶ್ಚಿಮ ಬಂಗಾಳದ ಕಲಾಕಾರ ಸಂಜಯ ಪಾಲ್ ನೇತೃತ್ವದ ತಂಡದಿಂದ ಅತ್ಯಂತ ದೊಡ್ಡ ಮೂರ್ತಿ ಮಾಡಿಸಿ ಪ್ರತಿಷ್ಠಾಪಿಸಲಾಗುತ್ತಿತ್ತು. ಕಳೆದ 15 ವರ್ಷದಿಂದ 20 ಅಡಿಗಿಂತ ಎತ್ತರದ ಗಣೇಶ ಮೂರ್ತಿಯನ್ನೇ ಪ್ರತಿಷ್ಠಾಪಿಸಲಾಗಿತ್ತು.

    ಇದನ್ನೂ ಓದಿ: ಕಾದು ಕಾದು ಸುಸ್ತಾಗಿದ್ದ ಫ್ಯಾನ್ಸ್​​ಗೆ ಸಖತ್​ ಸರ್ಪ್ರೈಸ್​ ಕೊಡಲು ಗಣೇಶ್​ ರೆಡಿ..

    ಹುಬ್ಬಳ್ಳಿ ಕಾ ರಾಜಾಗೆ ಪ್ರೇರಣೆಯಾಗಿದ್ದ 22 ಅಡಿಯ ಮುಂಬೈ ಕಾ ರಾಜಾ (ಲಾಲ್‌ಬಾಗ್) ಗಣೇಶ ಮೂರ್ತಿಯ ಎತ್ತರ ಕೂಡ ಕಡಿಮೆ ಮಾಡಲು ಅಲ್ಲಿನ ಉತ್ಸವ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ನಿರ್ಧಾರ ಮಾಡಿರುವ ದಾಜಿಬಾನ ಪೇಟೆ ಸಮಿತಿಯವರು ಸುಮಾರು 4-5 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದಾರೆ. ಶ್ರೀ ಗಜಾನನ ಉತ್ಸವ ಸಮಿತಿ (ಹುಬ್ಬಳ್ಳಿ ಕಾ ರಾಜಾ) ಅಧ್ಯಕ್ಷ ಪಾಂಡುರಂಗ ಮೆಹರವಾಡೆ ‘ವಿಜಯವಾಣಿ’ಗೆ ಈ ವಿಷಯವನ್ನು ಖಚಿತಪಡಿಸಿದ್ದಾರೆ.

    1975ರಿಂದ ದಾಜಿಬಾನಪೇಟನಲ್ಲಿ ಶ್ರೀ ಗಣೇಶೋತ್ಸವ ಆಚರಿಸುತ್ತ ಬರಲಾಗಿದೆ. ಸದ್ಯದ ತೀರ್ಮಾನ ಈ ಸಾಲಿಗೆ ಮಾತ್ರ ಸೀಮಿತ. ಸರಳವಾಗಿ, ಭಕ್ತಿ ಸಮರ್ಪಣೆಗೆ ಕೊರತೆಯಾಗದಂತೆ ಉತ್ಸವ ಆಚರಿಸಿ, ಕರೊನಾ ಮಹಾಮಾರಿಯ ನಿವಾರಣೆಗಾಗಿ ಪ್ರಾರ್ಥಿಸಲಿದ್ದೇವೆ. ಎಲ್ಲ ಉತ್ಸವ ಸಮಿತಿಯವರು ಆಡಂಬರವಿಲ್ಲದೇ, ಕಾನೂನು ಚೌಕಟ್ಟಿನಲ್ಲೇ ಗಣೇಶನ ಹಬ್ಬ ಆಚರಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಇದನ್ನೂ ಓದಿ: ಶಾರೂಖ್​ಗೆ ರಾಷ್ಟ್ರ ಪ್ರಶಸ್ತಿ ಏಕೆ ಬರಲಿಲ್ಲ? ಅಭಿಮಾನಿಗಳು ಹೇಳ್ತಾರೆ ಕೇಳಿ …

    ಗರ್ಭಿಣಿಗೆ ಕರೊನಾ ಇಲ್ಲದಿದ್ದರೂ ಇದೆ ಅಂದ್ರು… 6 ದಿನದ ಹಸುಗೂಸನ್ನೇ ಬಲಿ ಪಡೆದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts